2018-19ರ ಬಿಸಿಸಿಐ ಪ್ರಶಸ್ತಿ ಪ್ರಧಾನ, ಬೂಮ್ರಾಗೆ ಪಾಲಿ ಉಮ್ರಿಗರ್ ಪ್ರಶಸ್ತಿ

Soma shekhar
ಮುಂಬೈ: 2018-19ನೇ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿಯನ್ನು ಭಾನುವಾರ ರಾತ್ರಿ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ನೀಡಲಾಗುವ ಪಾಲಿ ಉಮ್ರಿಗರ್‌ ಪ್ರಶಸ್ತಿಗಾಗಿ ಕಡೇ ಗಳಿಗೆಯಲ್ಲಿ ಹೆಸರಿಸಲಾಯಿತು.2018-19ರ ಋತುವಿನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಸಾಧನೆಗಾಗಿ ನೀಡಲಾಗುವ ದಿಲೀಪ್‌ ಸರ್ದೇಸಾಯಿ ಪ್ರಶಸ್ತಿಗೆ ಈಮೊದಲೇ ಬುಮ್ರಾರನ್ನು ಸೂಚಿಸಲಾಗಿತ್ತು. ಇದಕ್ಕೆ 2 ಲಕ್ಷ ರೂ. ಬಹುಮಾನ ಪಡೆದ ಬುಮ್ರಾ, ಪಾಲಿ ಉಮ್ರಿಗರ್‌ ಪ್ರಶಸ್ತಿಗಾಗಿ 15 ಲಕ್ಷ ರೂ ಪಡೆದರು. 
 
ಬಿಸಿಸಿಐ ಪ್ರಶಸ್ತಿ ಪುರಸ್ಕೃತರು: 2018-19
1. ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿ, ಜೀವಮಾನದ ಸಾಧನೆ: ಕೆ. ಶ್ರೀಕಾಂತ್‌
2. ಬಿಸಿಸಿಐ ಜೀವಮಾನದ ಸಾಧನೆ: ಅಂಜುಮ್‌ ಚೋಪ್ರಾ
3. ಬಿಸಿಸಿಐ ವಿಶೇಷ ಪ್ರಶಸ್ತಿ: ದಿಲೀಪ್‌ ದೋಶಿ
4. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ರನ್‌): ಚೇತೇಶ್ವರ್‌ ಪೂಜಾರ
5. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ವಿಕೆಟ್‌): ಜಸ್‌ಪ್ರೀತ್‌ ಬುಮ್ರಾ
6. ಏಕದಿನದ ಬ್ಯಾಟಿಂಗ್‌ ಸಾಧಕಿ: ಸ್ಮತಿ ಮಂಧನಾ
7. ಏಕದಿನದ ಬೌಲಿಂಗ್‌ ಸಾಧಕಿ: ಜೂಲನ್‌ ಗೋಸ್ವಾಮಿ
8. ಪಾಲಿ ಉಮ್ರಿಗರ್‌ ಪ್ರಶಸ್ತಿ (ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ): ಜಸ್‌ಪ್ರೀತ್‌ ಬುಮ್ರಾ
9. ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿ: ಪೂನಂ ಯಾದವ್‌
10. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಮಾಯಾಂಕ್‌ ಅಗರ್ವಾಲ್‌
11. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಶಫಾಲಿ ವರ್ಮ
12. ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ರಣಜಿ ಆಲ್‌ರೌಂಡರ್‌): ಶಿವಂ ದುಬೆ
13. ಲಾಲಾ ಅಮರನಾಥ್‌ ಪ್ರಶಸ್ತಿ (ದೇಶಿ ಏಕದಿನದ ಶ್ರೇಷ್ಠ ಆಲ್‌ರೌಂಡರ್‌): ನಿತೀಶ್‌ ರಾಣಾ
14. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ರನ್‌): ಮಿಲಿಂದ್‌ ಕುಮಾರ್‌
15. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ವಿಕೆಟ್‌): ಅಶುತೋಷ್‌ ಅಮಾನ್‌
16. ದೇಶಿ ಕ್ರಿಕೆಟಿನ ಶ್ರೇಷ್ಠ ಅಂಪಾಯರ್‌: ವೀರೇಂದರ್‌ ಶರ್ಮ
17. ದೇಶಿ ಕ್ರಿಕೆಟಿನ ಶ್ರೇಷ್ಠ ತಂಡ: ವಿದರ್ಭ
 
 

Find Out More:

Related Articles: