12 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಶಿಲ್ಪಾಶೆಟ್ಟಿ

somashekhar
ಶಿಲ್ಪಾಶೆಟ್ಟಿಗೆ 44 ವರ್ಷ ವಯಸ್ಸು ಅಂದರೆ ಯಾರಿಗಾದರು ನಂಬೋಕೆ ಸಾಧ್ಯನಾ? ಇಲ್ಲ ಬಿಡಿ. ಆದರೆ ಅಸಲಿಗೆ ಅವರಿ ವರ್ಷ ವಯಸ್ಸು. ಇದೀಗ ವಿಷ್ಯ ಏನಪ್ಪ ಅಂದರೆ,   ವರ್ಷಗಳ ಬಳಿಕ ಇದೀಗ ಶಿಲ್ಪಾ ಶೆಟ್ಟಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.


ಹೌದು, ಇಷ್ಟು ದಿನಗಳ ಕಾಲ ತಮ್ಮದೇ ಅಡುಗೆ ಚಾನೆಲ್ ಒಂದರಲ್ಲಿ ಬ್ಯುಸಿಯಾಗಿದ್ದ ಶಿಲ್ಪಾ ಶೆಟ್ಟಿ ಇದೀಗ ಬಿಡುವು ಮಾಡಿಕೊಂಡಿದ್ದಾರೆ. ಇನ್ನೂ ಹೆಸರಿಡದ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದಾರೆ. ಹೌದು ಈ ಹಿಂದೆ ೨೦೦೭ ರಲ್ಲಿ ಶಿಲ್ಪಾ ಶೆಟ್ಟಿ ಅಪ್ನೆ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ.


ಇದೀಗ ದಿಲ್ಜಿತ ದೋಸಂತ್ ಹಾಗೂ ಯಾಮಿ ಗೌತಮ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಲೇಖಕಿಯ ಪಾತ್ರವನ್ನು ಮಾಡಲಿದ್ದಾರೆ, ಅಷ್ಟಕ್ಕೂ ಈ ಚಿತ್ರ ರಮೇಶ್ ತೌರಾನಿ ಅವರ ಟಿಪ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ವಿಭಾಸಿಂಗ್ ಅರ್ಷದ್ ಸಯ್ಯದ್ ಅವರ ಚಿತ್ರಕಥೆ, ಸೊಮ್ ಹೌರಾನ ಅವರ ನಿರ್ದೇಶನ ಈ ಚಿತ್ರಕ್ಕಿದೆ.


Find Out More:

Related Articles: