ಪೊಗರು ಚಿತ್ರದ ವಿಶೇಷ ಏನು ಗೊತ್ತಾ?

somashekhar
ಇದೀಗ ಪೊಗರು ಚಿತ್ರ ಕೂಡ ಪ್ಯಾನ್‌ ಇಂಡಿಯಾ ಬಿಡುಗಡೆಗೆ ತಯಾರಾಗುತ್ತಿದೆ ಎಂದ್ರೆ ನೀವು ನಂಬಲೇಬೇಕು.  ಹೌದು, ಪೊಗರು ಚಿತ್ರದಲ್ಲಿ ದ್ರುವ ಸರ್ಜಾ ಅಭಿನಯ ಮಾಡುತ್ತಿದ್ದಾರೆ. ಇದು ಸದ್ಯಕ್ಕೆ ಕನ್ನಡದ ಬಹುನಿರೀಕ್ಷೆಯ ಚಿತ್ರಗಳಲ್ಲೊಂದು. ಈ ಚಿತ್ರವನ್ನು ಇದೀಗ ಬಹುಭಾಷೆಗಳಲ್ಲಿ ಬಿಡುಗಡೆ ಮಾಡೋಕೆ ಸಜ್ಜು ಮಾಡಲಾಗಿದೆ.  ದ್ರುವ ಸರ್ಜಾ ಅಭಿಮಾನಿಗಳಂತೂ ಇದೀಗ ಚಿತ್ರ ವೀಕ್ಷಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.


ಅಷ್ಟಕ್ಕೂ ಈ ಚಿತ್ರದಲ್ಲಿ ಒಂದು ವಿಶೇಷತೆ ಇದೆ. ಹೌದು ದ್ರುವ ಸರ್ಜಾ ಜೊತೆ ಕ್ಲೈಮ್ಯಾಕ್ಸ್‌ನಲ್ಲಿ ಸೆಣೆಸಾಡಿರುವವರು ಯಾರು ಗೊತ್ತೇ? ಅವರೇ ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ಸ್. ಹೌದು ಯಾಕೆಂದರೆ ಇದೊಂದು ಮಾಸ್ ಸಿನಿಮಾ. ಪಕ್ಕಾ ಮಾಸ್‌ ಸಿನಿಮಾ ಎಂಬುದು ವಿಶೇಷ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಅಂತಿಮ ಘಟ್ಟಕ್ಕೆ ಬಂದಿದೆ. ಈ ಚಿತ್ರದ ಆ್ಯಕ್ಷನ್‌ ದೃಶ್ಯಗಳನ್ನು ಚಿತ್ರತಂಡವು ತುಂಬಾ ವಿಭಿನ್ನವಾಗಿ ಸೆರೆಹಿಡಿದಿದೆ. 


ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಯಕ ದ್ರುವ ಸರ್ಜಾ ಅವರೊಂದಿಗೆ ಅಂತರಾಷ್ಟ್ರೀಯ ಮಟ್ಟದ ಬಾಡಿ ಬ್ಯುಲ್ಡರ್ ಅವರೊಂದಿಗೆ ಹೊಡೆದಾಡುತ್ತಾರೆ. ಇದು ದ್ರುವಾ ಸರ್ಜಾ ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದೇ ಕಾರಣಕ್ಕೆ ಈ ಚಿತ್ರವನ್ನು ಇಂಟರ್‌ನ್ಯಾಷನಲ್‌ ಬಾಡಿಬಿಲ್ಡರ್ಸ್ ಅಭಿನಯಿಸಿರುವ ಒಂದು ವಿಶೇಷ ಚಿತ್ರ ಎನ್ನುವ ಹೆಸರು ಬಂದಿದೆ. ಡಬ್ಲ್ಯುಡಬ್ಲ್ಯುಇ ಕ್ರೀಡೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಮೋರ್ಗನ್‌ ಆಸ್ಟೆ, ಕೈಗ್ರೀನ್‌,ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಇಂತಹ ಅನೇಕ ಘಟಾನುಘಟಿಗಳು ಭರ್ಜರಿ ಕ್ಲೈಮ್ಯಾಕ್ಸ್ ನಲ್ಲಿ ಭಾಗಿಯಾಗಿದ್ದಾರೆ.


ಆರಂಭದಿಂದಲೂಪೊಗರು ಚಿತ್ರವು ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರೀಕರಣದ ಹಂತವು ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಈ ಚಿತ್ರದಲ್ಲಿ ಫೇಮಸ್ ನಟಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯ ಮಾಡಿದ್ದಾರೆ. ಅಲ್ಲದೇ ಧ್ರುವ ಸರ್ಜಾ ಸಹ ಇಲ್ಲಿ ಮೂರು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಯಲ್ಲೂ ಬಿಡುಗಡೆ ಮಾಡೋಕೆ ಇದೀಗ ಸಿದ್ಧತೆ ಆಗಿದೆ. ಇನ್ನು ಈ ಚಿತ್ರದ ಚಿತ್ರ ನಿರ್ದೇಶಕ ನಂದಕಿಶೋರ್‌ ಕೂಡ, ಸಾಕಷ್ಟು ಸಮಯ ತೆಗೆದುಕೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ. ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎನ್ನಲಾಗುತ್ತಿದೆ.ಪೈಲ್ವಾನ್ ಚಿತ್ರದ ನಂತರ ಈಗ ಪೊಗರು ಪ್ಯಾನ್‌ ಇಂಡಿಯಾ ರಿಲೀಸ್‌ ಆಗುತ್ತಿದೆ ಎಂಬುದು ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ.


Find Out More:

Related Articles: