3ನೇ ಹಂತದ ಲಾಕ್ ಡೌನ್ ಕುರಿತು ಚಿಂತನೆ ನಡೆಸಿದ ಕೇಂದ್ರ ಸರ್ಕಾರ: ಈ ಕುರಿತು ನಾಳೆ ರಾಜ್ಯಗಳ ಮುಖ್ಯಂತ್ರಿಗಳ ಜೊತೆ ಚರ್ಚೆ
ವಿಶ್ವದಲ್ಲಿ ಕೊರೋನಾ ವೈರಸ್ ನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದ ತಪ್ಪಿಸಿಕೊಳ್ಳಲು ವಿಶ್ವದ ಎಲ್ಲಾ ದೇಶಗಳು ಲಾಕ್ ಡೌನ್ ನಲ್ಲಿ ಬಂದಿಯಾಗಿ, ಇದರಿಂದಾ ಸಾಕಷ್ಟು ಕಂಪನಿಗಳು ಕಾರ್ಖಾನೆಗಳು ನಮ್ಮ ತನ್ನ ಕೆಲಸವನ್ನು ಬಂದ್ ಮಾಡಿ ಮನೆತಯಿಂದಲೇ ಕೆಲಸಮಾಡುವಂತೆ ಹೇಳಿದೆ. ಅದರಂತೆ ಭಾರತದಲ್ಲೂ ಕೂಡ ಲಾಕ್ ಡೌನ್ ಘೋಷಣೆಯಾಗಿ ಎರಡು ತಿಂಗಳು ಕಳೆದರೂ ಕೂಡ ಕೊರೋನಾ ಸೋಂಕು ಕಡೆಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಈಗಾಗಲೇ ಹಾಗಾಗಿ 3ನೇ ಹಂತದ ಲಾಕ್ ಡೌನ್ ಮಾಡುವ ಎಲ್ಲಾ ಲಕ್ಷಣಗಳು ಇವೆ.
ಹೌದು ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ. ಆದಾಗ್ಯೂ 26 ಸಾವಿರ ಜನರಿಗೆ ಕೊರೋನಾ ವೈರಸ್ ಅಂಟಿದೆ. ಹೀಗಾಗಿ ಮೇ 3ರ ನಂತರ ಲಾಕ್ಡೌನ್ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎನ್ನುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ನಾಳೆ ಎಲ್ಲ ರಾಜ್ಯಗಳ ಸಿಎಂ ಜೊತೆ ಚರ್ಚೆ ನಡೆಸಲಿದ್ದಾರೆ.
ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಚರ್ಚೆ ನಡೆಸಲಿದ್ದಾರೆ. ಆಯಾ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಹೇಗಿದೆ? ಕೊರೋನಾ ತಡೆಗಟ್ಟಲು ಇನ್ನೂ ಏನೇನು ಮಾಡಬಹುದು? ಲಾಕ್ಡೌನ್ ಮುಂದುವರೆಸಿದರೆ ಏನಾಗಬಹುದು? ಆರ್ಥಿಕವಾಗಿ ಯಾವ ಪರಿಣಾಮಗಳು ಉಂಟಾಗಬಹುದು? ಲಾಕ್ಡೌನ್ ತೆರವುಗೊಳಿಸಿದರೆ ಏನಾಗಬಹುದು? ಲಾಕ್ಡೌನ್ ತೆರವುಗೊಳಿಸಿ ಕೊರೋನಾ ತಡೆ ಸಾಧ್ಯವೇ? ವಲಯವಾರು ಹಂತಹಂತವಾಗಿ ವಿನಾಯಿತಿ ನೀಡಿದರೆ ಹೇಗೆ? ಎಂಬಿತ್ಯಾದಿಗಳ ಬಗ್ಗೆ ಮೋದಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಲಾಕ್ಡೌನ್ ವಿಸ್ತರಣೆ ಕುರಿತು ನಾಳೆ ಯಾವುದೇ ಚರ್ಚೆ ನಡೆದರೂ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇನ್ನು, ಕೊರೋನಾ ನಿಯಂತ್ರಣ ಮಾಡಲು ಹಲವು ರಾಜ್ಯಗಳಲ್ಲಿ ತೀವ್ರ ಆರ್ಥಿಕ ಹಿನ್ನಡೆ ಎದುರಿಸುತ್ತಿವೆ. ಹೀಗಾಗಿ ಕೆಲ ರಾಜ್ಯಗಳು ಕೆಂದ್ರದ ಎದುರು ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್ ಪ್ರಕರಣಗಳಿ ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್ ಕೇಸ್ಗಳಿವೆ. 824 ಜನರು ಮೃತಪಟ್ಟಿದ್ದಾರೆ. 5,803 ಜನರು ಕೊರೋನಾ ಮುಕ್ತರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೀಗಾಗಿ ಲಾಕ್ಡೌನ್ ಮುಂದುವರಿದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ತಜ್ಞರು.