ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಸೋಲಲು ಕಾರಣ ಏನು..?

Soma shekhar
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚು ಹರಿಸಿದ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 97 ರನ್ಗಳ ಭರ್ಜರಿ ಜಯ ಸಾಧಿಸಿತು. ಪಂಜಾಬ್ ನೀಡಿದ್ದ 207 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಕೇವಲ 10 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 109 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಕೈಚೆಲ್ಲಿತ್ತು.






ಆರಂಭದಲ್ಲೇ ಕೇವಲ 4 ರನ್ಗೆ ದೇವದತ್ ಪಡಿಕ್ಕಲ್ (1), ಜಾಸ್ ಫಿಲಿಪ್ (0) ಮತ್ತು ನಾಯಕ ವಿರಾಟ್ ಕೊಹ್ಲಿ (1) ವಿಕೆಟ್ ಕಳೆದುಕೊಂಡು ಆರ್ಸಿಬಿ ತಂಡ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಆಯರನ್ ಫಿಂಚ್ (20) ಜತೆಗೂಡಿದ ಎಬಿ ಡಿವಿಲಿಯರ್ಸ್ (28) ಕೆಲವೊತ್ತು ಕ್ರಿಸ್ನಲ್ಲಿ ನಿಂತು ಚೇತರಿಕೆ ನೀಡಿದಾದರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಕೇವಲ 57 ರನ್ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡ ಆರ್ಸಿಬಿಗೆ ಬಹುತೇಕ ಸೋಲು ಖಚಿತವಾಯಿತು.







ಶಿವಂ ದುಬೆ (12), ಉಮೇಶ್ ಯಾದವ್ (0) ಸಹ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿದರು. ಇತ್ತ ವಾಷಿಂಗ್ಟನ್ ಸುಂದರ್ 30 ರನ್ ಕಲೆಹಾಕುವ ಮೂಲಕ ತಂಡದ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದರು. ಉಳಿದಂತೆ ನವದೀಪ್ ಸೈನಿ (6) ಹಾಗೂ ಯಜುವೇಂದ್ರ ಚಹಾಲ್ (1) ಔಟಾದರೆ, ಡೇಲ್ ಸ್ಟೇನ್ (1) ಅಜೇಯರಾಗಿ ಉಳಿದರು.






ಪಂಜಾಬ್ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ರವಿ ಬಿಷ್ಣೋಯ್ ಹಾಗೂ ಮುರುಗನ್ ಅಶ್ವಿನ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಪಡೆದರೆ, ಮಹಮ್ಮದ್ ಶಮಿ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ತಲಾ 1 ವಿಕೆಟ್ಗೆ ತೃಪ್ತಿಪಟ್ಟರು.




ಕನ್ನಡಿಗ ರಾಹುಲ್ ಅಬ್ಬರದ ಶತಕ

 ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 57 ರನ್ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 26 ರನ್ ಗಳಿಸಿದ್ದ ಮಯಾಂಕ್ ಬಿರುಸಿನ ಹೊಡೆತಕ್ಕೆ ಯತ್ನಿಸಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ನಿಕೋಲಸ್ ಪೂರನ್ (17) ಔಟಾದರು. ಬಳಿಕ ಬಂದ ಸ್ಫೋಟಕ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಕೇವಲ 5 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ಇತ್ತ ಕೊನೆಯವರೆಗೂ ಅಬ್ಬರಿಸಿದ ರಾಹುಲ್ ಕೇವಲ 69 ಎಸೆತಗಳಲ್ಲಿ 7 ಸಿಕ್ಸರ್, 14 ಬೌಂಡರಿ ನೆರವಿನಿಂದ ಅಜೇಯ 132 ರನ್ ಗಳಿಸಿ ನಾಯಕನ ಜವಬ್ದಾರಿಯು ಆಟವಾಡಿದರು. ಉಳಿದಂತೆ ಕರುಣ್ ನಾಯರ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.






ಆರ್ಸಿಬಿ ಪರ ಶಿವಂ ದುಬೆ ಎರಡು ವಿಕೆಟ್ ಪಡೆದರೆ, ಯಜುವೇಂದ್ರ ಚಹಾಲ್ 1 ವಿಕೆಟ್ಗೆ ತೃಪ್ತಿಪಟ್ಟರು. ಉಳಿದ ಯಾವೊಬ್ಬ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

Find Out More:

Related Articles: