
ಅಮೇರಿಕಾಕ್ಕೆ ವಲಸೆ ಹೋಗುವವರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಿರುವ ಅಮೇರಿಕಾ..!!
ವಾಷಿಂಗ್ಟನ್: ವಾಷಿಂಗ್ಟನ್: ಕೊರೋನಾ ವೈರಸ್ ಇಂದಾಗಿ ಸಾವಿರಾರು ಜನರನ್ನು ಕಳೆದುಕೊಂಡಿರುವ ಅಮೇರಿಕಾ ಕೊರೋನಾ ವೈರಸ್ ಅನ್ನು ಮಟ್ಟಹಾಕುವ ಉದ್ದೇಶದಿಂದ ಈ ಒಂದು ಕ್ರಮವನ್ನು ಕೈಗೊಳ್ಳಲು ಅಮೇರೀಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದರಿಸಿದ್ದಾರೆ ಅಷ್ಟಕ್ಕೂ ಟ್ರಂಪ್ ತೆಗೆದು ಕೊಳ್ಳಬಹುದಾದ ಕ್ರಮ ಏನು ಗೊತ್ತಾ..?
ಕರೊನಾ ವೈರಸ್ COVID19 ಸೋಂಕು ಜಾಗತಿಕ ಮಟ್ಟದಲ್ಲಿ ಅಮೆರಿಕದಲ್ಲೇ ಹೆಚ್ಚಾಗಿದ್ದು ಒಟ್ಟಾರೆ ವ್ಯವಸ್ಥೆಯೇ ತಲ್ಲಣಗೊಂಡಿದೆ. ಚೀನಾದ ವುಹಾನ್ನಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್ ಕ್ರಮೇಣ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಹಬ್ಬಿದೆ. ಇದರ ತಡೆಗೆ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಆಯಾ ದೇಶಗಳ ಅರ್ಥವ್ಯವಸ್ಥೆ ಅಷ್ಟೇ ಅಲ್ಲ ಜಾಗತಿಕ ಅರ್ಥವ್ಯವಸ್ಥೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಒಂದು ಪರಿಣಾಮ ಜಗತ್ತಿನ ದೊಡ್ಡಣನನ್ನು ಕಾಡದೆ ಬಿಟ್ಟಿಲ್ಲ
ಹೌದು ವಿಶ್ವದ ದೊಡ್ಡಣ್ಣನಂತಿರುವ ಅಮೇರಿಕಾದಲ್ಲಿ ಅಂದಾಜು 8 ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 42,600ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ನಡುವೆ, ಅಮೆರಿಕದ ಅರ್ಥವ್ಯವಸ್ಥೆಗೆ ಪುನಶ್ಚೇತನ ಒದಗಿಸುವುದಕ್ಕೆ ಇತ್ತೀಚೆಗಷ್ಟೇ ಮೂರು ಹಂತದ ಯೋಜನೆಯನ್ನು ಗವರ್ನರ್ಗಳ ಮುಂದಿಟ್ಟಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕಕ್ಕೆ ಹೊರದೇಶದಿಂದ ವಲಸೆ ಬರುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಜಗತ್ತಿನ ಗಮನಸೆಳೆದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕಣ್ಣಿಗೆ ಕಾಣದಿರುವ ಶತ್ರುಗಳ ದಾಳಿಯ ಹಿನ್ನೆಲೆಯಲ್ಲಿ ಮತ್ತು ಅಮೆರಿಕಾದ ಪ್ರಜೆಗಳ ಉದ್ಯೋಗಗಳನ್ನು ಕಾಪಾಡುವ ಅಗತ್ಯವಿರುವುದರಿಂದ ಅಮೆರಿಕಕ್ಕೆ ಹೊರದೇಶಗಳಿಂದ ವಲಸೆ ಬರುವವರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವ ಆದೇಶಕ್ಕೆ ಸಹಿ ಹಾಕುತ್ತೇನೆ ಎಂದು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ತಿಳಿಸಿದ್ದಾರೆ.
ಈ ಆದೇಶ ಯಾವ ದಿನದಿಂದ ಜಾರಿಗೆ ಬರಲಿದೆ ಮತ್ತು ಎಲ್ಲಿಯವರೆಗೆ ಇರುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಇದರಿಂದ ಅಮೆರಿಕಾದ ಕಾನೂನಾತ್ಮಕ ಮತ್ತು ರಾಜಕೀಯ ವಿಷಯಗಳಿಗೆ ಹಿನ್ನಡೆಯಾಗಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಶ್ವೇತಭವನದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಅಧ್ಯಕ್ಷ ಟ್ರಂಪ್ ತಮ್ಮ ವಿಶೇಷ ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಈ ಆದೇಶ ತರುತ್ತಿದ್ದಾರೆ. ಈ ಹಿಂದೆ ಅವರು ಕೆಲವು ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ್ದ ಸಂದರ್ಭದಲ್ಲಿ ವಿದೇಶಗಳಲ್ಲಿ ಮತ್ತು ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ವಿರೋಧ ವ್ಯಕ್ತವಾಗಿ ತೀವ್ರ ಗಲಭೆ ಉಂಟಾಗಿತ್ತು.
ಈ ಹೊಸ ಆದೇಶ ಯಾವ ರೀತಿ ಅಲ್ಲಿನ ಸರ್ಕಾರ ಮತ್ತು ದೇಶದ ಒಟ್ಟಾರೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಾಗಿದೆ.