
ಒಂದು ವರ್ಷ ಪೂರೈಸಿದ ಬಿಜೆಪಿ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೂ ಕಾಡಿದ ಸವಾಲುಗಳು ಯಾವುವು ಗೊತ್ತಾ..?
ಕರ್ನಾಟಕದಲ್ಲಿ 3ರಡನೇ ಬಾರಿಗೆ ಅಧಿಕಾರವನ್ನು ವಹಿಸಿಕೊಂಡ ಬಿಜೆಪಿ ಪಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ 1 ವರ್ಷವನ್ನು ಪೂರ್ಣಗೊಳಿಸಿದೆ. ಹಲವು ನಿರೀಕ್ಷೆಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಗೆ ಆರಂಭದಿಂದ ಈವರೆಗೂ ಸಾಲುಸಾಲುಗಳ ಎದುರಾಗಿ ಸರ್ಕಾರವನ್ನು ಕಷ್ಟಕ್ಕೆ ಸಿಲುಗಿಸಿದ್ದಂತೂ ಸುಳ್ಳಲ್ಲ ಇಷ್ಟದರೂ ಕೂಡ ಸರ್ಕಾರ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಒಂದು ವರ್ಷದ ಸರ್ಭಮಾಚರಣೆಯನ್ನು ಮಾಡುತ್ತಿದೆ. ಅಷ್ಡಕ್ಕೂ ಬಿಜೆಪಿ ಸರ್ಕಾರ ಎದುರಿಸಿದ ಆ ಸವಾಲುಗಳು ಯಾವುವು..ಗೊತ್ತಾ…?
ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ, ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ, ಇದೀಗ ಕೊರೋನಾ ಸಂಕಷ್ಟ ಹೀಗೆ ಸಾಲು ಸಾಲುಗಳ ಸವಾಲುಗಳು ಎದುರಾಗಿವೆ. ಒಂದೆಡೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಮತ್ತೊಂದೆಡೆ ಸ್ವಪಕ್ಷೀಯರಿಂದಲೇ ಅಸಹಕಾರ, ಇನ್ನೊಂದೆಡೆ ಭಿನ್ನಮತೀಯರ ಕಿರುಕುಳ ಹೀಗೆ ಕಳೆದ 12 ತಿಂಗಳ ಅವಧಿಯಲ್ಲಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿ ಸಾಕಷ್ಟು ಸಂಕಷ್ಟಗಳ ಕುರ್ಚಿಯಾಗಿಯೇ ಉಳಿದಿದೆ.
ರಾಜ್ಯದಲ್ಲಿ ಬಿಕ್ಕಟ್ಟುಗಳು ಎದುರಾದಾಗ ಉತ್ತಮವಾಗಿಯೇ ನಿರ್ವಹಿಸಿದರು ಆದರೆ, ಅಭಿವೃದ್ಧಿ ಅಗತ್ಯವಾದ ಬೆಂಬಲಗಳು ಸಿಗಲಿಲ್ಲ. ಈ ನಡುವೆ ಹೂಡಿಕೆದಾರರನ್ನು ಸೆಳೆಯರು ದಾವೋಸ್'ಗೆ ಭೇಟಿ ನೀಡಿದರು. ಬಜೆಟ್ ನಲ್ಲಿ ಮಾಡಿದ ಪ್ರಕರಣಗಳನ್ನು ಜಾರಿಗೆ ತರಲು ಪ್ರಯತ್ನಿಸಿದರಾದರೂ, ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸವಾಲಾಗಿ ಪರಿಣಮಿಸಿತು. ಇನ್ನು ಸಾಂಕ್ರಾಮಿಕ ರೋಗ ಭುಗಿಲೆದ್ದ ಬಳಿಕವಂತೂ ಅಭಿವೃದ್ಧಿಯೆಲ್ಲವನ್ನೂ ಪಕ್ಕಕ್ಕಿಟ್ಟಿರುವ ಸರ್ಕಾರ ಕೇವಲ ಸೋಂಕು ನಿಯಂತ್ರಣದತ್ತ ಮಾತ್ರ ಗಮನ ಹರಿಸುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ.
ಈ ನಡುವೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್'ಸಿ ಎನ್.ರವಿಕುಮಾರ್ ಅವರು, ಸಾಕಷ್ಟು ಸವಾಲುಗಳ ನಡುವೆಯೂ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಹ ಪೀಡಿತರಿಗೆ ನೆರವಿಗೆ ಹಣ ಬಿಡುಗಡೆ ಮಾಡಿದ್ದರಿಂದ ಹಿಡಿದು, ಸಾಂಕ್ರಾಮಿಕ ಸಮಯದಲ್ಲಿ ರೂ.2,200 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವವರೆಗೆ, ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಭೂಸುಧಾರಣಾ ಕಾಯ್ದೆ, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ಹೊರಡಿಸಿದ್ದು, ಕೊರೋನಾ ಪರಿಸ್ಥಿತಿ ನಿರ್ವಹಣೆಯಿಂದಾಗಿ ಸರ್ಕಾರ ಟೀಕೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಕೆಲ ವಾರಗಳಿಂದ ಸರ್ಕಾರದ ವಿರುದ್ಧ ಕೆಲ ವಿರೋಧಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ.