ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿಯಲ್ಲಿ ಏನೇನು ಇದೆ ಗೊತ್ತಾ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Soma shekhar

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುಇತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಅನ್ನು ಮಾಡಲಾಗಿತ್ತು ಆದರೂ ಕೂಡ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಏಪ್ರಿಲ್ 15 ರಿಂದ ಮೇ-3 ರವರೆಗೆ ಎರಡನೇ ಹಂತದ ಲಾಕ್ ಡೌನ್ ಅನ್ನು ಮಾಡಲಾಗಿದೆ. ಈ ಸಂದರ್ಭಲ್ಲಿ ಕೆಲವು ಮಾರ್ಗ ಸೂಚಿಗಳನ್ನು ಬಿಡುಗಡೆಯನ್ನು ಮಾಡಲಾಗಿದೆ. ಇದರ ಅನುಸಾರವಾಗಿಯೇ ಎಲ್ಲಾ ವ್ಯವಹಾರಗಳು ದೇಶದಲ್ಲಿ ನಡೆಯತಕ್ಕದ್ದು ಎಂದು ತಿಳಿಸಲಾಗಿದೆ.

 

 

ಕೇಂದ್ರ ಸರ್ಕಾರದಿಂದ ಲಾಕ್ಡೌನ್ ಮೇ 3ವರೆಗೆ ವಿಸ್ತರಿಸಲಾಗಿದ್ದು, ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ ಮಾರ್ಗಸೂಚಿ ಈ ಕೆಳಕಂಡತಿದೆ.

 

ಏನೆಲ್ಲಾ ಇರಲಿದೆ?

 

* ಎಲ್ಲಾ ಆಸ್ಪತ್ರೆಗಳು ತೆರೆದಿರಲಿವೆ. ಎಲ್ಲಾ ರೀತಿಯ ರೋಗಿಗಳಿಗೂ ಸೂಕ್ತ ಚಿಕಿತ್ಸೆ. ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ಎಲ್ಲವೂ ತೆರೆದಿರಲಿವೆ.

 

* ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಲು ಅನುವು. ರೈತರಿಗೆ ಪೂರಕವಾಗಿ ಗೊಬ್ಬರು, ಬೀಜ ಮತ್ತು ಕೃಷಿ ಸಲಕರಣೆಗಳನ್ನು ಮಾರಾಟ ಮಾಡುವ ಕಂಪೆನಿಗಳು ಕಾರ್ಯ ಆರಂಭಿಸಲು ಅವಕಾಶ.

 

* ಆಹಾರದ ಸರಪಳಿ ತುಂಡರಿಯದೆ ನೋಡಿಕೊಳ್ಳುವ ಸಲುವಾಗಿ ರೈತರಿಂದ ಪದಾರ್ಥಗಳನ್ನು ಕೊಂಡು ಮಾರುಕಟ್ಟೆಗೆ ಸಾಗಿಸುವ ಎಲ್ಲಾ ಮಾದರಿಯ ಸಂಪರ್ಕಕ್ಕೆ ಅವಕಾಶ.

 

* ಗ್ರಾಮೀಣ ಭಾಗದಲ್ಲಿ ಎಂಎನ್‌ಆರ್‌ಇಜಿಎ ಕೆಲಸಗಳಿಗೆ ಅನುಮತಿ. ಈ ಮೂಲಕ ಕೃಷಿ ಕೂಲಿಗಳಿಗೆ ಕೆಲಸ ಕೊಡಬಹುದು.

 

* ಅಡಿಗೆ ಅನಿಲ ಪೂರೈಕೆ, ನೀರು ಸರಬರಾಜು ಹಾಗೂ ಶುಚಿ ಕೆಲಸದಲ್ಲಿ ತೊಡಗಿರುವವರಿಗೆ ಯಾವುದೇ ತೊಂದರೆ ಇಲ್ಲ.

 

* ಗೂಡ್ಸ್ ರೈಲು ಎಂದಿನಂತೆ ಕಾರ್ಯನಿರ್ವಹಣೆ.

 

* ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಕಾರ್ಯ ನಿರ್ವಿಸಲು ಅವಕಾಶ.

 

* Iಖಿ ಉದ್ಯಮ ಶೇ.50 ರಷ್ಟು ಉದ್ಯೋಗಿಗಳ ಜೊತೆಗೆ ಕಚೇರಿಯಲ್ಲಿ ಎಂದಿನಂತೆ ಕಾರ್ಯಾರಂಭ ಮಾಡಲು ಅನುಮತಿ.

* ಗ್ರಾಮ ಪಂಚಾಯತಿ ಮಟ್ಟದ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.

 

* ವಿಶೇಷ ಆರ್ಥಿಕ ವಲಯದ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆಗಳು ಹಾಗೂ ಆಹಾರ ಸಂರಕ್ಷಣಾ ಘಟಕಗಳು ಎಂದಿನಂತೆ ಕಾರ್ಯಾರಂಭ ಮಾಡಬಹುದು. ಆದರೆ, ಉದ್ಯೋಗಿಗಳನ್ನು ಸಾಮಾಜಿಕ ಅಂತರದ ನಿಮಯಮಗಳಿಗೆ ಅನುಸಾರವಾಗಿ ಕೈಗಾರಿಕೆಗಳಿಗೆ ಕರೆತರಬೇಕು. ಉತ್ತಮ ಸಾರಿಗೆ ವ್ಯವಸ್ಥೆ ಮಾಡಬೇಕು.

 

 

Find Out More:

Related Articles: