ಕೇಂದ್ರ ಸರ್ಕಾರದಿಂದ ಮೆಟ್ರೋ ಸೇವೆಯ ಆರಂಭಕ್ಕೆ ಗ್ರೀನ್ ಸಿಗ್ನಲ್ : ಎಂದಿನಿಂದ ಸಂಚರಿಸುತ್ತೆ ಮೆಟ್ರೋ.?

frame ಕೇಂದ್ರ ಸರ್ಕಾರದಿಂದ ಮೆಟ್ರೋ ಸೇವೆಯ ಆರಂಭಕ್ಕೆ ಗ್ರೀನ್ ಸಿಗ್ನಲ್ : ಎಂದಿನಿಂದ ಸಂಚರಿಸುತ್ತೆ ಮೆಟ್ರೋ.?

Soma shekhar
ಕೊರೋನಾ ವೈರಸ್  ಜನರಿಗೆ ಹರಡದಂತೆ ತಡೆಯುವ ಉದ್ದೇಶದಿಂದ ಇಡೀ ದೇಶವನ್ನು ಎರಡು ತಿಂಗಳ ಕಾಲ ಲಾಕ್ ಡೌನ್ ಅನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿದ್ದ ಎಲ್ಲಾ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇದರನ್ವಯ ದೇಶದಲ್ಲಿದ್ದ ಬಸ್ ಸಂಚಾರಗಳು ಹಾಗೂ ರೈಲ್ವೆ ಸೇವೆಗಳು, ವಿಮಾನ ಯಾನ ಸೇವೆಗಳು, ಹಾಗೂ ಮೆಟ್ರೋ ಸೇವೆಗಳನ್ನು ರದ್ದುಗೊಳಿಸಿತ್ತು. ಆದರೆ ಲಾಕ್ ಡೌನ್ ಸಮಯ ತೆರವುಗೊಂಡು ದೇಶ ಅನ್ ಲಾಕ್ ಪ್ರಕ್ರಿಯೆಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಎಲ್ಲಾ ಸೇವೆಗಳಿಗೆ ಮರುಚಾಲನೆ ದೊರೆಯುತ್ತಿದೆ. ಅದರಂತೆ  ದೇಶದಲ್ಲಿನ ಮೆಟ್ರೋ ಸೇವೆಗಳಿಗೆ ಚಾಲನೆ ದೊರೆಯಲಿದೆ..


 ಹೌದು ಅನ್ ಲಾಕ್ 3.0 ಸಂದರ್ಭದಲ್ಲಿ ಕೊರೋನಾ ಭೀತಿಯ ನಡುವೆಯೂ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನಲಯಲ್ಲಿ ಸ್ಥಗಿತಗೊಂಡಿದ್ದಂತ ನಮ್ಮ ಮೆಟ್ರೋ ಸಂಚಾರ ಆಗಸ್ಟ್ 16ರಿಂದ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.


 

ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಿ ವಿಮಾನ, ರೈಲು, ಬಸ್ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಮೆಟ್ರೋ ರೈಲು ಸೇವೆ ಆರಂಭಕ್ಕೆ ಅನುಮತಿ ಸಿಗಬೇಕಿದೆ.


 

ಲಾಕ್ಡೌನ್ನಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆಯಲಾಗುತ್ತಿದೆ. ಮೆಟ್ರೋ ರೈಲು, ಚಿತ್ರಮಂದಿರಗಳು ಸೇರಿ ಇನ್ನಿತರ ಉದ್ಯಮಗಳ ಕಾರ್ಯಚಟುವಟಿಕೆಗೆ ಅನುಮತಿ ನೀಡಿಲ್ಲ. 15ರಂದು ಲಾಕ್ಡೌನ್ ತೆರವಿನ ಕುರಿತ ಮಾರ್ಗಸೂಚಿ ಬಿಡುಗಡೆ ಸಾಧ್ಯತೆಗಳಿವೆ.



ಮೆಟ್ರೋ ರೈಲು ಸೇವೆ ಆರಂಭಿಸಲು ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲಸಕ್ಕೆ ಬರಲು ತಯಾರಿರುವಂತೆ ಸಿಬ್ಬಂದಿಗೆ ಈಗಾಗಲೇ ಸೂಚಿಸಿದೆ. ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.


ಕೇಂದ್ರ ಸರ್ಕಾರ ಜುಲೈ 31ರವರೆಗೆ ಅನ್ ಲಾಕ್ 2.0 ನಿಯಮವನ್ನು ಏರಿತ್ತು. ಆನಂತ್ರ ಆಗಸ್ಟ್ ನಲ್ಲಿ ಅನ್ ಲಾಕ್ 3.0 ಮಾರ್ಗ ಸೂಚಿಯನ್ನು ಜಾರಿ ಮಾಡಿದೆ. ಇಂತಹ ಮಾರ್ಗಸೂಚಿಯಂತೆ ದೇಶಾದ್ಯಂತ ಮೆಟ್ರೋ ಸಂಚಾರಕ್ಕೂ ಅನುಮತಿ ನೀಡಿತ್ತು. ಹೀಗಾಗಿ ಮೆಟ್ರೋ ಸಂಚಾರಕ್ಕಾಗಿ ಆಗಸ್ಟ್ 15ರ ನಂತ್ರ ಮಾರ್ಗ ಸೂಚಿಯನ್ನು ಕೂಡ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ.



ಇದೇ ಕಾರಣದಿಂದಾಗಿ ಬಿ ಎಂ ಆರ್ ಸಿ ಎಲ್ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೊತೆಗೆ ಪ್ರಯಾಣಿಕರು ಅನುಸರಿಸಬೇಕಾದಂತ ನಿಯಮಗಳನ್ನು ಕೂಡ ಸಿದ್ಧ ಪಡಿಸುತ್ತಿದೆ. ಹೀಗಾಗಿ ಆಗಸ್ಟ್ 16ರ ನಂತ್ರ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ ಆಗಲಿದೆ ಎನ್ನಲಾಗಿದೆ. ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಗಲಿದೆ.


Find Out More:

Related Articles: