ಅಂತರಾಷ್ಟ್ರೀಯ ಯೋಗದಿನದಂದು ದೇಶದ ಜನತೆಗೆ ಪ್ರಧಾನಿ ಮೋದಿ ಏನು ಹೇಳಿದ್ದಾರೆ ಗೊತ್ತಾ..?

Soma shekhar

ಯೋಗವನ್ನು ಮಾಡುವುದರಿಂದಾ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು  ಯೋಗ ಮನುಷ್ಯನನ್ನು ಆರೋಗಯವಂತನನ್ನಾಗಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಇಂತಹ ಯೋಗದ ದಿನಾಚಾರಣೆಯಾದ ಇಂದು ಇಡೀ ಪ್ರಂಚದಾದ್ಯಂತ ಯೋಗಭ್ಯಾಸವನ್ನು ಮಾಡಲಾಗುತ್ತಿದೆ. ಈ ಇಂದಿನ ಅಂತರಾಷ್ಟ್ರೀಯ ಯೋಗದಿನದಂದು ಪ್ರಧಾನಿ ಮೋದಿ ದೇಶದ ಜನರಿಗೆ ಯೋಗದ ಮಹತ್ವವನ್ನು ತಿಳಿಸಿದ್ದಾರೆ.

 

ಯೋಗಾಸನ ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರಿ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ  ಕೋವಿಡ್-19 ವೈರಸ್‍ನನ್ನು ಮಣಿಸಲು ಯೋಗ ಸಹಕಾರಿ. ಇದು ವಿಶ್ವಕ್ಕೇ ಚೆನ್ನಾಗಿ ಮನವರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಯೋಗಾಸನದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರತಿಕೂಲ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಯೋಗ ಸಹಕಾರಿ ಎಂದು ಅವರು ಪ್ರತಿಪಾದಿಸಿದರು.

 

ಯೋಗಾಸನಕ್ಕೆ ಯಾವುದೇ ತಾರತಮ್ಯವಿಲ್ಲ. ಇದು ಮನುಕುಲದ ಏಕತೆಗಾಗಿ ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಮೋದಿ ಬಣ್ಣಿಸಿದ್ದಾರೆ. ವಿಶ್ವವ್ಯಾಪಿ ಕೋವಿಡ್-19 ವೈರಸ್ ಹಾವಳಿ ತೀವ್ರಗೊಂಡಿರುವ ಆತಂಕಕಾರಿ ಪರಿಸ್ಥಿತಿ ನಡುವೆಯೂ ಆರನೇ ಆಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯಲ್ಲಿ ಪ್ರಧಾನಿ ಭಾಷಣ ಮಾಡಿದರು.

 

ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡಿಸಲು ಯೋಗ ಸಹಕಾರಿ. ಸದೃಢ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಉಪಕಾರಿ ಎಂದು ಅವರು ಬಣ್ಣಿಸಿದರು. ನಮ್ಮ ಆರೋಗ್ಯ ಮತ್ತು ವಿಶ್ವಾಸ ಸ್ವರಮೇಳವನ್ನು ಉತ್ತಮಗೊಳಿಸಲು ಯೋಗ ನೆರವಾಗುತ್ತದೆ. ಅಲ್ಲದೇ ಆರೋಗ್ಯ ಮತ್ತು ಸಂತೋಷದ ಮಾನವೀಯತೆ ಯಶಸ್ಸಿಗೆ ಈ ಪ್ರಪಂಚವು ಸಾಕ್ಷಿಯಾಗುವ ಕಾಲ ದೂರವಿಲ್ಲ. ಇದಕ್ಕಾಗಿ ಯೋಗ ಖಂಡಿತ ನಮಗೆ ಸಹಾಯ ಮಾಡುತ್ತದೆ ಎಂದು ಮೋದಿ ವಿವರಿಸಿದರು.

 

ಯೋಗಾಸನದಿಂದ ಅನೇಕ ಪ್ರಯೋಜನಗಳುಂಟು. ಇದು ಏಕತೆ ಮತ್ತು ಒಗ್ಗಟ್ಟನ್ನು ಹೆಚ್ಚಿಸಿ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುತ್ತದೆ. ಯೋಗವು ಏಕತೆಯ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಯೋಗ ಮಾಡುವುದಕ್ಕೆ ಯಾವುದೇ ಜನಾಂಗ, ವರ್ಣ, ಜÁತಿ, ಧರ್ಮ, ಲಿಂಗ, ನಂಬಿಕೆ ಮತ್ತು ದೇಶಗಳ ತಾರತಮ್ಯವಿಲ್ಲ. ಇವೆಲ್ಲವನ್ನೂ ಮೀರಿದ ಶಕ್ತಿ ಇರುವುದು ಯೋಗಕ್ಕೆ ಮಾತ್ರ ಎಂದು ಪ್ರಧಾನಿ ಬಣ್ಣಿಸಿದರು.

ಕೊರೊನಾ ಹಾವಳಿ ತೀವ್ರವಾಗಿರುವ ಸಂದರ್ಭದಲ್ಲಿ ಈ ಪಿಡುಗನ್ನು ನಿಯಂತ್ರಿಸಲು ಯೋಗ ಸಹಕಾರಿ ಎಂಬ ಭಾವನೆ ವಿಶ್ವದಲ್ಲಿ ಈಗ ಬಲವಾಗಿ ಮೂಡುತ್ತಿದೆ ಎಂದು ಅವರು ತಿಳಿಸಿದರು. ಎಲ್ಲರೂ ತಮ್ಮ ಮನೆಗಳಲ್ಲೇ ಯೋಗಾಸನಗಳನ್ನು ಮಾಡುವ ಮೂಲಕ ಕುಟುಂಬದ ಸಂಬಂಧವನ್ನು ಹೆಚ್ಚಿಸುವ ಸುಸಂದರ್ಭ ಇದಾಗಿದೆ.

 

ಈ ವಿರ್ಷದ ಯೋಗ ದಿನದ ಧ್ಯೇಯವಾಕ್ಯ ಮನೆಯಲ್ಲಿಯೇ ಯೋಗ ಎಂಬುದಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹಾವಳಿಯಿಂದಾಗಿ ಇಂದು ಯಾವುದೇ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಿಲ್ಲ ಎಂದು ಪ್ರಧಾನಿ ಹೇಳಿದರು.

 

ನರೇಂದ್ರ ಮೋದಿ ಅವರು 2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಬಗ್ಗೆ ಪ್ರಸ್ತಾವನೆಯೊಂದನ್ನು ಮುಂದಿಟ್ಟರು. ಇದಕ್ಕೆ ಎಲ್ಲ ದೇಶಗಳು ಸಮ್ಮತಿ ನೀಡಿದರು.

 

2015ರಿಂದ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಈ ವರ್ಷ ಯೋಗ ದಿನವನ್ನು ವಿವಿಧ ದೇಶಗಳು ಸರಳವಾಗಿ ಆಚರಿಸುತ್ತಿವೆ.

 

Find Out More:

Related Articles: