ದೇಶದ ಎಲ್ಲಾ ವಿವಿಗಳಿಗೆ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿದ ಯುಜಿಸಿ: ಎಂದಿನಿಂದ ನಡೆಯಬಹುದು ಪರೀಕ್ಷೆ..!!

Soma shekhar

ಕೊರೋನಾ ವೈರಸ್ ನಿಂದಾಗಿ ಎರಡು ತಿಂಗಳ ಕಾಲ ಮಾಡಿದ ಲಾಕ್ ಡೌನ್ ಇಂದಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿತ್ತು. ಹೀಗಾಗಿ ಎಸ್ ಎಸ್ ಎಲ್ ಸಿ ಹಾಗೂ ಕಾಲೇಜು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದಾದ ನಂತರ ದೇಶದಲ್ಲಿ ಲಾಕ್ ಡೌನ್ ಮುಗಿದು ಅನ್ ಲಾಕ್ ಶುರುವಾಗುತ್ತಿದ್ದಂತೆ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ಮಾಡಲಾಯಿತು. ಇದರ ಬೆನ್ನಲ್ಲೆ ಯುಜಿಸಿ ದೇಶದ ಎಲ್ಲಾ ಡಿಗ್ರಿ ಕಾಲೇಡಜುಗಳಿಗೆ ಪರೀಕ್ಷೆಯನ್ನು ನಡೆಸಬೇಕು ಎಂದು ಆದೇಶವನ್ನು ಹೊರಡಿಸಲಾಗಿದೆ. ಅಷ್ಟಕ್ಕೂ ಎಂದಿನಿಂದ ನಡೆಯಲಿದೆ ವಿವಿ ಕಾಲೇಜಿನ  ಪರೀಕ್ಷೆಗಳು..?

 

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಮಾಣಗಳು ಹೆಚ್ಚಾಗುತ್ತಿರುವ ನಡುವೆಯೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೆಪ್ಟೆಂಬರ್ ಒಳಗೆ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಶೈಕ್ಷಣಿಕ ವರ್ಷವನ್ನು ಮುಗಿಸುವಂತೆ ಯುಜಿಸಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.

ದೇಶಾದ್ಯಂತ ಮಾರ್ಚ್​​ 25ನೇ ತಾರೀಕಿನಿಂದಲೇ ಎಲ್ಲಾ ಶಾಲಾ-ಕಾಲೇಜುಗಳು ಬಂದ್​​ ಮಾಡಲಾಗಿತ್ತು. ಇದಾದ ನಂತರ ಹಲವು ದಿನಗಳ ಲಾಕ್​ಡೌನ್​​ ಬಳಿಕ ಜೂನ್​​​ 1ರಿಂದ ಒಂದು ತಿಂಗಳು ಅನ್​​ಲಾಕ್ 1.0 ಜಾರಿಗೊಳಿಸಲಾಗಿತ್ತು. ಈ ಬೆನ್ನಲ್ಲೀಗ ಇದೇ ತಿಂಗಳು ಜುಲೈ 1ರಿಂದ ಭಾರತದಲ್ಲಿ ಅನ್​​ಲಾಕ್​​​ 2.0 ಘೋಷಿಸಲಾಗಿದೆ.

 

ಅನ್​​ಲಾಕ್​​​ 2.0 ಜುಲೈ ತಿಂಗಳಾಂತ್ಯದವರೆಗೂ ಜಾರಿಯಲ್ಲಿರಲಿದೆ. ಈ ನಡುವೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಲವು ದಿನಗಳಿಂದ ಮುಂದೂಡುತ್ತಲ್ಲೇ ಬರುತ್ತಿದ್ದ ಪರೀಕ್ಷೆಗಳನ್ನು ನಡೆಸುವಂತೆ ವಿವಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಅವಕಾಶ ಮಾಡಿಕೊಟ್ಟಿದೆ.

 

 

ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆಗಳನ್ನು ನಡೆಸಲೇಬೇಕು. ಶೈಕ್ಷಣಿಕ ಕ್ಯಾಲೆಂಡರ್ ಕುರಿತು ಯುಜಿಸಿ ಮಾರ್ಗಸೂಚಿಗಳು ಮತ್ತು ಕೇಂದ್ರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ) ನಿಯಮಗಳ ಅಡಿಯಲ್ಲಿ ಸೆಪ್ಟೆಂಬರ್​ ಅಂತ್ಯದೊಳಗೆ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ನಡೆಯಬೇಕು ಎಂದು ಆದೇಶಿಸಿಲಾಗಿದೆ.

 

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಕುರಿತು ಯುಜಿಸಿ ಮಾರ್ಗಸೂಚಿಗಳು ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅನುಮೋದಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ನಿಯಮಗಳ ಅಡಿಯಲ್ಲಿ ಕಡ್ಡಾಯವಾಗಿ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ.

 

 

Find Out More:

Related Articles: