ಜಮ್ಮುಕಾಶ್ಮೀಕ್ಕಿದ್ದ 370 ವಿಶೇಷ ಕಾಯ್ದೆಯನ್ನು ರದ್ದುಗೊಳಿಸಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿದೆ ಗೊತ್ತಾ..?

Soma shekhar
ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯ ಪ್ರಕಾರ  ಇದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019 ಆಗಷ್ಟ್ 5ರಂದು ನಿಷೇಧಿಸಲಾಗಿತ್ತು,ಈ ಸಂದರ್ಭದಲ್ಲಿ ಇಲ್ಲಿನ ರಾಜಕೀಯ ನಾಯಕರನ್ನು ಹಾಗೂ ಸಂಘಟನೆಗಳ ನಾಯಕರನ್ನು ಬಂದಿಸಲಾಗಿತ್ತು. ಇದರಿಂದಾಗಿ ಈಗ ಕಾಶ್ಮೀರದಲ್ಲಿ ಯಾವುದೇ ರೀತಿಯ ಘರ್ಷಣೆಗಳು ನಡೆಯದಂತೆ ತಡೆಯಲಾಯಿತು. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ಕೊಡಲಾಗಿದ್ದ 370 ವಿಶೇಷ ಕಾಯ್ದೆಯನ್ನು ತೆದೆದುಹಾಕಲಾಯಿತು. ಈ ಒಂದು ಘಟನೆ  ನಡೆದು ಒಂದು ವರ್ಷಗಳೆದ ನಂತರ ಇಲ್ಲಿನ ಪರಿಸ್ಥಿತಿ ಯಾವ ರೀತಿ ಇದೆ ಗೊತ್ತಾ..?


ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಮೊನ್ನೆ 5ನೇ ತಾರೀಖಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಇಲ್ಲಿಯ ಉಗ್ರ ಚಟುವಟಿಕೆ, ಉಗ್ರರ ಸ್ಥಿತಿ ಹೇಗಿದೆ ಎಂಬ ಬಗ್ಗೆ ಜಮ್ಮು-ಕಾಶ್ಮೀರ್ ಡೈರೆಕ್ಟರ್ ಜನರಲ್ ಪೊಲೀಸ್ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.



ಅರ್ಧಕ್ಕರ್ಧ ಉಗ್ರ ಸಂಘಟನೆಗಳು ಜಮ್ಮ- ಕಾಶ್ಮೀರದಲ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಈ ಮೊದಲು ಕನಿಷ್ಠ 400 ಮಂದಿ ವಿವಿಧ ಉಗ್ರ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಂಖ್ಯೆ ಇದೀಗ 200ಕ್ಕಿಂತಲೂ ಕಡಿಮೆಯಾಗಿದೆ. ಉಗ್ರರ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದ ಹಾಗೂ ಪ್ರಮುಖ ಉಗ್ರ ಮುಖಂಡರನ್ನು ಭಾರತೀಯ ಸೇನೆ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿರುವ ಹಿನ್ನೆಲೆಯಲ್ಲಿ, ಬಹುತೇಕ ಉಗ್ರ ಸಂಘಟನೆಗಳಲ್ಲಿ ಈಗ ಮುಖಂಡನೇ ಇಲ್ಲದಂತಾಗಿದೆ ಎಂದಿದ್ದಾರೆ.



2013ರಿಂದ ಹೆಚ್ಚಿನ ಸಂಖ್ಯೆಯ ಯುವಕರು ಉಗ್ರ ಸಂಘಟನೆಗೆ ಸೇರಿಕೊಂಡಿದ್ದರು. 2017ರವರೆಗೂ ಉಗ್ರರ ನೇಮಕಾತಿ ನಡೆಯುತ್ತಿತ್ತು. ಉಗ್ರ ಸಂಘಟನೆಯ ಪೋಸ್ಟರ್ ಬಾಯ್‌ಗಳಾದ ಮನಾನ್ ವನಿ, ಬುಹರಾನ್‌ ವನಿ ಹಾಗೂ ರಿಯಾಜ್ ನಾಯ್ಕು ಇಂಥ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂಘಟನೆಗಳ ವಿರುದ್ಧ 2017 ಮತ್ತು 2018ರಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆ. ‌2018ರಲ್ಲಿ ಗವರ್ನರ್ ಆಡಳಿತ ಬಂದ ಮೇಲೆ ಮಹತ್ವದ ಕಾರ್ಯಾಚರಣೆ ನಡೆಸಿದ್ದೇವೆ. ಕಾನೂನು ಸುವ್ಯವಸ್ಥೆಗಾಗಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.



ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸತತವಾಗಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ಜೋರಾಗಿ ನಡೆದಿದೆ. 2019ರ ಜುಲೈ ತಿಂಗಳವರೆಗೆ 131 ಉಗ್ರರನ್ನು ಹತ್ಯೆಗೈಯಲಾಗಿತ್ತು. ಆದರೆ ಜುಲೈನಿಂದ ಡಿಸೆಂಬರ್‌ವರೆಗೆ ಕೇವಲ 29 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿದ್ದರ ಪರಿಣಾಮ ಸೇನಾ ಕಾರ್ಯಾಚರಣೆ ಕೂಡ ಕಡಿಮೆಯಾಗಿತ್ತು. 2019ರಲ್ಲಿ ಸೇನೆ ನಡೆಸಿದ 67 ಯಶಸ್ವಿ ಕಾರ್ಯಾಚರಣೆಯಲ್ಲಿ 160 ಉಗ್ರರು ಮೃತಪಟ್ಟಿರುವುದಾಗಿ ದಿಲ್ಬಾಗ್ ಸಿಂಗ್ ವಿವರಿಸಿದರು.


2020ರಲ್ಲಿ ಈವರೆಗೆ 150 ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಇವರಲ್ಲಿ 30 ವಿದೇಶಿ ಹಾಗೂ 120 ಸ್ಥಳೀಯ ಉಗ್ರರು ಹಾಗೂ ಎಲ್ಲಾ ಪ್ರಮುಖ ಉಗ್ರಗಾಮಿ ಸಂಘಟನೆಯ 39 ಉನ್ನತ ಕಮಾಂಡರ್‌ಗಳು ಸೇರಿದ್ದಾರೆ ಎಂದು ಅಂಕಿ ಅಂಶವನ್ನು ಅವರು ನೀಡಿದರು.



ಜಮ್ಮು-ಕಾಶ್ಮೀರದಲ್ಲಿ ಬಹುತೇಕ ಉಗ್ರಗಾಮಿ ಸಂಘಟನೆಗಳು ತೀವ್ರವಾಗಿ ಶಸ್ತ್ರಾಸ್ತ್ರ ಸಮಸ್ಯೆ ಎದುರಿಸುತ್ತಿವೆ. ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡುವ ತಂತ್ರಕ್ಕೆ ಪಾಕಿಸ್ತಾನ ಮೊರೆ ಹೋಗಿದೆ. ಆದರೆ ಭಾರತೀಯ ಸೇನಾ ಪಡೆ ಪಾಕ್‌ನ ಇಂಥ ಹಲವಾರು ಪ್ರಯತ್ನಗಳನ್ನು ವಿಫಲ ಮಾಡಿರುವುದಾಗಿ ಅವರು ವಿವರಿಸಿದರು.



2013ಕ್ಕೆ ಹೋಲಿಸಿದಲ್ಲಿ 2018 ಕಾರ್ಯಾಚರಣೆಯ ಮಹತ್ವದ ವರ್ಷವಾಗಿದೆ ಎಂದಿರುವ ಸಿಂಗ್‌, ಈ ಮೊದಲಿಗಿಂತಲೂ ಈಗ ಭದ್ರತಾ ವ್ಯವಸ್ಥೆ ಹಚ್ಚಾಗಿದೆ ಎಂದರು. 2018ರಲ್ಲಿ 93 ಯಶಸ್ವಿ ಕಾರ್ಯಾಚರಣೆ ನಡೆಸಲಾಗಿತ್ತು. ಅದೇ ರೀತಿ 2019ರಲ್ಲಿಯೂ ಯಶಸ್ವಿ ಶೋಧ ಮತ್ತು ಕಾರ್ಯಾಚರಣೆ ಮೂಲಕ ಉಗ್ರರನ್ನು ಹೊಡೆದುರುಳಿಸಲಾಗಿತ್ತು.

Find Out More:

Related Articles: