24ಗಂಟೆಯ ಒಳಗೆ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕಿತರು ಎಷ್ಟು ಮಂದಿ ಗೊತ್ತಾ..?

Soma shekhar

ಕೊರೋನಾ ವೈರಸ್ ದಿನನಿತ್ಯ ತನ್ನ ಪ್ರತಾಪವನ್ನು ಹೆಚ್ಚಿಸುತ್ತಲೇ ಇದೆ. ಇದರಿಂದಾಗಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಸಾಕಷ್ಟು ಮಂದಿ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಕೊರೋನಾ ರಣ ಕೇಕೆ ಹೆಚ್ಚಾಗಿದೆ. ಇಂದೂ ಕೂಡ ಕೊರೋನಾ ವೈರಸ್  ಸೋಕು 200ರ ಗಡಿ ದಾಟಿ ಮುಂದೆ ಸಾಗಿದೆ

 

ಹೌದು ರಾಜ್ಯದಲ್ಲಿ ಇಂದು 271 ಜನರಿಗೆ ಸೋಂಕು ದೃಢವಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ 200ರೊಳಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಸಂಖ್ಯೆಯಲ್ಲಿ 464 ಮಂದಿ ಕೊರೋನಾ ರೋಗಿಗಳು ಗುಣ ಹೊಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

 

ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು, ಕಲಬುರಗಿಯಲ್ಲಿ ಇಬ್ಬರು ಹಾಗೂ ಹಾಸನದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79ಕ್ಕೇರಿಕೆಯಾಗಿದೆ.

 

ಇಂದು ಬಳ್ಳಾರಿಯಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದೆ. ಬಳ್ಳಾರಿ- 97, ಬೆಂಗಳೂರು- 36, ಉಡುಪಿ- 22, ಕಲಬುರ್ಗಿ- 20, ಧಾರವಾಡ- 19, ದಕ್ಷಿಣ ಕನ್ನಡ- 17, ಬೀದರ್- 10, ಹಾಸನ-9, ಮೈಸೂರು-9, ತುಮಕೂರು-7, ಶಿವಮೊಗ್ಗ-6, ರಾಯಚೂರು-4, ಉತ್ತರ ಕನ್ನಡ-4, ಚಿತ್ರದುರ್ಗ- 3, ರಾಮನಗರ- 3, ಮಂಡ್ಯ- 2, ಬೆಳಗಾವಿ, ವಿಜಯಪುರ, ಯಾದಗಿರಿಯಲ್ಲಿ ತಲಾ ಒಂದು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

 

ಇಂದೂ ಸೇರಿದಂತೆ ಕಳೆದು ಮೂರ್‍ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿದೆಯಾದರೂ ವಾಸಿಯಾದವರ ಸಂಖ್ಯೆ ಶೂನ್ಯದಲ್ಲಿಯೇ ಮುಂದುವರಿದಿದೆ.ಇದೆಲ್ಲದರ ನಡುವೆ ಬೆಂಗಳುರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದೊಂದು ದಿನದಲ್ಲಿ 37 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

 

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಗುರುವಾರ 464 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ ಯಾದಗಿರಿಯಲ್ಲಿ 129, ಉಡುಪಿಯಲ್ಲಿ 125, ಬೆಳಗಾವಿಯಲ್ಲಿ 62 ಹಾಗೂ ಕಲಬುಗಿಯ 60 ಮಂದಿ ಸೇರಿದ್ದಾರೆ.

ಇದರಿಂದ ಚೇತರಿಕೆ ಕಂಡವರ ಸಂಖ್ಯೆ 3440ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2995 ಸಕ್ರಿಯ ಪ್ರಕರಣಗಳಿದ್ದು, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಸದ್ಯ ರಾಜ್ಯದಲ್ಲಿ ಈವರೆಗೆ 3440 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರೇ, ಇನ್ನೂ 2995 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

 

Find Out More:

Related Articles: