ಸಿಡ್ನಿ: ಕ್ರಿಕೆಟ್ ಅಂದರೆ ಅದೊಂದು ಅದ್ಭುತ ಕ್ರೀಡೆ. ಈ ಕ್ರಿಕೆಟ್ ಅನ್ನು ಹಳ್ಳಿಯಿಂದ ದಿಲ್ಲಿಯವರೆಗೂ , ದಿಲ್ಲಿಯಿಂದ ಸಿಡ್ನಿ, ಓವೆಲ್ ವರೆಗೂ ಗಲ್ಲಿಗಲ್ಲಿಗಳಲ್ಲಿ ಆಡುತ್ತಾರೆ. ಇದರಿಂದ ಎಷ್ಟು ಮನರಂಜನೆ ಇದೆಯೋ ಅಷ್ಟೇ ಅಪಾಯಕಾರಿಯಾದ ಆಟವಿದು. ಹೌದು ಡೆಡ್ಲಿ ಬೌನ್ಸರ್ ನಿಂದ ಆಸ್ಟ್ರೇಲಿಯಾದ ಆಟಗಾರನು ಸಾವನ್ನಪ್ಪುದ್ದನ್ನು. ಈ ಬೌನ್ಸ್ ಬೌಲಿಂಗ್ ಸಾವಿಗೆ ಶುಕ್ರವಾರಕ್ಕೆ 5 ವರ್ಷಗಳು ಸಂದಿವೆ.ಈ 5 ವರ್ಷದ ನೆನಪಲ್ಲಿ ಸ್ಮರಣಾರ್ಥ ಕಾರ್ಯಕ್ರಮವನ್ನು ಕುಟುಂಬದವರು ನೆರವೇರಿಸಿದ್ದಾರೆ.
ಬೌನ್ಸರ್ ಏಟಿಗೆ ಸಿಲುಕಿ ದುರ್ಮರಣಕ್ಕೀಡಾದ ಫಿಲಿಪ್ ಹ್ಯೂಸ್ ಅವರ 5ನೇ ಪುಣ್ಯಸ್ಮರಣೆಯನ್ನು ಬುಧವಾರ ಆಚರಿಸಿದ ಕ್ರಿಕೆಟ್ ಆಸ್ಟ್ರೇಲಿಯ, ಈ ಸಂದರ್ಭದಲ್ಲಿ ನೆಕ್ ಗಾರ್ಡ್ ಕಡ್ಡಾಯ ನಿಯಮ ಜಾರಿಗೆ ಬಂದೀತೆಂಬ ವಿಶ್ವಾಸ ವ್ಯಕ್ತಪಡಿಸಿತು. ಈ 5 ವರ್ಷಗಳಲ್ಲಿ ಆಸ್ಟ್ರೇಲಿಯದ ಕ್ರಿಕೆಟ್ ಕುಟುಂಬ ಫಿಲಿಪ್ ಹ್ಯೂಸ್ ಅವರನ್ನು ನೆನೆಯದ ದಿನವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ಸ ಸನ್ ಹ್ಯೂಸ್ ಅನ್ನು ವಿಶೇಷವಾಗಿ ನೆನಸಿದರು.
2014ನೇ ವರ್ಷದ ನವೆಂಬರ್ 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯಾವಳಿಯ ವೇಳೆ ಸೀನ್ ಅಬೋಟ್ ಅವರ ಶಾರ್ಟ್‌ಪಿಚ್ ಎಸೆತವೊಂದು ಫಿಲಿಪ್ ಹ್ಯೂಸ್ ಅವರನ್ನು ಬಲಿಪಡೆದಿತ್ತು. ಜೀವನ್ಮರಣ ಹೋರಾಟದ ಬಳಿಕ ನ. 27ರಂದು ಹ್ಯೂಸ್ ದುರಂತ ಅಂತ್ಯ ಕಂಡಿದ್ದರು. ಶಾರ್ಟ್ ಪಿಚ್ ನ ಆ ಒಂದೇ ಒಂದು ಬಾಲ್ ಅವರ ಜೀವಕ್ಕೆ ಕುತ್ತು ತಂದಿತ್ತು.
ಇದೀಗ ಕಡ್ಡಾಯಗೊಳಿಸಿರುವ ನೆಕ್ ಗಾರ್ಡ್ ಏನಿದು:-
ಆ ದಿನ ಫಿಲಿಪ್ ಹ್ಯೂಸ್ ಹೆಲ್ಮೆಟ್ ಧರಿಸಿದ್ದರು, ಚೆಂಡು ಅವರ ಕುತ್ತಿಗೆಯ ಭಾಗಕ್ಕೆ ಹೋಗಿ ಬಡಿದಿತ್ತು. ಕುತ್ತಿಗೆಯನ್ನು ರಕ್ಷಿಸುವ “ನೆಕ್ ಗಾರ್ಡ್’ ಬಳಕೆಯನ್ನುಕಡ್ಡಾಯಗೊಳಿಸುವುದು ಕ್ಷೇಮಕರ ಎಂದು ಪ್ರತಿಪಾದಿಸಿತು.ಇದಕ್ಕೆ ಆಸ್ಟ್ರೇಲಿಯದವರೇ ಆದ ಸ್ಟೀವನ್ ಸ್ಮಿತ್ ಒಮ್ಮೆ ವಿರೋಧ ವ್ಯಕ್ತಪಡಿಸಿದ್ದರು. ನೆಕ್ ಗಾರ್ಡ್ ಹಾಕಿಕೊಂಡರೆ ಎಂಆರ್‌ಐ ಯಂತ್ರದೊಳಗೆ ಇದ್ದಂತೆ ಭಾಸವಾಗುತ್ತದೆ ಎಂದಿದ್ದರು. ಆದರೆ ಕಳೆದ ಆ್ಯಶಸ್ ಸರಣಿಯ ಟೆಸ್ಟ್ ಪಂದ್ಯವೊಂದರ ವೇಳೆ 211ರನ್ ಬಾರಿಸಿದ ಬಳಿಕ ಸ್ಮಿತ್ ಮನಸ್ಸು ಬದಲಾಯಿಸಿ ನೆಕ್ ಗಾರ್ಡ್ ಬಳಸಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.