ಸಾಮಾನ್ಯ ಸಭೆ ಅಧಿವೇಶನವನ್ನುಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದೇನು..?

Soma shekhar
ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ರಚನೆಗಳಿಗೆ ಭಾರತದ ಪಾತ್ರವನ್ನು ವಿಸ್ತರಿಸುವಂತೆ ಬಲವಾಗಿ ಆಗ್ರಹಿಸಿದರು. ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಭಾರತಕ್ಕೆ ಹೆಮ್ಮೆ ಪಡುತ್ತಿದೆ, ಆದರೆ ವಿಶ್ವಸಂಸ್ಥೆಯ ಸುಧಾರಣೆಗಳ ಪ್ರಕ್ರಿಯೆಗಾಗಿ ಭಾರತದ ಜನತೆ ಬಹಳ ದಿನಗಳಿಂದ ಕಾಯುತ್ತಿದ್ದೇವೆ ಎಂಬುದು ಕೂಡ ಸತ್ಯ ಎಂದು ವಾರ್ಷಿಕ ಸಂಯುಕ್ತ ಸಾಮಾನ್ಯ ಸಭೆ ಅಧಿವೇಶನವನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.





ಸದಸ್ಯ ರಾಷ್ಟ್ರಗಳು ಒಟ್ಟಾಗಿ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಶ್ರಮಿಸಬೇಕೆಂದು ಸಲಹೆ ನೀಡಿದ ಪ್ರಧಾನಿ ಮೋದಿ, ಈ ಹೋರಾಟದಲ್ಲಿ ವಿಶ್ವಸಂಸ್ಥೆಯ ಪಾತ್ರವೇನಿದೆ ಎಂದು ಪ್ರಶ್ನಿಸಿದ್ದಾರೆ. 'ಕಳೆದ 8-9 ತಿಂಗಳುಗಳಿಂದ ಇಡೀ ಜಗತ್ತು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಸಂಯುಕ್ತ ರಾಷ್ಟ್ರಗಳು ಜಂಟಿ ಹೋರಾಟದಲ್ಲಿ ಎಲ್ಲಿವೆ? ಅದರ ಪರಿಣಾಮಕಾರಿ ಪ್ರತಿಕ್ರಿಯೆ ಎಲ್ಲಿದೆ?' ಪಿಎಂ ಪ್ರಶ್ನಿಸಿದ್ದಾರೆ.






ಯುಎನ್ ನ ಸ್ವರೂಪದಲ್ಲಿ ಸುಧಾರಣೆಯ ಅಗತ್ಯವಿದೆ ಮತ್ತು ಭಾರತದಲ್ಲಿ 1.3 ಶತಕೋಟಿ ಜನರ ನಡುವೆ ವಿಶ್ವಸಂಸ್ಥೆ ಹೊಂದಿರುವ ನಂಬಿಕೆ ಮತ್ತು ಗೌರವವು ಅಸಮಾನವಾಗಿದೆ. ಆದರೆ ವಿಶ್ವಸಂಸ್ಥೆಯ ಸುಧಾರಣಾ ಪ್ರಕ್ರಿಯೆಯು ತಾರ್ಕಿಕ ಅಂತ್ಯವನ್ನ ತಲುಪುತ್ತದೆಯೇ ಎಂಬ ಬಗ್ಗೆ ಭಾರತದ ಜನರು ಚಿಂತಿತರಾಗಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಗಳಿಂದ ಭಾರತವನ್ನ ಎಷ್ಟು ಕಾಲ ದೂರ ಇಡಲಾಗುತ್ತದೆ ಎಂದು ಖಾರವಾಗಿ ಕೇಳಿದ್ದಾರೆ.





'ನಾವು ಬಲಿಷ್ಠರಾಗಿದ್ದಾಗ, ನಾವು ಎಂದಿಗೂ ಜಗತ್ತಿಗೆ ಬೆದರಿಕೆ ಒಡ್ಡಲಿಲ್ಲ, ನಾವು ದುರ್ಬಲರಾದಾಗ, ನಾವು ಎಂದಿಗೂ ಜಗತ್ತಿನ ಮೇಲೆ ಹೊರೆಯಾಗುತ್ತಿರಲಿಲ್ಲ. ಆ ದೇಶದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳು ಜಗತ್ತಿನ ಬಹುಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶವು ಎಷ್ಟು ಕಾಲ ಕಾಯಬೇಕು' ಎಂದು ಪಿಎಂ ಪ್ರಶ್ನಿಸಿದ್ದಾರೆ.





ಶಾಂತಿ ಕಾಪಾಡುವ ಮೂಲಕ ವೀರ ಯೋಧರನ್ನ ಕಳೆದುಕೊಂಡ ದೇಶ ಭಾರತ. ಇಂದು ಪ್ರತಿಯೊಬ್ಬ ಭಾರತೀಯನೂ ವಿಶ್ವಸಂಸ್ಥೆಯಲ್ಲಿ ಭಾರತದ ಕೊಡುಗೆಯನ್ನು ನೋಡಿ, ವಿಶ್ವಸಂಸ್ಥೆಯಲ್ಲಿ ಭಾರತದ ಪಾತ್ರವನ್ನು ವಿಸ್ತರಿಸಬೇಕೆಂಬ ಹಂಬಲವನ್ನು ಹೊಂದಿದೆ ಎಂದು ಅವರು ಹೇಳಿದರು.




ಕೊರೊನಾ ವಿಚಾರದಲ್ಲಿ ಭಾರತದ ಪಾತ್ರವನ್ನ ಶ್ಲಾಘಿಸಿದ ಪ್ರಧಾನಿ ಮೋದಿ, ಅತ್ಯಂತ ಕಠಿಣವಾದ ಸಂದರ್ಭದಲ್ಲಿ ಭಾರತದ ಔಷಧ ಉದ್ಯಮವು 150ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಗಳನ್ನು ಕಳುಹಿಸಿದೆ ಎಂದು ಹೇಳಿದ್ರು. 'ವಿಶ್ವದಲ್ಲೇ ಅತಿ ದೊಡ್ಡ ಲಸಿಕೆಯನ್ನ ಉತ್ಪಾದಿಸುವ ದೇಶವಾಗಿ, ನಾನು ಇಂದು ಜಾಗತಿಕ ಸಮುದಾಯಕ್ಕೆ ಮತ್ತೊಂದು ಭರವಸೆ ನೀಡಲು ಬಯಸುತ್ತೇನೆ. ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಎಲ್ಲ ಮಾನವ ಕುಲಕ್ಕೆ ಸಹಾಯ ಮಾಡಲು ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನ ಬಳಸಲಾಗುವುದು' ಎಂದರು.





ಶುಕ್ರವಾರ ಭಾರತದ ವಿರುದ್ಧ ಭಾಷಣ ಮಾಡಿದ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್, ಭಯೋತ್ಪಾದನೆ ವಿಷಯವನ್ನ ಪಾಕಿಸ್ತಾನಕ್ಕೆ ವಾಪಸ್ ನೀಡುವ ಸಾಧ್ಯತೆ ಇದೆಯೆಂದು ಊಹಿಸಲಾಗಿತ್ತು. ಆದ್ರೆ, ಅವ್ರ ಭಾಷದಲ್ಲಿ ಎಲ್ಲಿಯೂ ಪಾಕಿಸ್ತಾನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ.

Find Out More:

Related Articles: