ಸೋಮವಾರ ದಾಖಲಾದ ಕೊರೋನಾ ಸೋಂಕು ಎಷ್ಟು ಗೊತ್ತಾ..?
ಕೊರೊನಾವೈರಸ್ ಒಟ್ಟು 575566 ಸೋಂಕಿತ ಪ್ರಕರಣಗಳ ಪೈಕಿ 462241 ಸೋಂಕಿತರು ಗುಣಮುಖರಾಗಿದ್ದಾರೆ. 104724 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 6522 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕರ್ನಾಟಕದಲ್ಲಿ ಎಷ್ಟು ಮಂದಿಗೆ ಕೊವಿಡ್ ಟೆಸ್ಟ್?:
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 26049 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 41808 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 67857 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 45,86,780 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:
ರಾಜ್ಯದಲ್ಲಿ ಒಟ್ಟು 9543 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 46, ಬಳ್ಳಾರಿ 310, ಬೆಳಗಾವಿ 184, ಬೆಂಗಳೂರು ಗ್ರಾಮಾಂತರ 213, ಬೆಂಗಳೂರು 4217, ಬೀದರ್ 50, ಚಾಮರಾಜನಗರ 38, ಚಿಕ್ಕಬಳ್ಳಾಪುರ 195, ಚಿಕ್ಕಮಗಳೂರು 206, ಚಿತ್ರದುರ್ಗ 198, ದಕ್ಷಿಣ ಕನ್ನಡ 460, ದಾವಣಗೆರೆ 74, ಧಾರವಾಡ 139, ಗದಗ 61, ಹಾಸನ 408, ಹಾವೇರಿ 115, ಕಲಬುರಗಿ 10, ಕೊಡಗು 53, ಕೋಲಾರ 125, ಕೊಪ್ಪಳ 87, ಮಂಡ್ಯ 276, ಮೈಸೂರು 952, ರಾಯಚೂರು 102, ರಾಮನಗರ 79, ಶಿವಮೊಗ್ಗ 164, ತುಮಕೂರು 282, ಉಡುಪಿ 320, ಉತ್ತರ ಕನ್ನಡ 100, ವಿಜಯಪುರ 35, ಯಾದಗಿರಿ 44 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.