ಶಾಲಾ ಕಾಲೇಜಗಳನ್ನು ತೆರೆಯುವುದರ ಬಗ್ಗೆ ರಾಜ್ಯ ಸರ್ಕಾರದ ತೀರ್ಮಾನ ಏನು..?

Soma shekhar
ಕೊರೋನಾ ದಿಂದಾಗಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸ ಕುಂಟಿತಗೊಳಿಸಬಾರದು ಎಂಬ ಕಾರಣಕ್ಕೆ ಆನ್ ಲೈನ್ ನಲ್ಲಿ ತರಗತಿಗಳನ್ನು ಮಾಡಲಾಗುತ್ತಿತ್ತು. ಆದರೆ ಈಗ ಕೊರೋನಾ ಬಿಕ್ಕಟ್ಟಿನಿಂದ  ದೇಶ ನಿಧಾನವಾಗಿ ತೆರೆದುಕೊಳ್ಳುತ್ತಿರುವಂತಹ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 5ನೇ ಅನ್ ಲಾಕ್ ಪ್ರಕ್ರಿಯೆಯನ್ನು ಜಾರಿಗೆ ತಂದು ಇದಕ್ಕೆ ಕೆಲವು ಮಾರ್ಗ ಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಈ ಮಾರ್ಗ ಸೂಚಿ ಪ್ರಕಾರ ಶಾಲಾ ಕಾಲೇಜುಗಳನ್ನು ಆರಂಭಿಸಲು ಅನುಮತಿಯನ್ನು ನೀಡಲಾಗಿದೆ   ಆದರೆ ಆರಂಭಿಸುವುದು ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ತಿಳಿಸಿದೆ. ಈ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳನ್ನು ತೆಗೆಯ ಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸಿಕ್ಕಿಕೊಂಡಂತೆ ಕಾಣುತ್ತಿದೆ. ಇದಕ್ಕೆ ಕೆಲವು ಶಿಕ್ಷಣ ತಜ್ಞರೂ ಶಾಲೆಯನ್ನು ತೆರೆಯುವುದರ ಬಗ್ಗೆ  ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ.
ಹೌದು ಶಾಲೆ ಆರಂಭ ವಿಚಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ಬೆನ್ನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಶಿಕ್ಷಕರು, ಶಿಕ್ಷಣ ತಜ್ಞರು, ಜನ ಪ್ರತಿನಿಧಿಗಳಿಂದ ಸಲಹೆ ಮತ್ತು ಸೂಚನೆ ಪಡೆಯಲು ಮುಂದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಆಡಳಿತ ಮಂಡಳಿಗಳು ಶಾಲೆ ತೆರೆಯುವುದಕ್ಕೆ ಸಿದ್ಧವಾಗಿವೆ. ಶಿಕ್ಷಣ ತಜ್ಞರಿಂದಲೂ ಸಹ ಶಾಲೆ ತೆರೆಯುವುದೇ ಸೂಕ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ, ಪಾಲಕರ ಮನಸ್ಥಿತಿ ಹೇಗಿದೆ? ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗಿದ್ದಾರೆಯೇ ಎಂಬುದನ್ನು ಖಾತ್ರಿ ಪಡೆಸಿಕೊಳ್ಳಬೇಕಿದೆ.ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಲಕರ ಅಭಿಪ್ರಾಯ ಸಂಗ್ರಹಿಸಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ, ಮನೆಯಲ್ಲೇ ಮಕ್ಕಳು ಕಾಲ ಕಳೆಯುತ್ತಿರುವುದರಿಂದ ಕಲಿಕೆಯಿಂದ ಮಕ್ಕಳು ದೂರಾಗುತ್ತಿದ್ದಾರೆ ಎಂಬ ದೂರು ಸಹ ಪಾಲಕರಿಂದಲೇ ಕೇಳಿ ಬರುತ್ತಿದೆ.

ಸದ್ಯ 'ವಿದ್ಯಾಗಮ' ಯೋಜನೆ ಅಡಿ ಶಿಕ್ಷಕರು ಬೋಧನೆ ಮಾಡುವ ಸ್ಥಳಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿರುವ ಪಾಲಕರು, ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳು ಆರಂಭಿಸಿದರೆ ಕಳುಹಿಸುತ್ತಾರೆ ಎಂಬ ನಂಬಿಕೆ ಕೂಡ ಶಾಲಾ ಆಡಳಿತ ಮಂಡಳಿಯಲ್ಲಿದೆ.
ಶಾಲೆ ತೆರೆಯುವ ಮುನ್ನ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳನ್ನು ಪಾಲಕರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು. ಅಲ್ಲದೆ, ಪ್ರತಿ ಮಗುವಿನ ಜವಾಬ್ದಾರಿಯನ್ನು ಶಾಲೆ ಮತ್ತು ಪಾಲಕರು ಸಮಾನವಾಗಿ ಸ್ವೀಕರಿಸುವುದರಿಂದ ತರಗತಿಗಳನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಲಿದೆ. ಶಿಕ್ಷಣ ತಜ್ಞರು ಸಹ ಶಾಲೆ ತೆರೆಯುವುದೇ ಸೂಕ್ತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದರಿಂದ ರಾಜ್ಯ ಸರ್ಕಾರ ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

Find Out More:

Related Articles: