ಕನ್ನಡಿಗ ರಾಹುಲ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ಯಾಪ್ಟನ್ ಪಟ್ಟ

Soma shekhar
ಟೀಂ ಇಂಡಿಯಾ ಸಾಲಿಡ್ ಒಪನರ್ ಕನ್ನಡಿಗ ರಾಹುಲ್ 2020 ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಹೌದು, ಕನ್ನಡಿಗರಿಗೆಲ್ಲ ಸಂತಸದ ವಿಷಯವಿದು. ಆದರೆ ಇದರ ಹಿಂದಿರುವ ಪರಿಶ್ರಮ ಏನು, ಇತ್ತೀಚಿಗಿನ ಆಟದ ವೈಖರಿ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಆದ ಐಪಿಎಲ್ 13ನೇ ಆವೃತ್ತಿಯ ಟ್ವೆಂಟಿ- 20 ಕ್ರಿಕೆಟ್ ಟೂರ್ನಿಗಾಗಿ ಕಿಂಗ್ಸ್ ಇಲೆವೆನ್ ನಾಯಕರಾಗಿ ಕರ್ನಾಟಕದ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ರನ್ನು ನೇಮಕಗೊಳಿಸಲಾಗಿದೆ. ಈ ಮಧ್ಯೆ ರಾಹುಲ್‌ಗೆ ನಾಯಕ ಪಟ್ಟ ನೀಡಿರುವ ಹಿಂದಿರ ರಹಸ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
 
ಕಿಂಗ್ಸ್ ಇಲೆವನ್ ದೃಷ್ಟಿಕೋನದಿಂದ ಮಾತ್ರವಲ್ಲ, ಕೆಎಲ್ ರಾಹುಲ್ ಅವರ ವೈಯಕ್ತಿಕ ಬೆಳವಣಿಗೆ ಯಿಂದಲೂ ನಾಯಕತ್ವ ಸ್ಥಾನವನ್ನು ವಹಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಈ ಜವಾಬ್ದಾರಿಯು ಓರ್ವ ವ್ಯಕ್ತಿಯಾಗಿ ಬೆಳೆಯಲು ನಾಯಕ ಸ್ಥಾನವು ಸಹಾಯ ಮಾಡಲಿದೆ ಎಂದು ನಾನು ಭಾವಿಸುತ್ತೇನೆ. ಇದು ಈ ಪ್ರಕಾರದಲ್ಲಿ ಮಾತ್ರವಲ್ಲದೆ ಬೇರೆ ಪ್ರಕಾರದಲ್ಲೂ ತಮ್ಮ ಆಟವನ್ನು ಮತ್ತಷ್ಟು ನಿಕಟವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ" ಎಂದರು.
 
"ಡ್ರೆಸ್ಸಿಂಗ್ ಕೊಠಡಿಯಲ್ಲೂ ರಾಹುಲ್‌ಗೆ ಅತಿಯಾದ ಗೌರವವಿದ್ದು, ಭಾರತೀಯ ನಾಯಕ ಫ್ರಾಂಚೈಸಿ ಅಭಿವೃದ್ಧಿಗೂ ನೆರವಾಗುವ ನಂಬಿಕೆ ವ್ಯಕ್ತಪಡಿಸಿದರು. ಕೆ ಎಲ್ ರಾಹುಲ್ ಪ್ರಗತಿಯನ್ನು ಪರಿಗಣಿಸಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಫ್ರಾಂಚೈಸಿ ಕಟ್ಟಲು ಓರ್ವ ಭಾರತೀಯ ನಾಯಕ ಅತ್ಯಗತ್ಯ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ. 
 
ಕನ್ನಡಿಗ ಕೆ ಎಲ್ ರಾಹುಲ್ ಕಳೆದೆರಡು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆಟಗಾರರಿಂದಲೂ ಉತ್ತಮ ಗೌರವವನ್ನು ಹೊಂದಿದ್ದಾರೆ. ಈ ಪ್ರಕಾರ ನಮ್ಮ ಪಾಲಿಗೆ ಅತ್ಯುತ್ತಮ ಕ್ರಿಕೆಟಿಗನಾಗಿದ್ದಾರೆ ಎಂದು ಸಹ ರಾಹುಲ್ ಪರ ಬೌಲಿಂಗ್ ಮಾಡಿದ್ದಾರೆ.
 
 
 

Find Out More:

Related Articles: