ಮಗನ ಜೊತೆ ಕುದುರೆ ಸವಾರಿ ಮಾಡಿದ ಡಿ ಬಾಸ್

Soma shekhar
ಡಿ ಬಾಸ್, ಸದ್ಯ ಸ್ಯಾಂಡಲ್ ವುಡ್ ನ ಒಡೆಯನ ಅವತಾರದಲ್ಲಿ ಫುಲ್ ಮಿಂಚುತ್ತಿದ್ದಾರೆ. ಬರೀ ಆನ್ ದ ಸ್ಕ್ರೀನ್ ಅಷ್ಟೇ ಅಲ್ಲ, ಆಫ್ ದಿ ಸ್ಕ್ರೀನ್ ನಲ್ಲಿ ಯೂ ಕೂಡ ಡಿ ಬಾಸ್ ಮಗನ ಜೊತೆ ಕುದುರೆ ಸವಾರಿ ಮಾಡುವ ಮೂಲಕ ಮಿಂಚುತ್ತಿದ್ದಾರೆ. ಹೌದು, ಆ ಕುದುರೆ ಸವಾರಿಯ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ ನೋಡಿ. 
 
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ ಅಪಾರವಾದ ಪ್ರೀತಿ. ಹಾಗಾಗಿಯೇ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಅನೇಕ ಬಗೆಯ ಪ್ರಾಣಿ-ಪಕ್ಷಿಗಳನ್ನು ದರ್ಶನ್ ಸಾಕಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಆಗಾಗ ಅವರು ಫಾರ್ಮ್‌ ಹೌಸ್‌ಗೆ ಭೇಟಿ ನೀಡಿ, ಅವುಗಳ ಹಾರೈಕೆ ಮಾಡುತ್ತಾರೆ. ವಿಶೇಷವೆಂದರೆ, ದರ್ಶನ್ ಅವರ ಪುತ್ರ ವಿನೀಶ್‌ಗೂ ಕೂಡ ಪ್ರಾಣಿಗಳೆಂದರೆ ಅಪಾರವಾದ ಪ್ರೀತಿ.
 
ತಂದೆಯಂತೆಯೇ ವಿನೀಶ್‌ ಕೂಡ ಅವುಗಳ ಹಾರೈಕೆ ಮಾಡುತ್ತಾರೆ.ಅವರಿಗೆ ತುಂಬಾ ಇಷ್ಟು. ದರ್ಶನ್‌ಗೆ ಕುದುರೆ ಸವಾರಿ ಎಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಅವರು ತಮ್ಮ ಮಗನೊಂದಿಗೆ ಕುದುರೆ ಸವಾರಿ ಮಾಡಿದ್ಧಾರೆ. ಬಿಳಿ ಬಣ್ಣದ ಎರಡು ಕುದುರೆಗಳಲ್ಲಿ ದರ್ಶನ್‌ ಮತ್ತು ಪುತ್ರ ವಿನೀಶ್‌ ಜೊತೆಯಾಗಿ ರೌಂಡ್ಸ್ ಹಾಕಿದ್ದಾರೆ. ಮಗನಿಗೆ ಕುದುರೆ ಸವಾರಿಯ ಬಗ್ಗೆ ದರ್ಶನ್‌ ಹೇಳಿಕೊಡುತ್ತಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ. ಅದನ್ನು ಸ್ವತಃ ದರ್ಶನ್‌, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಷ್ಟೇ ಸಿರಿತನವಿದ್ದರೂ, ಪುತ್ರನನ್ನು ಸರಳವಾಗಿ ಬೆಳೆಸುತ್ತಿರುವ ದರ್ಶನ್ ಅವರ ಗುಣವನ್ನು ಅಭಿಮಾನಿಗಳು ಕೊಂಡಾಡಿದ್ದರು.
 
ದರ್ಶನ್ ಮಗ ವಿನೀಶ್‌ ಈಗಾಗಲೇ 'ಮಿ. ಐರಾವತ' ಮತ್ತು 'ಯಜಮಾನ' ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ನಟನಾಗವುದು ಖಚಿತ. ಈ ಬಗ್ಗೆ ಹಿಂದೊಮ್ಮೆ ದರ್ಶನ್ ಹೀಗೆ ಹೇಳಿದ್ದರು. 'ಮುಂದಿನ ಸಿನಿಮಾ ಯಾವುದು ಅಂತ ನನ್ನ ಮಗದಿನಾ ಕೇಳ್ತಿರ್ತಾನೆ. ಅವನು ಇಂಡಸ್ಟ್ರಿಗೆ ಬರೋಕೆ ಇನ್ನೂ ಬಹಳ ಟೈಮ್‌ ಇದೆ. ಆದರೆ, ಸಿನಿಮಾ ರಂಗಕ್ಕೆ ಬರೋದು ಖಂಡಿತ. ನನ್ನ ನಂತರ ಇಂಡಸ್ಟ್ರಿಯಲ್ಲಿ ನನ್ನದೊಂದು ಬ್ರಾಂಡ್‌ ಇರಬೇಕಲ್ಲಾ ಹಾಗಾಗಿ ಅವನನ್ನು ಚಿತ್ರರಂಗಕ್ಕೆ ಕರೆತರುತ್ತೇನೆ' ಎಂದಿದ್ದರು ದರ್ಶನ್‌.

Find Out More:

Related Articles: