ಪ್ರಪಂಚದಲ್ಲಿ ಕೊರೊನಾ ಹೆಚ್ಚಾಗಲು ಚೀನಾ ದೇಶವೇ ಕಾರಣ: ಡೊನಾಲ್ಡ್ ಟ್ರಂಪ್ ಆರೋಪ..!!

Soma shekhar

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತೇ ಇದ್ದು ಇಡೀ ವಿಶ್ವವೇ ಈ ಸೋಂಕಿನಿಂದ ನರಳುತ್ತಿದೆ. ಇದರಿಂದಾಗಿ ಅದೆಷ್ಟೋ ದೇಶಗಳು    ಲಾಕ್  ಡೌನ್ ಅನನು ಘೋಷಣೆಯನ್ನು ಮಾಡಿ ಪ್ರಜೆಗಳನ್ನು ಮನೆಯಲ್ಲಿಯೇ ಬಂದಿಸಲಾಗಿದೆ. ಇಷ್ಟಾದರೂ ಕೂಡ ಜಗತ್ತಿನಲ್ಲಿ ಕೊರೋನಾ ವೈರಸ್ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅಮೇರಿಕಾ ಈ ಕೋರೊನಾ ಇಷ್ಟು ವ್ಯಾಪಕವಾಗಿ ಹರಡಲು ಚೀನಾನೇ ಕಾರಣ ಎಂದು ಆರೋಪವನ್ನು ಮಾಡಲಾಗಿದೆ.

 

ವಿಶ್ವಾದ್ಯಂತ ಕೊರೊನಾ ಹರಡಿರುವುದಕ್ಕೆ ಚೀನಾ ದೇಶವೇ ಹೊಣೆ ಹೊರಬೇಕು ಎಂದು ಅಮೆರಿಕದಲ್ಲಿನ ಶ್ವೇತಭವನದ ಹಿರಿಯ ಅಧಿಕಾರಿ ಸೋಮವಾರ ಹೇಳಿದ್ದಾರೆ. ಕಡಿಮೆ ದರ್ಜೆಯ ಟೆಸ್ಟ್ ಕಿಟ್ ಗಳನ್ನು ರಫ್ತು ಮಾಡುತ್ತಿದ್ದು, ಈಗಿನ ಸನ್ನಿವೇಶದಿಂದ ಚೀನಾ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಲಾಗಿದೆ.

 

ಟ್ರಂಪ್ ಆಡಳಿತವು ಕಳೆದ ಕೆಲವು ವಾರಗಳಲ್ಲಿ ಚೀನಾ ವಿರುದ್ಧ ಈ ರೀತಿಯ ಆರೋಪ ಹಲವು ಬಾರಿ ಮಾಡಿದೆ. ಪಾರದರ್ಶಕತೆಯಿಂದ ನಡೆದುಕೊಂಡಿಲ್ಲ. ಆ ಕಾರಣಕ್ಕೆ ಜಗತ್ತಿನಾದ್ಯಂತ ಕೊರೊನಾ ಹರಡುವುದಕ್ಕೆ ಚೀನಾವೇ ಜವಾಬ್ದಾರಿ ಎಂದು ಅಮೆರಿಕವು ಆರೋಪ ಮಾಡುತ್ತಲೇ ಬರುತ್ತಿದೆ.

 

ಜಾಗತಿಕ ಪಿಡುಗಾಗಿ ಕಾಣಿಸಿಕೊಳ್ಳುವ ಮೊದಲು ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡಿತು. ಆ ವೈರಸ್ ಹೆಚ್ಚಲು ಚೀನಾ ಕಾರಣವಾಯಿತು. ಆರು ವಾರಗಳ ಕಾಲ ಈ ವಿಷಯವನ್ನು ಮುಚ್ಚಿಟ್ಟಿದ್ದರು. ವುಹಾನ್ ನಲ್ಲಿ ಕೊರೊನಾ ನಿಯಂತ್ರಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಅವರು ವಿಶ್ವದಾದ್ಯಂತ ಪಸರಿಸಿದರು. ನೂರಾರು, ಸಾವಿರಾರು ಚೀನೀಯರು ಮಿಲಾನ್, ನ್ಯೂಯಾರ್ಕ್ ಮತ್ತಿತರ ಪ್ರದೇಶಗಳಿಗೆ ವಿಮಾನದಲ್ಲಿ ಬಂದರು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಫಾಕ್ಸ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಮೊದಲ ಆರು ವಾರದ ಅವಧಿಯಲ್ಲಿ ಇಡೀ ವಿಶ್ವದ ಗಮನ ಸೆಳೆದದ್ದು ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್, ಇನ್ನೂರು ಕೋಟಿಗೂ ಹೆಚ್ಚು ಮಾಸ್ಕ್ ಗಳ ಮೂಲಕ. ತಮ್ಮ ಕಡೆಯ ವಾದ ಮಂಡಿಸಲು ಇದನ್ನು ಬಳಸಿಕೊಂಡರು. ಈಗಿನ ಸನ್ನಿವೇಶದಲ್ಲಿ ಚೀನಾ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

 

ಬಿಲ್ ಗೇಟ್ಸ್ ಏನೆಂದಿದ್ದರು?

 

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಈಚೆಗೆ, ಈಗಿನ ಸನ್ನಿವೇಶಕ್ಕೆ ಚೀನಾವನ್ನು ನಿಂದಿಸಬಾರದು ಎಂದಿದ್ದರು. ಆ ಬಗ್ಗೆ ಮಾತನಾಡುವುದಕ್ಕೆ ಇದು ಸಮಯ ಅಲ್ಲ. ನಮ್ಮ ವಿಜ್ಞಾನದ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಮಯ. ನಾವು ಒಟ್ಟಾಗಿ ಇದ್ದೇವೆ. ಟೆಸ್ಟ್ ಮಾಡಲು, ಚಿಕಿತ್ಸೆ ನೀಡಲು ಮತ್ತು ಚುಚ್ಚುಮದ್ದು ಕಂಡುಹಿಡಿಯಲು ಕೆಲಸ ಮಾಡುತ್ತಿದ್ದೇವೆ. ನಮ್ಮ ಈಗಿನ ಸ್ಥಿತಿಯನ್ನು ಆರ್ಥಿಕ ಲೆಕ್ಕಾಚಾರದ ದೃಷ್ಟಿಕೋನದಿಂದ ಅಳೆಯಲು ಸಾಧ್ಯವೇ ಇಲ್ಲ. ಇಂಥ ಮಾತುಗಳು ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಸಿಎನ್ ಎನ್ ಸಂದರ್ಶನದಲ್ಲಿ ಬಿಲ್ ಗೇಟ್ಸ್ ಹೇಳಿದ್ದರು. ಆದರೆ ಅದಕ್ಕೆ ಉತ್ತರಿಸಿರುವ ಅಮೆರಿಕ ಅಧಿಕಾರಿ ನವರೋ, ನಾವು ಹೊಸ ಅನ್ವೇಷಣೆ ಪರವಾಗಿಯೇ ಇದ್ದೇವೆ. ಆದರೆ ಈಗಲೂ ಹೇಳುತ್ತೇವೆ: ಇದಕ್ಕೆ ಚೀನಾವೇ ಹೊಣೆ ಹೊರಬೇಕು. ಮತ್ತು ಈಗ ಚೀನಾವು ಈ ಕೆಟ್ಟ ಪರೀಕ್ಷೆಗಳ ಪ್ರವಾಹವನ್ನೇ ಹರಿಸುತ್ತಿದೆ. ಈ ವಿಷಯದಲ್ಲಿ ಗೇಟ್ಸ್ ಮತ್ತು ನನ್ನ ನಿಲುವಿನಲ್ಲಿ ವ್ಯತ್ಯಾಸ ಇದೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ವಿಶ್ವದಾದ್ಯಂತ ವೈರಸ್ ಹಬ್ಬಿಸಿದೆ. ನಾವು ಅಮೆರಿಕದಲ್ಲಿ ಅದನ್ನು ಮರೆಯಬಾರದು ಎಂದಿದ್ದಾರೆ.

 

ಅಮೆರಿಕ ಆರ್ಥಿಕತೆ ಸ್ಥಗಿತ


ಇನ್ನೂ ಮುಂದುವರಿದು ಮಾತನಾಡಿರುವ ನವರೋ, ಕೊರೊನಾ ವೈರಾಣು ಕಾರಣಕ್ಕೆ ಯು.ಎಸ್. ಆರ್ಥಿಕತೆ ಸ್ಥಗಿತವಾಗಿದೆ. ಎರಡನೇ ವಿಶ್ವ ಯುದ್ಧದಿಂದಲೂ ಕಾಣದಂಥ ವೇಗದಲ್ಲಿ ಕೈಗಾರಿಕೆಗಳನ್ನು ವೇಗವಾಗಿ ಸನ್ನದ್ಧಗೊಳಿಸಲು ಟ್ರಂಪ್ ಆಡಳಿತವು ಶ್ರಮಿಸುತ್ತಿದೆ. ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ಯತ್ನಿಸುತ್ತಿದೆ. ಭಾರತ ಕೂಡ ಚೀನಾದಿಂದ ಕಿಟ್ ಗಳನ್ನು ಆಮದು ಮಾಡಿಕೊಂಡಿತ್ತು. ಭಾರತದ ಐಸಿಎಂಆರ್ ಆ ಕಿಟ್ ಗಳನ್ನು ಬಳಸದಂತೆ ಎಲ್ಲ ರಾಜ್ಯಗಳಿಗೆ ಸೋಮವಾರ ಸೂಚನೆ ನೀಡಿದೆ. ಎರಡು ಚೀನೀ ಕಂಪೆನಿಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಇದೀಗ ಸರಬರಾಜುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

 

Find Out More:

Related Articles: