ಸೋನು ಸೂದುಗೆ ವಿಶ್ವ ಸಂಸ್ಥೆ ನೀಡಿದ ಪ್ರಶಸ್ತಿ ಯಾವುದು ಗೊತ್ತಾ..?

Soma shekhar
ಕೊರೋನಾ ದೇಶದಲ್ಲಿ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನು ಎರಡು ತಿಂಗಳೂಗಳ ಕಾಲ ಲಾಕ್ ಡೌನ್ ಮಾಡಲಾಯಿತು ಈ ಸಂದರ್ಭದಲ್ಲಿ  ಉದ್ಯೋಗವಕಾಶವನ್ನು ಅರಸಿಕೊಂಡು ಬೇರೆ ಬೇರೆ ರಾಜ್ಯಗಳಿಗೆ ಹಾಗೂ ಮಹಾ ನಗರಗಳಿಗೆ ಹೋಗಿದ್ದ ಅನೇಕ ಕಾರ್ಮಿಕರಿಗೆ ಅಲ್ಲಿ ಕೆಲಸವೂ ಇಲ್ಲದೆ  ಇರಲು ಸೂರು ಇಲ್ಲದೆ  ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಯಿತು. ಅದರಲ್ಲಿ ಅದೆಷ್ಟೋ ಜನ  ನೆಡೆದುಕೊಂಡೇ ತಮ್ಮ ಊರುಗಳನ್ನು ಸೇರಿದ್ದರು. ಇದರಲ್ಲಿ ಅನೇಕ ಮಂದಿ ರಸ್ತೆ ಮದ್ಯೆಯೇ ಪ್ರಾಣವನ್ನು ಬಿಟ್ಟಿದ್ದರು.
ಇಂತಹ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಕಂಡೂ ಕಾಣದಂತೆ ಜಾಣ ಕುರುಡಾಗಿತ್ತು. ಇಂತಹ ಸಂದರ್ಭದಲ್ಲಿ ಅನೇಕ ಮಂದಿ ಸಹೃದಯಿಗಳು  ಕಾರ್ಮಿಕರಿಗೆ ಅನ್ನ ಆಹಾರಗಳನ್ನು ನೀಡಿದರು. ಅಂತಹ ಸಹೃದಯಿಗಳಲ್ಲಿ ಖ್ಯಾತ ಸಿನಿಮಾ ಜಗತ್ತಿನ ತಾರೆ ಸೋನು ಸೌದು ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಅನೇಕ ಮಂದಿ ನಿರ್ಗತಿಕರಿಗೆ ನೆರವಾಗಿದ್ದಾರೆ. ಅನೇಕ ಕಾರ್ಮಿಕರನ್ನು ಅವರ ಮೂಲ ಸ್ಥಳಕ್ಕೆ ತಲುಪಿಸಲು ವ್ಯವಸ್ಥೆಗಳನ್ನು ಮಾಡಿದ್ದಾರೆ. ಇಷ್ಟೆಲ್ಲಾ ದಾರಾಳತನವನ್ನು ತೋರಿದ ಸೋನು ಸೂದುವನ್ನು ಗುರುತಿಸಿ ವಿಶ್ವ ಸಂಸ್ಥೆ ಪ್ರಶಸ್ತಿಯೊಂದನ್ನು ನೀಡಿದೆ

ಹೌದು ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ನಟ ಸೋನು ಸೂದ್ ಸಾರಿಗೆ ವ್ಯವಸ್ಥೆ ಮಾಡಿ ತಲುಪಿಸಿದ್ದು ಅವರ ಲೋಕೋಪಕಾರಿ ಕೆಲಸಕ್ಕಾಗಿ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್ ಡಿಜಿ ಪ್ರಶಸ್ತಿಯನ್ನು ನೀಡಿದೆ.

ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ)ಯ ಪ್ರತಿಷ್ಠಿತ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಲಾಗಿದೆ.'ದಬಾಂಗ್' ನಟ ನಿಸ್ವಾರ್ಥವಾಗಿ ಸಹಾಯ ಹಸ್ತ ಚಾಚಿ ಲಕ್ಷಾಂತರ ವಲಸಿಗರು, ವಿದೇಶಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದರು. ಇದಲ್ಲದೆ, ಅವರು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸಹ ಒದಗಿಸುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಗತ್ಯವಿರುವವರಿಗೆ ಉಚಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.ಸೋಮವಾರ ಸಂಜೆ ನಡೆದ ವಾಸ್ತವ ಸಮಾರಂಭದಲ್ಲಿ ನಟನಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಶ್ತಿ ಬಗ್ಗೆ ಸಂತಸ ವ್ಯಕ್ತಪಡಿಸಿದ ನಟ, ಯುಎನ್‌ಡಿಪಿಯನ್ನು ಅದರ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಹೇಳಿದರು."ಇದು ಅಪರೂಪದ ಗೌರವ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ನಾನು ಮಾಡಿದ ಸಣ್ಣ ಸಹಾಯಕ್ಕೆ ದೊಡ್ಡ ಮಾನ್ಯತೆ ಸಿಕ್ಕಿದೆ ಎಂದು ಸೋನು ಸೂದ್ ಹೇಳಿದ್ದಾರೆ.

 

Find Out More:

Related Articles: