ಮಂಗಳವಾರದ ಕೊರೋನಾ ವರದಿ ಜನರನ್ನು ಬೆಚ್ಚಿ ಬೀಳಿಸದೇ ಇರದು..?

Soma shekhar
ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು. ಪ್ರತಿನಿತ್ಯ ಸಾವಿರಾರು ಜನರು ಈ ಕೊರೋನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಈ ಪರಿಸ್ಥಿತಿ ನಮ್ಮರಾಜ್ಯದಲ್ಲೇನು ಕಡಿಮೆ ಇಲ್ಲ. ಪ್ರತಿನಿತ್ಯ ಕೊರೋನಾ ಸೋಂಕು ರಾಜ್ಯದಲ್ಲಿ 7ಸಾವಿರದ ಗಡಿಯನ್ನು ದಾಟಿ ಮುಂದೋಗುತ್ತಿದೆ. ಪ್ರತಿನಿತ್ಯ ದಾಖಲಾಗುತ್ತಿರುವ ಕೊರೋನಾ ಸಂಖ್ಯೆಯನ್ನು ನೋಡಿದರೆ ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಇಂದು ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

ರಾಜ್ಯದಲ್ಲಿ ಕೊರೊನಾ ಸೋಂಕು ಸೋಮವಾರ ಕೊಂಚಮಟ್ಟಿಗೆ ಇಳಿಕೆಯಾಗಿತ್ತು. ಆದರೆ, ಮಂಗಳವಾರ (ಆ.18) ಮತ್ತೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮಂಗಳವಾರ ರಾಜ್ಯದಲ್ಲಿ 7665 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಮವಾರ 6317 ಪ್ರಕರಣಗಳು ವರದಿಯಾಗಿದ್ದವು. ಆದರೆ, ಇಂದು ಕೂಡ ಹೊಸ ಪ್ರಕರಣಗಳಿಗಿಂತಲೂ ಗುಣವಾದವರ ಸಂಖ್ಯೆ ಹೆಚ್ಚಿದೆ. ಇಂದು ಒಂದೇ ದಿನ 8387 ಮಂದಿ ಸೋಂಕಿತರು ಗುಣವಾಗಿದ್ದಾರೆ.
139 ಸಾವಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ ನಾಲ್ಕು ಸಾವಿರ ದಾಟಿದ್ದು, ಈವರೆಗೆ ಸೋಂಕಿನಿಂದ 4201 ಜನ ಮೃತಪಟ್ಟಿದ್ದಾರೆ.

 

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 240948ಕ್ಕೆ ಏರಿಕೆಯಾಗಿದೆ. ಈ ಪೈಕಿ 1,56949 ಮಂದಿ ಈಗಾಗಲೇ ಗುಣವಾಗಿದ್ದು, ಇವರೆಲ್ಲರೂ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 79782ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 697 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

 ಮಂಗಳವಾರ ಒಂದೇ ದಿನ 28,867 ಆ್ಯಂಟಿಜೆನ್‌ ಟೆಸ್ವ್‌, ಆರ್‌ಟಿ-ಪಿಸಿಆರ್‌ ಮತ್ತು ಇತರ 30221 ಟೆಸ್ವ್‌ ಗಳು ಸೇರಿ ಒಟ್ಟು 59088 ಟೆಸ್ವ್‌ ಮಾಡಲಾಗಿದೆ. ಇದುವರೆಗೆ 551725 ಆ್ಯಂಟಿಜೆನ್‌ ಟೆಸ್ವ್‌ ಮಾಡಲಾಗಿದೆ. 1582449 ಆರ್‌ಟಿ-ಪಿಸಿಆರ್‌ ಮತ್ತು ಇತರ ಟೆಸ್ವ್‌ ಮಾಡಲಾಗಿದೆ.
 

 ಬೆಂಗಳೂರಲ್ಲಿ 2242 ಸೋಂಕು
ಬೆಂಗಳೂರಲ್ಲಿ ಮಂಗಳವಾರ ಒಂದೇ ದಿನ 2242 ಕೇಸ್‌ಗಳು ವರದಿಯಾಗಿವೆ. ಈ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94106ಕ್ಕೆ ಏರಿಕೆಯಾಗಿದೆ. 3520 ಮಂದಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇತ್ತೀಚೆಗೆ ಗುಣವಾಗುವವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಇದುವರೆಗೆ 59492 ಜನ ಗುಣವಾಗಿದ್ದಾರೆ.

ಪ್ರಸ್ತುತ ನಗರದಲ್ಲಿ ಒಟ್ಟು 33081 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಮಂಗಳವಾರ 49 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಬೆಂಗಳೂರಿನಲ್ಲಿ ಒಟ್ಟು 1532 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ.

Find Out More:

Related Articles: