ರಾಜ್ಯದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ : ಈ ಒಂದು ವರ್ಷದಲ್ಲಿ ಸರ್ಕಾರ ಮಾಡಿದ ಕೆಲಸಗಳೇನು..?

Soma shekhar

ಬಿಜೆಪಿ ಸರ್ಕಾರ ಅಧಿಕಾವನ್ನು ವಹಿಸಕೊಂಡಾಗಿನಿಂದ ಒಂದಲ್ಲೊಂದು ಸಮಸ್ಯೆಗಳು ರಾಜ್ಯ ಸರ್ಕಾವನ್ನು ಕಾಡುತ್ತಿದೆ, ಬಿಜೆಪಿ ಅಧಿಕಾರದ ಗದ್ದಿಗೆಯ ಮೇಲೆ ಕುಳಿತಾಗ ಕರ್ನಾಟಕ ಪ್ರವಾಹವನ್ನು ಎದುರಿಸಬೇಕಾಯಿತು, ಇದದಾದ ನಂತರ ಕೊರೋನಾ ಸೋಂಕು  ಸರ್ಕಾರವನ್ನು ಕಾಡುತ್ತಲೇ ಇದೆ, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಅಷ್ಟಾಗಿ ನಡೆಯದಿದ್ದರೂ ತಕ್ಕ ಮಟ್ಟಿಗೆ ಗಾದರೂ ರಾಜ್ಯವನ್ನು ಮಯನ್ನಡೆಸಿಕೊಂಡು ಬಂದಿದ್ದಾರೆ.  

 

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜು.26ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಕೊಟ್ಟ ಭರವಸೆಗಳು ಏನು, ಅಧಿಕಾರಕ್ಕೆ ಬಂದ ನಂತರ ಮಾಡಿರುವುದೇನು ಎನ್ನುವ ಕುರಿತು ಒಂದು ವರದಿ.

 

ಬಿಜೆಪಿ ಸರ್ಕಾರ ರಚನೆಯಾಗಿ ವರ್ಷ ಕಳೆಯುತ್ತಿದೆ. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿ ವರ್ಷ ಕಳೆಯುತ್ತಿದೆ. ಕಾಲಮಿತಿಯೊಳಗೊಂಡಂತೆ ನೀಡಿದ್ದ ಭರವಸೆ ಈಡೇರಿಸಿದ್ದರೂ ಬಹುತೇಕ ಹಾಗೂ ಪ್ರಮುಖ ಬೇಡಿಕೆಗಳು ಇನ್ನು ಪ್ರಣಾಳಿಕೆಯಲ್ಲಿಯೇ ಉಳಿದುಕೊಂಡಿವೆ.

 

ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಾಂಗ್ರೆಸ್ ಆಡಳಿತಾವಧಿಯ ಆರ್ಥಿಕ ನಿರ್ವಹಣೆ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದು ಈಡೇರಿಲ್ಲ. ಲೋಕಾಯುಕ್ತ ಬಲವರ್ಧನೆ ಮಾಡುವ ಆಶ್ವಾಸನೆ ಕೂಡ ಈಡೇರಿಲ್ಲ. ಕಾಯ್ದೆಗೆ ಸಣ್ಣ ತಿದ್ದುಪಡಿ ಮಾಡಿದರಾದರೂ ಅದು ಬಲವರ್ಧನೆ ವ್ಯಾಪ್ತಿಯಲ್ಲಿ ಇಲ್ಲ. ದೆಹಲಿಯ ಏಮ್ಸ್ ಮಾದರಿಯ ವೈದ್ಯ ವಿಜ್ಞಾನ ಕಾಲೇಜು ಕೂಡ ಸ್ಥಾಪನೆ ಆಗಲಿಲ್ಲ.

 

ಅಧಿಕಾರಕ್ಕೆ ಬರುವ ಮುನ್ನ ಸಾಲು ಸಾಲು ಭರವಸೆ ನೀಡಿ ಆಗಸದಷ್ಟು ಆಶ್ವಾಸನೆ ನೀಡಿದ್ದ ಬಿಜೆಪಿ ಇದೀಗ ಒಂದು ವರ್ಷದ ಅವಧಿಯಲ್ಲಿ ಸಾಧಿಸಿದ್ದು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಮೂರು ವರ್ಷದ ಸಮಯವಿದ್ದು, ಭರವಸೆ ಈಡೇರಲಿವೆಯೋ ಮುಂದಿನ ಪ್ರಣಾಳಿಕೆಗೆ ವರ್ಗಾವಣೆ ಆಗುವುದೋ ಕಾದು ನೋಡಬೇಕು.

 

# ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಆಶ್ವಾಸನೆ:
ಮೊದಲ ಸಂಪುಟ ಸಭೆಯಲ್ಲೇ ಲೋಕಾಯುಕ್ತ ಮರುಸ್ಥಾಪನೆ ನಿರ್ಧಾರ. ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳಲ್ಲಿನ ಒಂದು ಲಕ್ಷವರೆಗಿನ ರೈತರ ಸಾಲ ಮನ್ನಾ.

 

10,000 ರೂ. ಆರ್ಥಿಕ ನೆರವು ನೀಡುವ ನೇಗಿಲಯೋಗಿ ಯೋಜನೆ. ಮುಖ್ಯಮಂತ್ರಿ ರೈತ ಸುರಕ್ಷಾ ವಿಮಾ ಯೋಜನೆ. ಸುಜಲಾಂ ಸುಫಲಾಂ ಕರ್ನಾಟಕ ಕೆರೆ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ. ಸಾವಿರ ರೈತರಿಗೆ ಇಸ್ರೇಲ್ ಪ್ರವಾಸಯೋಗ. ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ ಮರು ಜಾರಿ.

 

ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಹಾಗೂ ಉಚಿತ ನ್ಯಾಪ್‍ಕಿನ್, ಉಳಿದ ಮಹಿಳೆಯರಿಗೆ ಒಂದು ರೂ.ದರದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್. ಭಾಗ್ಯಲಕ್ಷ್ಮಿ ಬಾಂಡ್ ಮೊತ್ತ 2 ಲಕ್ಷಕ್ಕೆ ಹೆಚ್ಚಳ. ಬಿಪಿಎಲ್ ಕುಟುಂಬದ ಯುವತಿಯರ ವಿವಾಹಕ್ಕೆ 25 ಸಾವಿರ ನಗದು, 3 ಗ್ರಾಂ. ಚಿನ್ನದ ತಾಳಿ. ಬಿಪಿಎಲ್ ಕಾರ್ಡುದಾರರಿಗೆ ಅನ್ನದಾಸೋಹ, ಎಪಿಎಲ್ ಕಾರ್ಡ್‍ದಾರರಿಗೆ ಕಡಿಮೆ ದರದಲ್ಲಿ ಧಾನ್ಯ.

 

ಮುನ್ನೂರಕ್ಕೂ ಹೆಚ್ಚು ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್. ಸರ್ಕಾರ ರಚನೆಯಾದ ಮೂರು ತಿಂಗಳಲ್ಲಿ ನೇಕಾರರ ಒಂದು ಲಕ್ಷ ರೂ. ಸಾಲ ಮನ್ನಾ. ಪ್ರತಿವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ. ಕೀರ್ತಿ ಆಯೋಗ ಸ್ಥಾಪನೆ, ಸಕಾಲ ಕಾಯ್ದೆಗೆ ಮರುಜೀವ.

ಸಿ ಮತ್ತು ಡಿ ದರ್ಜೆ ನೌಕರರ ನೇಮಕದಲ್ಲಿ ಸಂದರ್ಶನ ರದ್ದು. ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಕಾಂಗ್ರೆಸ್ ಆಡಳಿತಾವಧಿಯ ಆರ್ಥಿಕ ನಿರ್ವಹಣೆ ಬಗ್ಗೆ ಶ್ವೇತಪತ್ರ ಬಿಡುಗಡೆ. ಸಿಎಂ ಕಚೇರಿ ಅಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ. ಏಮ್ಸ್ ಮಾದರಿಯಲ್ಲಿ ರಾಜ್ಯದಲ್ಲಿ ಎರಡು ವೈದ್ಯವಿಜ್ಞಾನ ಸಂಸ್ಥೆಯ ಸ್ಥಾಪನೆ.

ಆಯುಷ್ಮಾನ್ ಕರ್ನಾಟಕ ಯೋಜನೆ. ಆಯುಷ್ ಆರೋಗ್ಯ ಕೇಂದ್ರ, ಆಯುಷ್ ವಿವಿ ಸ್ಥಾಪನೆ. ನದಿ ನೀರು ಮತ್ತು ಮೇಲ್ಮೈ ನೀರು ಬಳಸಿ ಶುದ್ಧ ಕುಡಿಯುವ ನೀರು ಯೋಜನೆ ರೂಪಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ. ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ಪಟ್ಟಣಗಳಲ್ಲಿ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ.

 

ದೇವನಹಳ್ಳಿಯಲ್ಲಿ ಮೆಗಾ ಫಿಲಂಸಿಟಿ ನಿರ್ಮಾಣ. ಬೆಂಗಳೂರು ಸಂಪೂರ್ಣ ಕಸಮುಕ್ತ ನಗರವಾಗಿರುವ ಯೋಜನೆ. ಬೆಂಗಳೂರಿನ ಕೆರೆಗಳ ಪುನರುಜ್ಜೀವನಕ್ಕೆ 2500 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ನಿಧಿ ಸ್ಥಾಪನೆ. ಕಾಲೇಜಿಗೆ ಸೇರಿದ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್‍ಟಾಪ್. 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 750 ವಸತಿ ನಿಲಯ ಸ್ಥಾಪನೆ.

 

ಈಡೇರಿಸಿರುವ ಭರವಸೆಗಳು:


ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ ವಿಮೆ ಪಾವತಿ. ಸುಜಲಾಂ ಸುಫಲಾಂ ಕರ್ನಾಟಕ ಕೆರೆ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ. ಸರ್ಕಾರ ರಚನೆಯಾದ ಮೂರು ತಿಂಗಳಲ್ಲಿ ನೇಕಾರರ ಒಂದು ಲಕ್ಷ ರೂ. ಸಾಲ ಮನ್ನಾ. ಆಯುಷ್ಮಾನ್ ಕರ್ನಾಟಕ ಯೋಜನೆ. ಪ್ರತಿವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ. ಸಿ ಮತ್ತು ಡಿ ದರ್ಜೆ ನೌಕರರ ನೇಮಕದಲ್ಲಿ ಸಂದರ್ಶನ ರದ್ದು. ಮೆಗಾ ಫಿಲಂಸಿಟಿ ನಿರ್ಮಾಣಕ್ಕೆ 500 ಕೋಟಿ ಬಜೆಟ್‍ನಲ್ಲಿ ಮೀಸಲು.

 

Find Out More:

Related Articles: