ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ಏನಿದೆ..?

Soma shekhar
ಕೊರೋನಾ ವೈರಸ್ ಇಂದಾಗಿ ದೇಶದ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆದ ಕಾರಣ ವಿದ್ಯಾರ್ಥಿಗಳಿಗೆ ಮನೆಯೇ ಪಾಠಶಾಲೆಯಾಗಿತ್ತು, ಆದರೆ ಕೊರೋನಾ ಸಂಕಷ್ಟದಿಂದ  ಹೊರಬರುವ  ಸಲುವಾಗಿ ದೇಶವನ್ನು ಅನ್ ಲಾಕ್ ನನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ  ಈ ಒಂದು ಪ್ರಕ್ರಿಯೆಯಲ್ಲಿ  ಶಾಲಾ ಕಾಲೇಜುಗಳನ್ನು ಕೂಡ  ಹಂತ ಹಂತವಾಗಿ ಆರಂಭಿಸಲು ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದೆ. ಈ ಸೂಚನೆಯ ಜೊತೆಗೆ ಎಲ್ಲಾ ರಾಜ್ಯಗಳಿಗೂ ಕೂಡ  ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆಯನ್ನು ಮಾಡಲಾಗಿದೆ.  
ಹೌದು ಕೊರೊನಾ ಕಾರಣದಿಂದ 5 ತಿಂಗಳಗಳ ಮುಚ್ಚಿದ್ದ ಶಾಲೆಗಳು ಇದೇ ಸೋಮವಾರದಿಂದ ಮತ್ತೆ ಶುರುವಾಗಲಿವೆ. ದೇಶದ ಹಲವು ರಾಜ್ಯಗಳ ಶಾಲೆಗಳು ವಿದ್ಯಾರ್ಥಿಗಳಿಗಾಗಿ ಬಾಗಿಲು ತೆರೆಯುತ್ತಿವೆ. ಅನ್ ಲಾಕ್ 4 ಅಡಿಯಲ್ಲಿ, ಕೇಂದ್ರ ಸರ್ಕಾರವು ಸೆಪ್ಟೆಂಬರ್ 21ರಿಂದ ಶಾಲೆಗಳನ್ನ ಪುನರಾರಂಭಿಸಲು ರಾಜ್ಯಗಳಿಗೆ ಅನುಮತಿ ನೀಡಿದೆ.

ಆದರೆ, ಸೆಪ್ಟೆಂಬರ್ 21ರಿಂದ ಶಾಲೆಗಳನ್ನು ಪುನರಾರಂಭಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರ ರಾಜ್ಯಗಳಿಗೆ ನೀಡಿದೆ. ಕರೋನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಸೋಮವಾರದಿಂದ ತರಗತಿಗಳನ್ನ ಪುನರಾರಂಭಿಸುವುದಿಲ್ಲ ಎಂದು ಘೋಷಿಸಿವೆ.
ಇನ್ನು ಮುಂದಿನ ವಾರದಿಂದ ಕರ್ನಾಟಕ, ಅಸ್ಸಾಂ ಸೇರಿದಂತೆ ಮುಂತಾದ ಕೆಲ ರಾಜ್ಯಗಳು ಶಾಲೆಗಳನ್ನ ತೆರೆಯುತ್ತಿವೆ. ಗೃಹ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಅನ್ ಲಾಕ್ 4 ಮಾರ್ಗಸೂಚಿಪ್ರಕಾರ, ಶೇ.50ರಷ್ಟು ಬೋಧನೆ ಮತ್ತು ಬೋಧಕೇತರ ವಿಷಯಗಳನ್ನು ಶಾಲೆಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ. 9ರಿಂದ 12ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಗೆ ಹೋಗಲು ಅವಕಾಶ ನೀಡಲಾಗಿದೆ. 

ಸೋಮವಾರದಿಂದ ಶಾಲೆಗಳಿಗೆ ಭೇಟಿ ನೀಡಲು ವಿದ್ಯಾರ್ಥಿಗಳು ತಮ್ಮ ಪೋಷಕರ ಒಪ್ಪಿಗೆ ಪತ್ರ ಪಡೆಯಬೇಕಾಗುತ್ತದೆ. ಆದರೆ, ಕಂಟೈನಮೆಂಟ್ ವಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮುಂದಿನ ವಾರದಿಂದ ಶಾಲೆಗಳಿಗೆ ಹಾಜರಾಗಲು ಅನುಮತಿ ಇಲ್ಲ. ಸಾಮಾಜಿಕ ದೂರವನ್ನ ಕಾಯ್ದುಕೊಳ್ಳುವುದು, ಮಾಸ್ಕ್‌ ಹಾಕಿಕೊಳ್ಳುವುದು, ಕೈಗಳನ್ನು ತೊಳೆಯುವುದು ಮುಂತಾದೆಲ್ಲಾ ಕೊರೊನಾ ಸೋಂಕು ತಡೆಗಟ್ಟುವ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಶಾಲಾ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ದೇಹದ ತಾಪಮಾನವನ್ನು ತಪಾಸಣೆ ಮಾಡಲು ಥರ್ಮಲ್ ಸ್ಕ್ಯಾನರ್ ಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಸಾಧ್ಯವಾದರೆ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ವ್ಯವಸ್ಥೆ ಮಾಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

ಈ ಅವಧಿಯಲ್ಲಿ ಶಾಲೆಗಳು ವರ್ಚುವಲ್ ತರಗತಿಗಳನ್ನು ಮುಂದುವರಿಸುವಂತೆ ನೋಡಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.

ಕರ್ನಾಟಕ ಸರ್ಕಾರ ಮುಂದಿನ ವಾರದಿಂದ ಭಾಗಶಃ ಶಾಲೆಗಳನ್ನ ಪುನರಾರಂಭಿಸಲು ಒಪ್ಪಿಗೆ ನೀಡಿದೆ. ಮಾರ್ಗದರ್ಶನದ ಅಗತ್ಯವಿದ್ದರೆ ಹಿರಿಯ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಬರಬಹುದು ಎಂದಿದೆ. ಇನ್ನು ಚಂಡೀಗಢದಲ್ಲಿ ಸೋಮವಾರದಿಂದ ಶಾಲೆಗಳು ಭಾಗಶಃ ಪುನರಾರಂಭವಾಗಲಿದೆ. ಒಂದು ತರಗತಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ತರಗತಿಗಳ ನಡುವೆ ಒಂದೂವರೆ ಗಂಟೆ ಅಂತರದಲ್ಲಿ ವಿದ್ಯಾರ್ಥಿಗಳಿಗೆ ತಲಾ ಎರಡು ಗಂಟೆಗಳ ಬ್ಯಾಚ್ ನಲ್ಲಿ ಬರಲು ಅವಕಾಶ ನೀಡಲಾಗಿದೆ.

Find Out More:

Related Articles: