ರಷ್ಯಾ ಭಾರತಕ್ಕೆ ನೀಡುತ್ತಿರುವ ಕೊರೋನಾ ಔಷಧಿ ಎಷ್ಟು ಗೊತ್ತಾ?

Soma shekhar
ಕೊರೋನಾ ವೈರಸ್ ಗೆ ವಿಶ್ವದ ಅನೇಕ ರಾಷ್ಟ್ರಗಳು ಔಷಧಿಯನ್ನು ಸಂಶೋಧಿಸುತ್ತಿದ್ದು ಈಗಾಗಲೇ ರಷ್ಯಾ, ಇಂಗ್ಲೆಂಡ್ ಅಂತಹ ದೇಶಗಳು ಕೊರೋನಾ ಔಷಧಿಯ ಸಂಶೋಧನೆಯಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಿವೆ, ಅದರಲ್ಲೂ ರಷ್ಯಾ ತನ್ನ ದೇಶದಲ್ಲಿ ಸಂಶೋಧಿಸಲಾದ ಔಷಧಿಯನ್ನು ಪ್ರಪಂಚದ ಮೊದಲ ಕೊರೋನಾ ಔಷಧಿ ಎಂದು ಹೇಳಿಕೊಳ್ಳುತ್ತಿದೆ. ಈ ನಡುವೆ ಕೊರೋನಾ ಔಷಧಿಯನ್ನು ಭಾರತಕ್ಕೂ ಕೊಡುವಂತಹ ಯೋಜನೆಯನ್ನು ರಷ್ಯಾ ಹಾಕಿಕೊಂಡಿದೆ.  



ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿಯುವ ಪ್ರಯೋಗದಲ್ಲಿ ಮಹತ್ವದ ಯಶಸ್ಸನ್ನು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ರಷ್ಯಾ ತನ್ನ ಈ ಲಸಿಕೆಯ 10 ಕೋಟಿ ಡೋಸ್ ಗಳನ್ನು (100 ಮಿಲಿಯನ್) ಭಾರತಕ್ಕೆ ನೀಡಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯನ್ ಡೈರೆಕ್ಟ್ ಇನ್ ವೆಸ್ಟ್ ಮೆಂಟ್ ಫಂಡ್ (RDIF) ಅಧಿಕೃತ ಘೋಷಣೆಯನ್ನು ಹೊರಡಿಸಿದೆ. ಇದರನ್ವಯ RDIF ನೂತನ ಕೋವಿಡ್ 19 ಲಸಿಕೆ ಸ್ಪುಟ್ನಿಕ್-V ಅನ್ನು ಭಾರತದೊಂದಿಗೆ ಹಂಚಿಕೊಳ್ಳಲು ಡಾ.ರೆಡ್ಡೀಸ್ ಲ್ಯಾಬೊರೇಟರಿಯೊಂದಿಗೆ ಒಪ್ಪಂದವನ್ನೂ ಸಹ ಮಾಡಿಕೊಂಡಿದೆ.



ರಷ್ಯಾದ ರಾಷ್ಟ್ರೀಯ ಸಂಪತ್ತು ನಿಧಿಯಾಗಿರುವ RDIF ನೀಡಿರುವ ಹೇಳಿಕೆಯ ಪ್ರಕಾರ ಅದು ತನ್ನ ದೇಶದಲ್ಲಿ ಅಭಿವೃದ್ಧಪಡಿಸಲಾಗಿರುವ ಕೋವಿಡ್ 19 ಲಸಿಕೆ ಸ್ಪುಟ್ನಿಕ್-Vನ್ನು ಭಾರತದಲ್ಲಿ ಚಿಕಿತ್ಸಕ ಪ್ರಯೋಗಕ್ಕೊಳಪಡಿಸಲು ಮತ್ತು ಆ ಬಳಿಕ ಇಲ್ಲಿ ಆ ಲಸಿಕೆಯ ವಿತರಣೆಗಾಗಿ ಡಾ, ರೆಡ್ಡೀಸ್ ಲ್ಯಾಬೊರೇಟರಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದೆ.

 



ಮತ್ತು ಶಾಸನಾತ್ಮಕ ಒಪ್ಪಿಗೆ ದೊರೆತ ತಕ್ಷಣವೇ ಈ ಚಟುವಟಿಕೆ ಕಾರ್ಯರೂಪಕ್ಕೆ ಬರಲಿದೆ ಎಂದೂ ಸಹ RDIF ತಿಳಿಸಿದೆ. ‘ಭಾರತದಿಂದ ಶಾಸನಾತ್ಮಕ ಒಪ್ಪಿಗೆಯೆಲ್ಲಾ ದೊರೆತ ಬಳಿಕ RDIF 100 ಮಿಲಿಯನ್ ಡೋಸ್ ಲಸಿಕೆಯನ್ನು ಡಾ. ರೆಡ್ಡೀಸ್ ಗೆ ಪೂರೈಕೆ ಮಾಡಲಿದೆ. ಸುರಕ್ಷತಾ ಒಪ್ಪಿಗೆಯನ್ನು ಪಡೆದುಕೊಂಡಿರುವ ಸ್ಪುಟ್ನಿಕ್-V ಮನುಷ್ಯ ದೇಹದ ರೋಗನಿರೋಧಕ ಶಕ್ತಿಯ ಕೋಶಗಳ ಮೇಲೆ ಸೂಕ್ತ ಹಾಗೂ ಸುರಕ್ಷಿತ ರೀತಿಯಲ್ಲಿ ಅಧ್ಯಯನಕ್ಕೊಳಪಟ್ಟಿದ್ದು, ಕೋವಿಡ್ 19 ಮಹಾಮಾರಿಗೆ ಲಸಿಕೆ ರೂಪದಲ್ಲಿ ಚಿಕಿತ್ಸಕ ಪ್ರಯೋಗಕ್ಕೊಳಪಡುತ್ತಿದೆ’ ಎಂದು RDIF ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವುದಾಗಿ ಇಂಡಿಯಾ ಟುಡೇ ವೆಬ್ ಸೈಟ್ ವರದಿ ಮಾಡಿದೆ.




ಕೋವಿಡ್ 19 ಸೋಂಕಿನಿಂದ ತೀವ್ರವಾಗಿ ಬಾಧಿತವಾಗಿರುವ ದೇಶಗಳಲ್ಲಿ ಭಾರತವೂ ಒಂದಾಗಿರುವುದರಿಂದ ಡಾ. ರೆಡ್ಡೀಸ್ ನೊಂದಿಗೆ ಸಹಭಾಗಿತ್ವವನ್ನು ಹೊಂದಲು ನಮಗೆ ಸಂತೋಷವಾಗುತ್ತಿದೆ ಮತ್ತು ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ನಾವು ಉತ್ತಮವಾದ ಸಂಶೋಧನೆಯನ್ನೇ ಭಾರತದೊಂದಿಗೆ ಹಂಚಿಕೊಳ್ಳಲಿದ್ದೇವೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್ ಡಿಮಿಟ್ರಿವ್ ಅವರು ಅಭಿಪ್ರಾಯಪಟ್ಟಿದ್ದಾರೆ.


 


 ‘ಸ್ಪುಟ್ನಿಕ್-V ಲಸಿಕೆಯ ಪ್ರಥಮ ಮತ್ತು ದ್ವಿತೀಯ ಹಂತದ ಪ್ರಯೋಗ ಯಶಸ್ವಿಯಾಗಿ ಭರವಸೆ ಮೂಡಿಸಿರುವುದರಿಂದ RDIF ಸಹಯೋಗದೊಂದಿಗೆ ಈ ಲಸಿಕೆಯನ್ನು ಭಾರತಕ್ಕೆ ಪರಿಚಯಿಸಲು ನಮಗೆ ಹರ್ಷವಾಗುತ್ತಿದೆ ಮತ್ತು ಇಲ್ಲಿ ನಾವು ಇಲ್ಲಿನ ನಿಯಮಗಳಿಗೆ ಅನುಸಾರವಾಗಿ ಮೂರನೇ ಹಂತದ ಪ್ರಯೋಗವನ್ನು ಪ್ರಾರಂಭಿಸಲಿದ್ದೇವೆ’ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿಯ ಸಹ-ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಜಿ ವಿ ಪ್ರಸಾದ್ ಅವರು ಹೇಳಿದ್ದಾರೆ.

Find Out More:

Related Articles: