ಮಹೀಳಾ ಸ್ನೇಹಿಗಳಾಗಿ ಬದಲಾದ ಕೆಎಸ್ ಆರ್ ಟಿಸಿ : ಅಷ್ಟಕ್ಕೂ ಅದು ಹೇಗೆ..?

Soma shekhar
ಕರ್ನಾಟಕದದ ಹೆಮ್ಮೆಯ ಸಾರಿಗೆ ಕೆಎಸ್ ಆರ್ ಟಿಸಿ ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ. ಕೆಸ್ ಎಸ್ ಆರ್ ಟಿಸಿ  ಇದುವರೆಗೂ ಮಾಟದಂತಹ ಒಂದು ಕಾರ್ಯವನ್ನು ಮಾಡಿದೆ. ಈಗ ಕೆಸ್ ಆರ್ ಟಿಸಿ ಬಸ್ ಗಳು ಮಹಿಳಾ ಸ್ನೇಹಿಯಾಗಿ ಮಹಿಳೆಯರ ಅನುಕೂಲಕ್ಕಾಗಿ ಒಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ  ಅಷ್ಟಕ್ಕೂ ಕೆಎಸ್ ಆರ್ ಟಿಸಿಯ ಆ ಕಾರ್ಯ ಏನು ಗೊತ್ತಾ..?


ಕೆ‌ ಎಸ್ ಆರ್‌ ಟಿ ಸಿ‌ಯ ಒಂದು ಅನುಪಯುಕ್ತ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದನ್ನು ' ಸ್ತ್ರೀ ‌ಶೌಚಾಲಯ' ಎಂದು ಹೆಸರಿಸಲಾಗಿದೆ. ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯನ್ನು ‌ಇಟ್ಟಿದೆ.



ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರ , ಬೆಂಗಳೂರು ರವರು ಸದರಿ ಶೌಚಾಲಯದ ವೆಚ್ಚವನ್ನು ಸಾಮಾಜಿಕ ಕಳಕಳಿ ( ಯೋಜನೆಯಡಿ ನೀಡಿರುತ್ತಾರೆ. ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ‌ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಿಮಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ.



ಶೌಚಾಲಯದ‌ ಸಂಪೂರ್ಣ ವೆಚ್ಚ ರೂ.12 ಲಕ್ಷಗಳಾಗಿದೆ.ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ‌ ಬಸ್ಸಿನಲ್ಲಿ ‌ನಿರ್ಮಿಸಲಾಗಿದೆ.



ನಿಗಮವು ಹಲವು ಮಹಿಳಾ ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ‌ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೊವಿಡ್ - 19 ಸಂದರ್ಭದಲ್ಲಿ ‌, ಸದರಿ‌ ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯದ‌ ಪ್ರಾರಂಭ ಮಾದರಿಯಾಗಲಿದೆ.



ಸ್ವಚ್ಛ ಭಾರತದ ಪರಿಕಲ್ಪನೆ ಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಯ ಪ್ರಯತ್ನ ಶ್ಲಾಘನೀಯ ಎಂದು ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ತಿಳಿಸಿದರು. ಇದೇ ರೀತಿಯಲ್ಲಿ ಅನುಪಯುಕ್ತ ಬಸ್ಸುಗಳನ್ನು ವಿವಿಧ ಯೋಜನೆಗಳಿಗೆ ಉಪಯೋಗಿಸಲ ಸಲಹೆ ನೀಡಿದರು.



ಕೆ ಎಸ್ ಆರ್ ಟಿ‌ ಸಿ ಯು ಅನುಷ್ಠಾನಗೊಳಿಸಿರುವ ನೂತನ‌ ಸ್ತ್ರೀ ಶೌಚಾಲಯವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಕೆ‌ಎಸ್ ಆರ್ ಟಿ‌ ಸಿ‌ಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ನಿರ್ದೇಶಕರಾದ ಡಾ.ರಾಮ್‌ನಿವಾಸ್ ಸಪೆಟ್, ಬಿಐಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಹರಿ‌ ಮರಾರ್, ನಿರ್ದೇಶಕರು ಕೆ ವೆಂಕಟೇಶ್ ರವರು ಉಪಸ್ಥಿತರಿದ್ದರು.

Find Out More:

Related Articles: