
ಕೊರೋನಾ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆ ಸಂದೇಶ ಏನು ಗೊತ್ತಾ..?
ಕೊರೋನಾ ವೈರಸ್ ಇಡೀ ವಿಶ್ವದ ಎಲ್ಲಾ ದೇಶಗಳಲ್ಲೂ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಮುಂದೆ ಸಾಗಿದೆ. ಇದರಿಂದ ಇಡೀ ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೋಟಿಗೆ ಮೀರಿದೆ, ಹಾಗೂ ಲಕ್ಷಾಂತರ ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಹೀಗಾಗಲೇ ಕೆಲವು ರಾಷ್ಟಗಳಲ್ಲಿ ಕೊರೋನಾ ವೈರಸ್ ತನ್ನ ಭೀಕರತೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಸಾಕಷ್ಟು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಒಂದು ಎಚ್ಚರಿಕೆಯ ಸಂದೇಶವೊಂದನ್ನು ತಿಳಿಸಿದೆ. ಅಷ್ಟಕ್ಕೂ ಆ ಎಚ್ಚರಿಕೆಯ ಸಂದೇಶ ಏನು..?
ಮಹಾಮಾರಿ ಕರೊನಾ ವೈರಸ್ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತೊಂದು ಮಹತ್ವದ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ಈಗಲಾದರೂ ಜನರು ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದೆ. ಡಬ್ಲ್ಯುಎಚ್ ಹೇಳುವ ಪ್ರಕಾರ ಕರೊನಾ ಇನ್ನೂ ತೀವ್ರ ಸ್ವರೂಪವನ್ನು ಪಡೆದುಕೊಂಡಿಲ್ಲ ಎಂದು ಎಚ್ಚರಿಸಿದೆ.
ಡಬ್ಲ್ಯುಎಚ್‌ಒ ಮಹಾನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ವಿಶ್ವದ ಬಹುತೇಕ ಭಾಗಗಳಲ್ಲಿ ಕರೊನಾ ವೈರಸ್ ಮೇಲೆ ಇನ್ನು ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ವೈರಸ್ ಕೆಟ್ಟ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಕಳೆದ ಆರು ವಾರಗಳಲ್ಲಿ ಜಾಗತಿಕವಾಗಿ ಕರೊನಾ ವೈರಸ್ ಪ್ರಕರಣಗಳು ದ್ವಿಗುಣವಾಗಿದೆ. ಇದೀಗ ವಿಶ್ವಾದ್ಯಂತ ಒಟ್ಟು 12 ಮಿಲಿಯನ್ ಖಚಿತ ಪ್ರಕರಣಗಳು ದಾಖಲಾಗಿವೆ. ಇಲ್ಲದೆ, ಕರೊನಾ ಮೃತ್ಯೂಕೂಪಕ್ಕೆ ಈಗಾಗಲೇ 550,000 ಮಂದಿ ಬಲಿಯಾಗಿದ್ದಾರೆ. ಅಮೆರಿಕ, ಬ್ರೆಜಿಲ್ ಹಾಗೂ ಭಾರತದಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ದೇಶಗಳಿಂದ ಯುನೈಟೆಡ್ ಕಿಂಗ್ಡಮ್ಗೆ ಮರಳುವ ಅಥವಾ ಭೇಟಿ ನೀಡುವ ಜನರಿಗೆ ಕ್ಯಾರೆಂಟೈನ್ ನಿಯಮಗಳಲ್ಲಿ ಇಂದಿನಿಂದ ಸಡಿಲಗೊಳಿಸಿರುವುದರ ಬೆನ್ನಲ್ಲೇ ಘೆಬ್ರೆಯೆಸಸ್ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಯುಕೆ ಸರ್ಕಾರ ಕೇಂದ್ರಾಡಳಿ ಪ್ರದೇಶ ಹಾಗೂ ದೇಶಗಳು ಸೇರಿದಂತೆ 72 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇಲ್ಲಿಂದ ಯುಕೆಗೆ ಬರುವ ಜನರು 14 ದಿನಗಳವರೆಗೆ ಸ್ವಯಂ ಕ್ವಾರಂಟೈನ್ನಲ್ಲಿ ಇರುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಕರೊನಾ ವೈರಸ್ ವಿಶ್ವದ ಕೆಲ ಶ್ರೀಮಂತ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಿದೆ. ಕರೊನಾ ಕಟ್ಟಿಹಾಕಲು ಪ್ರತ್ಯೇಕತೆ, ಪರೀಕ್ಷೆ, ಪ್ರಕರಣಗಳ ಚಿಕಿತ್ಸೆ ಮತ್ತು ಕ್ವಾರಂಟೈನ್ ಸಂಪರ್ಕ ಮುಂತಾದವುಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದಾಗಲೇ ಕರೊನಾವನ್ನು ನಿಯಂತ್ರಣಕ್ಕೆ ತರಬಹುದು. ಆದರೆ, ಅನೇಕ ರಾಷ್ಟ್ರಗಳಲ್ಲಿ ವೈರಸ್ ಕೆಟ್ಟ ಸ್ವರೂಪಕ್ಕೆ ತಿರುಗಿದೆ ಎಂದರು.