ಜಾಗತಿಕ ಎಐ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?

Soma shekhar
ಮಾನವನ ಬುದ್ಧಿಶಕ್ತಿಗೆ ಪೂರಕವಾಗಿ ಕೃತಕ ಬುದ್ಧಿಮತ್ತೆ ಇದೆ. ಪ್ರಬಲ ಸಾಧನ ಮತ್ತು ತಂತ್ರಜ್ಞಾನಗಳನ್ನ ರೂಪಿಸಲು ಮಾನವನಿಗೆ ಇದು ಸಹಾಯ ಮಾಡುತ್ತದೆ. ಕಲಿಕೆ ಮತ್ತು ಯೋಚನೆಯ ಶಕ್ತಿಯನ್ನು ಆರ್ಟಿಫಿಷಿಲ್ ಇಂಟೆಲಿಜೆನ್ಸ್ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ,


ಜಾಗತಿಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಶೃಂಗ ಸಭೆಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ  ನೀಡಿ ಮಾತನಾಡಿದ  ಅವರು ಆನ್ಲೈನ್ನಲ್ಲಿ ಅಕ್ಟೋಬರ್ 9ರವರೆಗೆ ನಡೆಯಲಿರುವ RAISE2020 ಶೃಂಗ ಸಭೆಯಲ್ಲಿ ಕೃತಿ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಭಾರತದಲ್ಲಿ ಸಾಮಾಜಿಕ ಪರಿವರ್ತನೆ, ಸಬಲೀಕರಣ ಕಾರ್ಯ ಹೇಗೆ ಮಾಡಬಹುದು ಎಂಬುದರತ್ತ ಗಮನ ಕೊಡಲಾಗುತ್ತಿದೆ. ಸಮಾಜದ ಅನುಕೂಲಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಎಐ ತಜ್ಞರು ಹಾಗೂ ಉದ್ಯಮ ಪರಿಣಿತರು ತಮ್ಮ ಅಭಿಪ್ರಾಯಗಳನ್ನ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.


 
ಇತಿಹಾಸದ ಪ್ರತಿಯೊಂದು ಹೆಜ್ಜೆಯಲ್ಲೂ ಭಾರತವು ವಿಶ್ವಕ್ಕೆ ಜ್ಞಾನವನ್ನ ದಯಪಾಲಿಸಿದೆ. ಇವತ್ತಿನ ಐಟಿ ಯುಗದಲ್ಲೂ ಭಾರತ ಬಹಳ ಕೊಡುಗೆ ನೀಡಿದೆ. ತಂತ್ರಜ್ಞಾನವು ಪಾರದರ್ಶಕತೆ ಮತ್ತು ಸೇವಾ ವ್ಯವಸ್ಥೆಯನ್ನ ಉತ್ತಮಪಡಿಸುತ್ತದೆ. ನಾವೀಗ ಭಾರತವನ್ನು ಜಾಗತಿಕ ಎಐ ತಾಣವನ್ನಾಗಿ ಮಾಡಬೇಕಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ ಒಂದು ಮಾಸ್ಟರ್ ಪ್ಲಾನ್ ರೂಪಿಸಲು ವಿವಿಧ ಉದ್ಯಮ ಮತ್ತು ಸಮಾಜಗಳ ಎಲ್ಲಾ ಮೂಲೆಗಳಿಂದಲೂ ಜನರು ಸಹಭಾಗಿಯಾಗಬೇಕಿದೆ ಎಂದು ಪ್ರಧಾನಿ ಕರೆ ನೀಡಿದರು.



ಸಾಮಾಜಿಕ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಸಮಪರ್ಕವಾಗಿ ಅಳವಡಿಸುವ ಗುರಿ ಇರುವ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಭಾರತವೂ ಒಂದು. ಈ ಸಭೆ ಉದ್ಘಾಟನೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್, 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಜನಜೀವನದ ಪರಿವರ್ತನೆ ಆಗಬಲ್ಲುದು ಎಂದು ನಾವು ಬಲವಾಗಿ ನಂಬಿದ್ದೇವೆ. ಆರೋಗ್ಯ, ಶಿಕ್ಷಣ, ಹಣಕಾಸು, ಕೃಷಿ ಮತ್ತು ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ. ಭಾರತವು ಇಡೀ ವಿಶ್ವದ ಕೃತಕ ಬುದ್ಧಿಮತ್ತೆ ಪ್ರಯೋಗಶಾಲೆ ಆಗಬಲ್ಲುದು' ಎಂದು ಹೇಳಿದ್ದಾರೆ.
 
 



 ವಿಶ್ವಾದ್ಯಂತ 125 ದೇಶಗಳ ಸರ್ಕಾರಿ ಪ್ರತಿನಿಧಿಗಳು ಸೇರಿದಂತೆ ಶೈಕ್ಷಣಿಕ ಕ್ಷೇತ್ರ, ಸಂಶೋಧನಾ ಕ್ಷೇತ್ರಗಳಿಂದ 38 ಸಾವಿರಕ್ಕೂ ಹೆಚ್ಚು ಮಂದಿ ಈ ರೈಸ್ 2020 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ನೊಂದಾಯಿಸಿದ್ದಾರೆ. ಅಮೆರಿಕ ಮಾಸುಚೆಟ್ಸ್ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ವಿಜ್ಞಾನ ಹಾಗೂ ಎಐ ಲ್ಯಾಬ್ನ ನಿರ್ದೇಶಕ ಡೇನೆಯೆಲಾ ರುಸ್, ಇಂಡಿಯಾ ಗೂಗಲ್ ರೀಸರ್ಚ್ನ ಎಐ ವಿಭಾಗದ ನಿರ್ದೇಶಕ ಡಾ. ಮಿಲಿಂದ್ ತಾಂಬೆ, ಐಬಿಎಂ ಇಂಡಿಯಾದ ಎಂಡಿ ಸಂದೀಪ್ ಪಟೇಲ್, ಡಾ. ಜೋನಾಥನ್ ಸ್ಟುವರ್ಟ್ ರಸೆಲ್, ಅರುಣಿಮಾ ಸರ್ಕಾರ್ ಇತ್ಯಾದಿ ಎಐ ಪರಿಣಿತರು ಈ ಸಭೆಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ.

Find Out More:

Related Articles: