ಉತ್ತರ ಕರ್ನಾಟಕದಲ್ಲಿ ನಿಲ್ಲದ ಮಳೆ: ಜನರ ಬದುಕು ಸಂಕಷ್ಟ

somashekhar
ಉತ್ತರ ಕರ್ನಾಟಕ, ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಮುಂದುವರೆದಿದೆ. ಕರಾವಳಿ ಭಾಗದಲ್ಲಿ ಕೊಂಚ ಮಟ್ಟಿಗೆ ಮಳೆ ಕಡಿಮೆ ಆಗಿದ್ದು, ಆದರೆ ಗಾಳಿ ಮಾತ್ರ ದೊಡ್ಡ ಮಟ್ಟದಲ್ಲಿ ಬೀಸುತ್ತಿದೆ. ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದ . ಇನ್ನು ಮಲೆನಾಡಿನ ಬಗ್ಗೆ ಹೇಳೋದಾದರೆ, ಇಲ್ಲಿ 50ಕ್ಕೂ ಹೆಚ್ಚು ಸೇತುವೆಗಳು ಮುಳುಗಿವೆ. ಇನ್ನು ಕೆಲವು ಕಡೆಗಳಲ್ಲಿ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಅಲ್ಲದೇ 20ಸಾವಿರಕ್ಕೆ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಇಷ್ಟೇ ಅಲ್ಲದೇ 12 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯಲ್ಲಿರುವ ನದಿಗಳಾದ ವೇದಗಂಗಾ, ದೂಧಗಂಗಾ, ಕೃಷ್ಣಾ ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ವರದಾ, ಗಂಗಾವಳಿ, ಕಾಳಿ, ಅಘನಾಶಿನಿ, ಶರಾವತಿ, ತುಂಗಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ಜಲಪ್ರಳಯಕ್ಕೆ ಅಕ್ಷರಶಃ ತತ್ತರಿಸಿ ಹೋಗಿವೆ. ಜನರು ಸಂಕಷ್ಟದಲ್ಲಿ ಕಾಲ ಕಳೆಯುವಂತೆ ಆಗಿದೆ. 

ಇನ್ನು ಕೊಯ್ನಾ, ರಾಜಾಪುರ ಬ್ಯಾರೇಜ್ ಸೇರಿದಂತೆ ವಿವಿದೆಡೆ ಕೃಷ್ಣಾ ನದಿಗೆ ಗುರುವಾರ 6.78 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಅಲ್ಲದೇ ಆಲಮಟ್ಟಿ ಮತ್ತು ಬಸವಸಾಗರ ಡ್ಯಾಮ್‌ಗಳು ಭರ್ತಿ ಆಗಿದ್ದರಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೇ ಕಾರಣಕ್ಕೆ ವಿಜಯಪುರ, ರಾಯಚುರು ಮತ್ತು ಯಾದಗಿರಿ ಜಿಲ್ಲೆಗಳ ತೀರ ಪ್ರದೇಶಗಳಲ್ಲಿ ಪ್ರವಾಗ ಉಂಟಾಗಿದೆ. ಇಲ್ಲಿನ ಅನೇಕ ಗ್ರಾಮಗಳು ನಡುಗಡ್ಡೆಗಳಾಗಿ ಪರಿವರ್ತನೆ ಆಗಿವೆ.

ಇನ್ನು ಬೆಳಗಾವಿ ಜಿಲ್ಲೆಗೆ ಬರೋದಾದರೆ, ಇಲ್ಲಿನ ಹಿಡಕಲ್, ಮಲಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ ಜಲಾಶಯಗಳ ಒಳಹರಿವಿನ ಪ್ರಮಾಣವು ಸಂಪೂರ್ಣವಾಗಿ ಏರಿಕೆ ಆಗಿದೆ. 151ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿವೆ. ಇದರ ಜೊತೆಗೆ 30 ಸೇತುವೆಗಳು ಮುಳುಗಡೆ ಆಗಿವೆ. ಹೀಗಾಗಿ ಚಿಕ್ಕೋಡಿ, ರಾಯಭಾಗ ಮತ್ತು ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ತೀವ್ರವಾದಂತಹ ಆತಂಕ ಉಂಟಾಗಿದೆ.

ಇನ್ನು ಪ್ರವಾಹ ಪೀಡಿತರು ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. 40000 ಜನರನ್ನು ಇಲ್ಲಿಯವರೆಗೆ ರಕ್ಷಣೆ ಮಾಡಲಾಗಿದೆ. 161 ಪರಿಹಾರ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಹೆಕ್ಟರ್ ಬೆಳೆ ಹಾನಿಯಾಗಿದೆ. ಇನ್ನು ಗೋಕಾಕ್ ನಗರಕ್ಕೆ ನೀರು ನುಗ್ಗಿ ಜಲಾವೃತವಾಗಿದೆ. ಖಾನಾಪುರದ ಬಾಹ್ಯ ಸಂಪರ್ಕ ಕಡಿತಗೊಂಡಿದ್ದು, ಮಹಾರಾಷ್ಟ್ರ, ಗೋವಾ ಈ ಮದ್ಯೆ ಸಂಪರ್ಕವೂ ಕಡಿತವಾಗಿದೆ. 


Find Out More:

Related Articles: