ಮುದ್ದು ಹುಡುಗಿ ರಶ್ಮಿಕಾ ಹಳ್ಳಿಯಲ್ಲಿ ಯಾಕೆ ಕುರಿ ಕಾಯಿಸುತ್ತಿದ್ದಾಳೆ ಗೊತ್ತಾ?

frame ಮುದ್ದು ಹುಡುಗಿ ರಶ್ಮಿಕಾ ಹಳ್ಳಿಯಲ್ಲಿ ಯಾಕೆ ಕುರಿ ಕಾಯಿಸುತ್ತಿದ್ದಾಳೆ ಗೊತ್ತಾ?

somashekhar
ಕೊಡಗಿನ ಬೆಡಗಿ ಮುದ್ದು ಹುಡುಗಿ ಸೌತ್ ಇಂಡಿಯಾದ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಖ್ಯಾತಿ ಪಡೆದಿರುವ ನಟಿ. ಇದೀಗ ಹಳ್ಳಿಯಲ್ಲಿ ಕುರಿ ಕಾಯುತ್ತಾ ಇದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ರಾಜಾಜಿನಗರದ ಪೆಟ್ರೋಲ್​ ಬಂಕ್​ವೊಂದರಲ್ಲಿ  ರಶ್ಮಿಕಾ ಮಂದಣ್ಣ ಪ್ರತ್ಯಕ್ಷವಾಗಿ, ವಾಹನಗಳಿಗೆ ಪೆಟ್ರೋಲ್​ ಹಾಕುವ ಕೆಲಸ ಮಾಡಿದ್ದರು. ಆದರೆ ಈಗ ಹಳ್ಳಿಯೊಂದರಲ್ಲಿ ದಿಢೀರ್ ಅಂತ ಕುರಿ ಮೇಯಿಸುತ್ತಿದ್ದಾರೆ. 

ಆಶ್ಚರ್ಯವಾದರೂ  ನಂಬಲೇ ಬೇಕಾದ ವಿಷಯವಿದು. ಕನ್ನಡದ ಕಿರಿಕ್​ ಹುಡುಗಿ ಯಾವಾಗ ಏನು ಮಾಡ್ತಾರೆ ಅಂತ ಗೊತ್ತಿಲ್ಲ. ಇತ್ತೀಚೆಗಷ್ಟೆ ತಮ್ಮ ಕುಟುಂಬದೊಂದಿಗೆ ಒಂದು ದಿನ ಕಳೆದಿದ್ದರು ರಶ್ಮಿಕಾ. ತಂಗಿಯೊಂದಿಗೆ ಕಳೆದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಿರುವಾಗಲೇ ಈಗ ರಶ್ಮಿಕಾ ಹಳ್ಳಿಯೊಂದರಲ್ಲಿ ಲಂಗ ದಾವಣಿ ತೊಟ್ಟು ಕುರಿ ಮೇಯಿಸುತ್ತಿದ್ದಾರೆ. ಅಯ್ಯೋ ಇದೇನಾಯಿತು ರಶ್ಮಿಕಾಗೆ, ಸಿನಿಮಾ ಬಿಟ್ಟು ರೈತ ಮಹಿಳೆಯಾಗೋದ್ರ ಅಂತ ಆತಂಕ ಪಡುವ ಅಗತ್ಯವಿಲ್ಲ. ಅವರು ತಮಿಳಿನಲ್ಲಿ ಕಾರ್ತಿ ಜತೆ ಅಭಿನಯಿಸುತ್ತಿರುವ 'ಸುಲ್ತಾನ್​' ಸಿನಿಮಾದ ಸೆಟ್​ನ ಚಿತ್ರಣವಿದು.

ಸುಲ್ತಾನ್ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣದ ಸೆಟ್​ನಲ್ಲಿ ರಶ್ಮಿಕಾ ಕುರಿ ಕಾಯುವಾಗ ಈ ಚಿತ್ರಗಳನ್ನು ತೆಗೆಯಲಾಗಿದೆ. ಈ ಚಿತ್ರಗಳು ರಶ್ಮಿಕಾರ ಅಭಿಮಾನಿಗಳ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ಭಾಗ್ಯರಾಜ್ಯ ನಿರ್ದೇಶನದ ಈಸಿನಿಮಾದ ಹೆಸರನ್ನು ಈ ಹಿಂದೆ ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಗೊಳಿಸಿದ್ದರು. ಆದರೆ ಈ ಕುರಿತಾಗಿ ಚಿತ್ರತಂಡ ಮಾತ್ರ ಸಿನಿಮಾದ ಟೈಟಲ್​ ರಿವೀಲ್​ ಮಾಡಿಲ್ಲ. ಖಾಸಗಿ ವಾಹಿನಿಯೊಂದರಲ್ಲಿ ನಟ ಸೃಜನ್​ ಲೋಕೇಶ್​ ಆರಂಭಿಸಿದ್ದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ  ಸಾಮಾಜಿಕ ಕಳಕಳಿ ಹೊಂದಿರುವ ಕೆಲಸ ಮಾಡಲಾಗುತ್ತಿತ್ತು. ಈ ಕಾರ್ಯಕ್ರಮದ ಸಂಚಿಕೆಯೊಂದಕ್ಕೆ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದ್ದರು. ಪಲ್ಲವಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸಹಾಯ ಮಾಡುವ ಕಾರಣಕ್ಕೆ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದ್ದರು. ಇದರಿಂದ ಅಭಿಮಾನಿಗಳು ದಿಲ್ ಖುಶ್ ಆಗಿದ್ದಾರೆ.


Find Out More:

Related Articles:

Unable to Load More