ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ ಎಚ್ಚರಿಕೆ ಏನು ಗೊತ್ತಾ..?
ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾವಿರಾರು ಜನರ ಬಲಿಯನ್ನು ಈಗಾಗಲೇ ಪಡೆದುಕೊಂಡಿದೆ.ಈ ಪರಿಸ್ಥಿತಿ ಇಡೀ ವಿಶ್ವದ ಎಲ್ಲಾ ರಾಷ್ಟಗಳಲ್ಲೂ ಕೂಡ ಮನೆಮಾಡಿದೆ ಇದರಿಂದಾಗಿ, ಎಲ್ಲಾ ರಾಷ್ಟ್ರಗಳು ತನ್ನ ಪ್ರಜೆಗಳ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚೀನಾ ಮಾತ್ರ ತನ್ನ ರಾಷ್ಟ್ರವನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುವ ಯೋಜನೆಯನ್ನು ಮಾಡುತ್ತಿದೆ ಇದಕ್ಕೆ ಚೀನಾ ಲಡಾಕ್ ನ ಗಲ್ವಾನದ ಗಡಿಯಲ್ಲಿ ಮಾಡಿದ ದಾಳಿಯೇ ಸಾಕ್ಷಿತಯಾಗಿದೆ. ಈ ಘಟನೆಯ ಕುರಿತು ಇಂದಿನ ಮನ್ ಕಿ ಬಾತ್ ಕಾರ್ಯ ಕ್ರಮದಲ್ಲಿ ಚೀನಾಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಆ ಎಚ್ಚರಿಕೆ ಏನು ಗೊತ್ತಾ…?
ಹೌದು ಭಾರತ ಗಡಿ ರಕ್ಷಣೆಗಾಗಿ ಯೋಧರ ಶೌರ್ಯ ಮತ್ತು ಜಾಗವನ್ನು ಮುಕ್ತಕಂಠದಿಂದ ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವು ಸ್ನೇಹಕ್ಕೂ ಬದ್ದ, ಸೆಣಸಾಟಕ್ಕೂ ಸಿದ್ದ ಎಂದು ಕುತಂತ್ರಿ ಚೀನಾಗೆ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗಡಿಯಲ್ಲಿ ನಮ್ಮ ವೀರಯೋಧರ ತಾಕತ್ತು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಅಂತೆಯೇ ದೇಶಕ್ಕಾಗಿ ಅವರ ತ್ಯಾಗವನ್ನು ಕಂಡು ಇಡೀ ದೇಶವೇ ಮೊಮ್ಮಲ ಮರುಗಿದೆ ದೇಶಾದ್ಯಂತ ಕೊರೊನಾ ಹಾವಳಿ ಮಿತಿ ಮೀರಿರುವ, ಪ್ರಕೃತಿ ವಿಕೋಪಗಳು ಹೆಚ್ಚಾಗಿರುವ ಹಾಗೂ ನೆರೆರಾಷ್ಟ್ರಗಳು ಸಮಸ್ಯೆಗಳನ್ನು ಸೃಷ್ಟಿಸಿರುವ ಸಂದರ್ಭಗಳಲ್ಲೇ ಮನ್ ಕಿ ಬಾತ್(ಮನದ ಮಾತು) ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ಈ ವಿಷಯಗಳನ್ನು ಪ್ರಧಾನಿ ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು.
ಇಂಡೋ-ಚೀನಾ ಗಡಿ ಭಾಗದಲ್ಲಿ ಭಾರತದ ಮೇಲೆ ವಕ್ರದೃಷ್ಟಿಯಿಂದ (ಚೀನಿ ಸೈನಿಕರಿಗೆ )ನೋಡಿದವರಿಗೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಅವರ ದೇಶಪ್ರೇಮ, ಶೌರ್ಯ ಮತ್ತು ತ್ಯಾಗವನ್ನು ಇಡೀ ದೇಶವೇ ಕೊಂಡಾಡಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿವೆ ಎಂದು ಮೋದಿ ಭಾವನಾತ್ಮಕವಾಗಿ ನುಡಿದರು.
ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಹುತಾತ್ಮರಾದ ನಮ್ಮ ಯೋಧರ ಕುಟುಂಬದಂತೆಯೇ ಎಲ್ಲ ಭಾರತೀಯರೂ ದುಃಖಿತರಾಗಿದ್ದಾರೆ ಎಂದು ಹೇಳಿದರು. ನಾವು ಸ್ನೇಹಕ್ಕೂ ಬದ್ದವಾಗಿದ್ದೇವೆ. ಅದೇ ರೀತಿ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವರನ್ನು ಸೆಣಸಾಟದಲ್ಲಿ ಮಣಿಸಲು ಕೂಡ ನಾವು ಸಿದ್ದರಿದ್ದೇವೆ ಎಂದು ಮೋದಿ ನರಿಬುದ್ದಿ ಚೀನಾಗೆ ಖಡಕ್ ವಾರ್ನಿಂಗ್ ನೀಡಿದರು.