ಚಿತ್ರರಂಗ ಬಿಡುತ್ತಾರಾ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ..? ಇಲ್ಲಿದೆ ಉತ್ತರ

Soma shekhar

ಬಾಹುಬಲಿ ಸಿನಿಮಾ ನಂತರ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಸೈಲೆಂಟಾಗ್ಬಿಟ್ಟಿದ್ದಾರೆ.  ದಕ್ಷೀಣ ಭಾರತದ ಸಿನಿಮಾದಲ್ಲಿ ರಾಣಿಯಂತೆ ಮೆರೆದಿದ್ದ ಸ್ವೀಟಿ, ಸದ್ಯ ಯಾವುದೇ ಸಿನಿಮಾಗಳನ್ನ ಒಪ್ಪಿಕೊಳ್ಳದೇ, ಸುಮ್ಮನಾಗಿದ್ದಾರೆ. ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹರಿದಾಡುತ್ತಿದೆ ಅಷ್ಟಕ್ಕೂ ಈ ಸುದ್ದಿ ನಿಜವಾ ಇಲ್ಲಿದೆ ಉತ್ತರ

 

ಅನುಷ್ಕಾ ಶೆಟ್ಟಿ, ಸೌತ್ ಸಿನಿದುನಿಯಾದ ಟಾಪ್ ಹೀರೋಯಿನ್. ಸೂಪರ್ ಸ್ಟಾರ್​​ಗಳ ಜೊತೆ ಮಿಂಚಿ ಸೂಪರ್ ಸಕ್ಸಸ್​ ಕಂಡ ಲೇಡಿ ಸೂಪರ್ ಸ್ಟಾರ್. ಬಹುಕೋಟಿ ವೆಚ್ಚದ ಬಹುಭಾಷಾ ಸಿನಿಮಾಗಳಲ್ಲಿ ಕಮಾಲ್ ಮಾಡಿದ ಚೆಲುವೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮೋಡಿ ಮಾಡಿದ ನಾಯಕಿ. ಗ್ಲಾಮರ್​, ಆಕ್ಟಿಂಗ್ ಎರಡರಲ್ಲೂ ಸೈ ಅನ್ನಿಸಿಕೊಂಡ ಗಟ್ಟಿಗಿತ್ತಿ. ಬಾಹುಬಲಿ ನಂತ್ರ ಸ್ವೀಟಿ ಅಷ್ಟಾಗಿ ಚಿತ್ರಗಳನ್ನ ಒಪ್ಪಿಕೊಳ್ಳಲೇಯಿಲ್ಲ.

 

ಬಾಹುಬಲಿ  ಸಿನಿಮಾದ ​ ನಂತರ ಸ್ವೀಟಿ ನಟಿಸಿದ ಭಾಗಮತಿ ಸಿನಿಮಾ ಮಾತ್ರ ರಿಲೀಸ್​ ಆಗಿದೆ. ಈ ನಡುವೆ ತೂಕ ಹೆಚ್ಚಿಸಿಕೊಂಡಿದ್ದರಿಂದ ಅವಕಾಶಗಳು ಕಡಿಮೆ ಆಯ್ತು ಅನ್ನೋ ಮಾತುಗಳು ಕೂಡ ಕೇಳಿಬಂದಿತ್ತು. ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ಗೆಸ್ಟ್​ ಅಪಿಯರೆನ್ಸ್​ ಮಾಡಿದ್ದ ಸೈಲೆನ್ಸ್​ ಅನ್ನೋ ಬಹುಭಾಷಾ ಸಿನಿಮಾದಲ್ಲಿ ನಟಿಸಿದ್ದಾರೆ. ರಿಲೀಸ್​ಗೆ ರೆಡಿಯಿರೋ ಸಿನಿಮಾ ಕೊರೊನಾ ಹಾವಳಿಯಿಂದ ಪ್ರೇಕ್ಷಕರ ಮುಂದೆ ಬರೋದು ತಡವಾಗ್ತಿದೆ.

 

ಸದ್ಯಕ್ಕೆ ಅನುಷ್ಕಾ ಶೆಟ್ಟಿ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಗೌತಮ್​ ವಾಸುದೇವ್​ ಮೆನನ್​ ನಿರ್ದೇಶನದ ಚಿತ್ರವನ್ನ ಸ್ವೀಟಿ ಒಪ್ಪಿಕೊಂಡಿರುವ ಮಾತುಗಳು ಕೇಳಿಬಂದಿತ್ತು. ಆದರೆ, ಕೊರೊನಾ ಸಮಸ್ಯೆಯಿಂದಾಗಿ ಆ ಸಿನಿಮಾ ಟೇಕಾಫ್​ ಆಗೋದು ಡೌಟು ಅನ್ನೋ ಮಾತುಗಳು ಕೇಳಿ ಬರ್ತಿದೆ. ಅಲ್ಲಿಗೆ ಅನುಷ್ಕಾ ಶೆಟ್ಟಿ ಮುಂದೆ ಯಾವುದೇ ಸಿನಿಮಾಗಳು ಎಲ್ಲಾ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಬಹಳ ಆಪ್ತ ನಿರ್ದೇಶಕರು ಮತ್ತು ನಿರ್ಮಾಪಕರು ಹೇಳುವ ಕಥೆಗಳನ್ನ ಮಾತ್ರ ಕೇಳ್ತಿದ್ದು, ಯಾವುದಕ್ಕೂ ಗ್ರೀನ್​ ಸಿಗ್ನಲ್​ ಕೊಟ್ಟಿಲ್ಲ.

 

ಇತ್ತೀಚೆಗೆ ತೂಕ ಇಳಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ, ಸ್ಪೆಷಲ್​ ಫೋಟೋಶೂಟ್​ ಮಾಡಿ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುವ ಸುಳಿವು ಕೊಟ್ಟಿದ್ರು. ಒಂದ್ಕಡೆ ಸೈಲೆನ್ಸ್​ ಸಿನಿಮಾ ರಿಲೀಸ್ ಆಗದೇ, ಹೊಸ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಮಂಗಳೂರು ಚೆಲುವೆ ಸೈಲೆಂಟಾಗಿದ್ದಾರೆ. ಇದನ್ನೆಲ್ಲಾ ನೋಡಿ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡ್ತಿದೆ. ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಅನ್ನೋದನ್ನ ಕಾದು ನೋಡ್ಬೇಕಿದೆ.

 

Find Out More:

Related Articles: