ಲಾಕ್ ಡೌನ್ 4.0ದಲ್ಲಿ ಆರೋಗ್ಯ ಸೇತು ಬಗ್ಗೆ ತಿಳಿಸಿರುವ ಮಹತ್ವದ ವಿಚಾರ ಏನು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Soma shekhar

ಕೊರೋನಾ ವೈರಸ್ ಅನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಸೇತು ಆಫ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆಯನ್ನು ಮಾಡಿತ್ತು. ಆರೋಗ್ಯ ಆಫ್ ಅನ್ನು ಪ್ರತಿಯೊಬ್ಬ ನಾಗರೀಕನೂ ಸಹ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿತ್ತು. ಈ ಬಗ್ಗೆ ಲಾಕ್ ಡೌನ್ 4.0 ನ ಮಾರ್ಗ ಸೂಚಿಯಲ್ಲೂ ಕೂಡಾ ಆರೋಗ್ಯ ಸೇತು ಆಫ್ ನ ಮಹತ್ವವನ್ನು ತಿಳಿಸಲಾಗಿದೆ. ಅಷ್ಟಕ್ಕೂ ಲಾಕ್ ಡೌನ್ 4.0 ಮಾರ್ಗ ಸೂಚಿಯಲ್ಲಿ ಆರೋಗ್ಯ ಸೇತು ಆಫ‍್ ಬಗ್ಗೆ ತಿಳಿಸಿರುವುದೇನು..?

 

  ಕೋವಿಡ್ -19 ಸೋಂಕು ಪ್ರಕರಣಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಆರೋಗ್ಯ ಸೇತು ಆಯಪ್ ಅನ್ನು ಬಿಡುಗಡೆ ಮಾಡಿತ್ತು. ಮಾತ್ರವಲ್ಲದೆ ಇದನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಡೌನ್ ಲೋಡ್ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೇ ಲಾಕ್ ಡೌನ್ 4ನೇ ಹಂತದ ಮಾರ್ಗ ಸೂಚಿಯಲ್ಲಿ ಸರ್ಕಾರವು ಆರೋಗ್ಯ ಸೇತು ಆಯಪ್ ಗೆ ಸಂಬಂಧಿಸಿದ ನಿಯಮವನ್ನು ಸರಳೀಕರಿಸಿದೆ. ಅಂದರೇ ಈ ಆಯಪ್ ಅನ್ನು ಡೌನ್ ಲೋಡ್ ಮಾಡುವ ಆಯ್ಕೆಯನ್ನು ಐಚ್ಚಿಕಗೊಳಿಸಿದೆ(optional). ಗೃಹ ಸಚಿವಾಲಯ ಭಾನುವಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿ ಆಯಪ್‌ ನ ಪ್ರಯೋಜನಗಳಿಗೆ ವಿಶೇಷ ಒತ್ತು ನೀಡಿದೆ. ಇದು ವ್ಯಕ್ತಿಗಳು ಮತ್ತು ಸಮಾಜದ ರಕ್ಷಣೆಗೆ ಸಹಾಯಕವಾಗುತ್ತದೆ. ಮತ್ತು ಸಂಭವನೀಯ ಅಪಾಯವನ್ನು ಮೊದಲೇ ಕಂಡುಹಿಡಿಯಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ.

 

ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ, ನೌಕರರು ಈ ಆಯಪ್ ಡೌನ್ ಲೋಡ್ ಮಾಡಿಕೊಳ್ಳುವುದು ಅಗತ್ಯ. ಆದರೆ ಇದು ಕೇವಲ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮೇ 1 ರಂದು ಜಾರಿಗೆ ತಂದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರವೂ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ನೌಕರರರಿಗೆ ಆರೋಗ್ಯ ಸೇತು ಆಯಪ್ ಅನ್ನು ಕಡ್ಡಾಯಗೊಳಿಸಿತ್ತು. ಆಯಾ ಸಂಸ್ಥೆಯು ತನ್ನ ಉದ್ಯೋಗಿಗಳು ಆರೋಗ್ಯ ಸೇತು ಆಯಪ್ ಡೌನ್ ಲೋಡ್ ಮಾಡುವ ಹೊಣೆಗಾರಿಕೆಯನ್ನು ಹೊರಬೇಕು ಎಂಬುದನ್ನು ತಿಳಿಸಿತ್ತು.

 

ಆದರೇ ಭಾನುವಾರ ಬಂದ 4ನೇ ಮಾರ್ಗಸೂಚಿಯಲ್ಲಿ ಸ್ಥಳೀಯ ಅಧಿಕಾರಿಗಳು ಸ್ಮಾರ್ಟ್ ಫೋನ್ ಹೊಂದಿರುವ ಜನರಿಗೆ ಆರೋಗ್ಯ ಸೇತು ಆಯಪ್ ಬಳಸುವಂತೆ ಸಲಹೆ ನೀಡಬಹುದು. ಅದರ ಜೊತೆಗೆ ಕಂಟೈನ್ ಮೆಂಟ್ ಝೋನ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಈ ಆಯಪ್ ಬಳಸಿ ಕ್ಷಣ ಕ್ಷಣ ದ ಆರೋಗ್ಯ ಮಾಹಿತಿಯನ್ನು ಅಪ್ ಡೇಟ್ ಮಾಡುವಂತೆ ಸೂಚಿಸಬೇಕು ಎಂಬುದನ್ನು ಮಾತ್ರ ಉಲ್ಲೇಖಿಸಲಾಗಿದೆ.

ಕೆಲ ದಿನಗಳ ಹಿಂದೆ ಏಲಿಯಟ್ ಆಲ್ಡರ್ಸನ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿರುವ ಫ್ರೆಂಚ್ ಹ್ಯಾಕರ್ ಒಬ್ಬಾತ ಆರೋಗ್ಯ ಸೇತು ಆಯಪ್ ನಲ್ಲಿ ಲೋಪ ಕಂಡುಬಂದಿದೆ. ಇದು 90 ಮಿಲಿಯನ್ ಭಾರತೀಯರ ಗೌಪ್ಯತಾ ಮಾಹಿತಿಗೆ ಧಕ್ಕೆ ತರುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಆದರೇ ಕೂಡಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ. ಮಾತ್ರವಲ್ಲದೆ ಶೇ 100% ಈ ಆಯಪ್ ಸುರಕ್ಷಿತ ಎಂದು ಹೇಳಿಕೊಂಡಿದೆ.

 

ಆರೋಗ್ಯ ಸೇತು ಆಯಪ್ ಅನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಅಪ್ ಡೇಟ್ ಮಾಡಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರ ಡೇಟಾ ಕೂಡ ಸುರಕ್ಷಿತವಾಗಿದ್ದು ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಸರ್ಕಾರ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.

 

Find Out More:

Related Articles: