ಆವತ್ತು ಜಾರ್ಜ್ ಫರ್ನಾಂಡಿಸ್.. ಇವತ್ತು ಡಿಕೆಶಿ!

somashekhar
ಡಿ.ಕೆ.ಶಿವಕುಮಾರ್ ಅವರನ್ನು ಇದೀಗ ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದರೂ ಕೂಡ ಡಿಕೆ ಶಿವಕುಮಾರ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಇದೇ ಕಾರಣಕ್ಕೆ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 


ಆದರೆ ಇದೀಗ ಡಿ.ಕೆ.ಶಿವಕುಮಾರ್ ಅವರನ್ನು ಆಸ್ಪತ್ರೆ ನೀಡಿದ ವರದಿ ಮೇರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ತಿಹಾರ್ ಜೂಲಿಗೆ ಹೋದ ಎರಡನೇ ಕನ್ನಡಿಗ ಅಂದರೆ ಅದು ಡಿಕೆ ಶಿವಕುಮಾರ್. ಹೌದು, ಹಾಗಾದರೆ ಆಸ್ಪತ್ರೆಯ ವೈದ್ಯರು ನೀಡಿದ ವರದಿ ಏನು ಅನ್ನೋದು ಇಲ್ಲಿದೆ ನೋಡಿ.


ಡಿಕೆ ಶಿವಕುಮಾರ್ ಅವರು ಬಾಯಿಹುಣ್ಣು, ಅತಿಸಾರ, ಶುಗರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಆಸ್ಪತ್ರೆ ವರದಿ ಬರುವವರೆಗೆ ಡಿಕೆಶಿಯನ್ನು ಅಲ್ಲಿಯೇ ಇರಲಿಸಲಾಗಿತ್ತು . ಇದೀಗ ಡಿಕೆ ಶಿವಕುಮಾರ್ ಅವರು ಗುಣಮುಖರಾಗಿದ್ದಾರೆ, ಬಾಯಿಹುಣ್ಣು ಬಿಟ್ಟು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ವರದಿಯನ್ನು ನೀಡಿದ್ದಾರೆ. ಹೀಗಾಗಿ ಡಿಕೆಶಿ ತಿಹಾರ್ ಜೈಲು ಪಾಲಾಗಿದ್ದಾರೆ.


ಡಿಕೆಶಿ ಅವರಿಗೆ ಜಾಮೀನು ಸಿಗುವವರೆಗೂ ಅವರನ್ನು ತಿಹಾರ್ ಜೈಲಿನಲ್ಲಿಯೇ ತಮ್ಮ ಸಮಯವನ್ನು ಕಳೆಯಬೇಕಿದೆ. ಇನ್ನು ಇಡಿ ವಶದಲ್ಲಿ 14 ದಿನಗಳನ್ನು ಕಳೆದಿರುವ ಡಿಕೆಶಿ ಅವರಿಗೆ ವಿಶೇಷ ನ್ಯಾಯಾಲಯ ಇಂದು ನ್ಯಾಯಾಂಗ ಬಂಧನ ವಿಧಿಸಿತ್ತು. ಇದಕ್ಕೂ ಮೊದಲು ಜಾರ್ಜ್ ಫರ್ನಾಂಡಿಸ್ ಅವರು ತಿಹಾರ್ ಜೈಲಿನಲ್ಲಿ ಇದ್ದರು ಅನ್ನೋದನ್ನು ನಾವು ಸ್ಮರಿಸಿಕೊಳ್ಳಬಹುದು. 


ಹೌದು ಅದು 1975ರ ಸಮಯ. ಆಗ 9 ತಿಂಗಳು ಕಾಲ ಜಾರ್ಜ್ ಫರ್ನಾಂಡಿಸ್ ಅವರು ತಿಹಾರ್ ಜೈಲಿನಲ್ಲಿದ್ದರು. ಅವರ ಮೇಲೆ ಡೈನಾಮೈಟ್ ಕದ್ದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅವರನ್ನು ಸುಮಾರು 9 ತಿಂಗಳು ಕಾಲ ತಿಹಾರ್ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ ಬರೋಡಾ ಡೈನಾಮೈಟ್ ಎಂದು ಪ್ರಖ್ಯಾತಿ ಪಡೆಯಿತು.


ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ, ಜಾರ್ಜ್ ಫರ್ನಾಂಡಿಸ್ ಅವರು ಜೈಲಿನಲ್ಲಿದ್ದುಕೊಂಡೇ ಲೋಕಸಭೇಗೆ ಸ್ಪರ್ಧೇ ಮಾಡಿದ್ದರು. ಅಲ್ಲದೇ ಮೂರು ಲಕ್ಷ ಮತಗಳ ಅಂತರದಿಂದ ಅವರು ಗೆದ್ದು ಬಂದಿದ್ದರು.


Find Out More:

Related Articles: