ಭಾರತದ ಕೊರೋನಾ ಔಷಧಿ ಎಂದು ಲಭ್ಯವಾಗಲಿದೆ ಗೊತ್ತಾ..?

Soma shekhar

ಕೊರೋನಾ ವೈರಸ್ ಜಗತ್ತಿನಾಧ್ಯಂತ ಹರಡಿಕೊಂಡು ಲಕ್ಷಾಂತರ ಸಾವು ನೋವುಗಳಿಗೆ ಕಾರಣವಾಗಿದೆ. ಈ ಒಂದು ವೈರಸ್ ಅನ್ನು ಅಂತ್ಯಗೊಳಿಸಬೇಕಾದರೆ ಈ ವೈರಸ್ ಗೊಂದು ಔಷಧಿಯನ್ನು ಸಂಶೋಧಿಸುವುದು ಅವಶ್ಯಕವಾಗಿದೆ ಆಗಾಗಿ ವಿಶ್ವದ ಅನೇಕ ರಾಷ್ಟ್ರಗಳು ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಿದ್ದು ಈಗಾಗಲೇ  ಅನೇಕ ರಾಷ್ಟ್ರಗಳು ಕ್ಲಿನಿಕಲ್ ಟೆಸ್ಟನ್ನು ಮಾಡಲಾಗುತ್ತಿದೆ. ಅದೇ ರೀತಿ ಭಾರತವೂ ಕೂಡ ಕೊರೋನಾ ವೈರಸ್ ಔಷಧಿಯನ್ನು ಸಂಶೋಧನೆಯನ್ನು ಮಾಡಲಾಗಿದ್ದು ಅದನ್ನು ಕ್ಲಿನಿಕಲ್ ಟೆಸ್ಟ್ ಅನ್ನು ನಡೆಸಲಾಗುತ್ತಿದೆ.





ಹೌದು ಎಲ್ಲಾ ಕಾರ್ಯಗಳೂ ಯೋಜಿತ ರೀತಿಯಲ್ಲಿಯೇ ಮುಂದುವರಿದರೆ ಭಾರತದಲ್ಲಿ ಕೊರೋನ ಸೋಂಕಿನ ವಿರುದ್ಧದ ಪರಿಣಾಮಕಾರಿ ಲಸಿಕೆ 2021ರ ಜನವರಿ ಅಂತ್ಯದೊಳಗೆ ಬಳಕೆಗೆ ಲಭ್ಯವಾಗಲಿದೆ ಎಂದು ಎಐಐಎಂಎಸ್ ನಿರ್ದೇಶಕ ಡಾ ರಣದೀಪ್ ಗುಲೇರಿಯಾ ಹೇಳಿದ್ದಾರೆ.






'ಇಂಡಿಯಾ ಟುಡೆ ಹೆಲ್ತ್‌ಗಿರಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವ ಪರೀಕ್ಷಾ ಪ್ರಯೋಗದ ಯಶಸ್ಸು ಸೇರಿದಂತೆ ಹಲವು ವಿಷಯಗಳ ಮೇಲೆ ಇದು ಅವಲಂಬಿತವಾಗಿದೆ. ಆದರೆ ಎಲ್ಲವೂ ಯೋಜಿತ ರೀತಿಯಲ್ಲಿಯೇ ಮುಂದುವರಿದರೆ ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಲಭ್ಯವಾಗುವ ಸಾಧ್ಯತೆಯಿದೆ. ದೇಶದ ಅಗಾಧ ಜನಸಂಖ್ಯೆಯ ಹಿನ್ನೆಲೆಯಲ್ಲಿ ಲಸಿಕೆಯ ಉತ್ಪಾದನೆ ಮತ್ತು ಅದರ ಪೂರೈಕೆ ಬಹುದೊಡ್ಡ ಸವಾಲಾಗಲಿದೆ.







ಆರಂಭದ ದಿನಗಳಲ್ಲಿ ಲಸಿಕೆಯ ಕೊರತೆಯಾಗುವ ನಿರೀಕ್ಷೆಯಿದೆ. ಈ ಕಾರಣದಿಂದ, ಲಸಿಕೆ ಆದ್ಯತೆಯ ಮಾದರಿಯನ್ನು ಅನುಸರಿಸಲಾಗುವುದು. ಆರೋಗ್ಯ ಸಿಬ್ಬಂದಿ, ಕೊರೋನ ವಾರಿಯರ್ಸ್, ಸಾವಿನ ಸಾಧ್ಯತೆ ಅಧಿಕವಾಗಿರುವವರು ಸೇರಿದಂತೆ ಕೊರೋನ ಸೋಂಕಿನ ಅಧಿಕ ಅಪಾಯದ ವ್ಯಾಪ್ತಿಯಲ್ಲಿರುವವರಿಗೆ ಮೊದಲು ಪೂರೈಸಲಾಗುವುದು ಎಂದವರು ಹೇಳಿದ್ದಾರೆ.





ಲಸಿಕೆಯಿಂದ ದೀರ್ಘಾವಧಿ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ತಜ್ಞರ ಆತಂಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಸಿಕೆಯ ಮೂರು ಹಂತದ ಪರೀಕ್ಷಾ ಪ್ರಯೋಗ ಮತ್ತು ಕೊರೋನ ವಿರುದ್ಧದ ಲಸಿಕೆ ಲಭ್ಯವಾದ ಬಳಿಕ ಅದನ್ನು ಪ್ರಯೋಗಿಸಿದ ನಂತರ ಆರೋಗ್ಯಸ್ಥಿತಿಯ ಮೇಲೆ ಆಗುವ ಪರಿಣಾಮವನ್ನು ನಿಕಟವಾಗಿ ಗಮನಿಸಲಾಗುವುದು ಎಂದಿದ್ದಾರೆ. ಕಳೆದ ಕೆಲವು ವಾರಗಳ ಪ್ರವೃತ್ತಿ ಗಮನಿಸಿದರೆ, ದೇಶದಲ್ಲಿ ಕೊರೋನ ಸೋಂಕು ಅತ್ಯುಚ್ಛ ಮಟ್ಟ ತಲುಪಿ ಈಗ ಕಡಿಮೆಯಾಗುತ್ತಿರುವ ಲಕ್ಷಣವಿದೆ . ಜನತೆ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ಮುಂತಾದ ನಿಯಮಗಳನ್ನು ಪಾಲಿಸಿದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಕೊರೋನ ಸೋಂಕು ಇಳಿಮುಖವಾಗಲಿದೆ ಎಂದು ಡಾ ಗುಲೇರಿಯಾ ಹೇಳಿದ್ದಾರೆ.

Find Out More:

Related Articles: