ಸಿದ್ದರಾಮಯ್ಯ ಡಿಕೆಶಿ ಪಕ್ಕಾ ಫುಲ್ ಮಾಸ್ಟರ್ ಪ್ಲಾನ್!

Soma shekhar
   
ಬೆಂಗಳೂರು: ಹಗ್ಗಜಗ್ಗಾಟ ದಲ್ಲಿ ಮಧ್ಯಕ್ಕೆ ಸಿಕ್ಕಿ ಹಾಕಿಕೊಂಡಿರುವ ಕೆಪಿಸಿಸಿ ಕೊನೆಯಲ್ಲಿ ಇದೀಗ ಒಂದು ಹಂತಕ್ಕೆ ಬಂದು ತಲುಪಿದೆ. ಹೌದು, ಅದು ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಸ್ಟರ್ ಪ್ಲಾನ್ ನಿಂದ. ಹೌದು, ಆ ಮಾಸ್ಟರ್ ಪ್ಲಾನ್ ನ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ರಾಜ್ಯದಲ್ಲಿ ಸಾಕಷ್ಟು ಕಗ್ಗಂಟಾಗಿದ್ದ ಕೆಪಿಸಿಸಿ ಅಧ್ಯಕ್ಷರ ನೇಮಕ ಅಂತೂ ಇಂತೂ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ತಮ್ಮ ಬಹುಕಾಲದ ಆಸೆಯನ್ನ ಈಡೇರಿಸಿಕೊಳ್ಳುವಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಹಾದಿಯೂ ಸುಗಮವಾಗಿದೆ. ಇಂದು ಕಾವೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವೊಲಿಸುವಲ್ಲಿ ಡಿಕೆಶಿ ಪಾಸಾಗಿದ್ದು, ಮುಂದಿನ ಕಾರ್ಯದ ಕುರಿತು ಮಾಸ್ಟರ್ ಪ್ಲಾನ್ ಹಾಕಿದ್ದಾರೆ.
 
ಭಾನುವಾರ ಡಿಕೆಶಿ ಎರಡು ಗಂಟೆಗಳ ಕಾಲ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ಮಟ್ಟಿಗೆ ಪಕ್ಷ ಸಾಕಷ್ಟು ಕುಸಿದಿದೆ. ಈ ಸಂದರ್ಭದಲ್ಲಿ ಪಕ್ಷವನ್ನ ಮೇಲಕ್ಕೆತ್ತುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ನಾನು ಕೆಪಿಸಿಸಿ ಸ್ಥಾನವನ್ನು ಹೊರುವುದಕ್ಕೆ ಸಿದ್ಧನಿದ್ದೇನೆ. ಸಾರ್ವತ್ರಿಕ ಚುನಾವಣೆಯವರೆಗೆ ಎಲ್ಲ ಖರ್ಚನ್ನೂ ನಾನೇನೊಡಿಕೊಳ್ಳುತ್ತೇನೆ ಎಂದು ಕೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
 
ಅಂತೆಯೇ ಸಿದ್ದರಾಮಯ್ಯ ಅವರ ಜೊತೆ ಮಾತನಾದ ಡಿಕೆಶಿ, ಸೋನಿಯಾ ಮೇಡಂ ಹಾಗೂ ರಾಹುಲ್ ಗಾಂಧಿಯವರು ನನ್ನನ್ನ ಆಶೀರ್ವದಿಸಿದ್ದಾರೆ. ಆದರೆ, ನಿಮ್ಮ ಹಿರಿಯ ಒಲವು ಇಲ್ಲದೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ಅವರು ಮಾತನಾಡಿ, ನಾನು ನಿನ್ನ ಪರವಾಗಿಯೇ ಮಾತನಾಡಿದ್ದೇನೆ.
 
ಡೋಂಟ್ ವರಿ ಎಲ್ಲರೂ ಸೇರಿಯೇ ಪಕ್ಷವನ್ನ ಬಲಪಡಿಸೋಣ. ನಾನು ಮೇಡಂ ಬಳಿ ಹೇಳುತ್ತೇನೆ ಅಂತ ಭರವಸೆ ಕೊಟ್ಟು ಕಳಿಸಿದ್ದಾರೆ. ಹೀಗಾಗಿ ಡಿಕೆಶಿ ಹಾದಿ ಸುಗಮವಾದಂತಾಗಿದೆ ಎಂದು ರಾಜಕೀಯವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಸಿದ್ದು ಭೇಟಿ ಬಳಿಕ ಡಿಕೆಶಿ ಇಂದು ದೆಹಲಿಗೆ ತೆರಳಲಿದ್ದು, ನಾಳೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡುವ ಸಾದ್ಯತೆಯಿದೆ. ನಿನ್ನೆ ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ಸಭೆಯ ನಿರ್ಧಾರ ಹಾಗೂ ಸಿದ್ದು ಜೊತೆಗಿನ ಮಾತುಕತೆ ಬಗ್ಗೆ ತಿಳಿಸಲಿದ್ದಾರೆ.

Find Out More:

Related Articles: