ಸರ್ಕಾರಿ ಬಸ್ ಡ್ರೈವರ್ ಆದ ರೇಣುಕಾಚಾರ್ಯ, ನಗಿಸುತ್ತಲೇ 58 ಕಿ.ಮೀ ಡ್ರೈವಿಂಗ್

Soma shekhar
ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಇದೀಗ ಸರ್ಕಾರಿ ಬಸ್ ಡ್ರೈವರ್ ಆಗಿ ಬರೋಬ್ಬರಿ 58 ಕಿಲೋ ಮೀಟರ್ ಡ್ರೈವಿಂಗ್ ಮಾಡುವ ಮೂಲಕ ಅದರಲ್ಲೂ ಪ್ರಯಾಣಿಕರಿಗೆ ಕಾಮಿಡಿ ಮಾಡುತ್ತಾ ನಗಿಸುತ್ತಲೇ ಡ್ರೈವಿಂಗ್ ಮಾಡಿ ಭಾರೀ ಸುದ್ದಿಯಾಗಿದ್ದಾರೆ.
 
 ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಭಾನುವಾರ ಹೊನ್ನಾಳಿಯಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆಹಳ್ಳಿ ಗ್ರಾಮದವರೆಗೆ ಕೆಎಸ್‌ಆರ್‌ಟಿಸಿ ಬಸ್‌ ಚಾಲನೆ ಮಾಡಿ 58 ಕಿ. ಮೀ ಬಸ್ ಡ್ರೈವ್ ಮಾಡುವ ಮೂಲಕ ಗಮನ ಸೆಳೆದರು. ಕೆಎಸ್ಸಾರ್ಟಿಸಿ ಬಸ್‌ ಡಿಪೋದಿಂದ ತಾಲೂಕಿನ ಬೆನಕನಹಳ್ಳಿ ಸೇರಿದಂತೆ ಇತರ ಗ್ರಾಮೀಣ ಭಾಗಗಳಿಗೆ ಪ್ರಾರಂಭಿಸಲಾದ ಬಸ್‌ ಸೇವೆಗೆ ಭಾನುವಾರ ಚಾಲನೆ ನೀಡಿದ ಅವರು, ಬಸ್‌ ಚಾಲಕರ ಸಮವಸ್ತ್ರ ಧರಿಸಿ ತಾವೇ ಖುದ್ದಾಗಿ ಚಾಲನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು.
 
ಹೊನ್ನಾಳಿಯಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆಹಳ್ಳಿ ಗ್ರಾಮದವರೆಗೂ ಬಸ್‌ ಚಾಲನೆ ಮಾಡಿದರು. ಈ ವೇಳೆ ತಮ್ಮ ಅಭಿಮಾನಿಗಳೊಂದಿಗೆ ಹರಟುತ್ತಾ, ತಮ್ಮೊಂದಿಗೆ ತಮಾಷೆಯಾಗಿ ಮಾತನಾಡಲು ಬಂದವರಿಗೆ ಟಾಂಗ್‌ ಕೊಡುತ್ತಾ ಎರಡು ಬದಿ ಸೇರಿ 58 ಕಿಮೀ ಬಸ್‌ ಚಾಲನೆ ಮಾಡಿದ್ದು ಗಮನ ಸೆಳೆಯಿತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಫುಲ್ ವೈರಲ್ ಸಹ ಆಗಿದೆ. 
 
ರೇಣುಕಾಚಾರ್ಯ ಬಸ್‌ ಚಾಲನೆ ವೇಳೆ ಅಭಿಮಾನಿಗಳು ಶಾಸಕರಿಗೆ ಜಯಘೋಷ ಹಾಕಿದರು. ಹೊನ್ನಾಳಿಯ ತುಂಗಭದ್ರಾ ಸೇತುವೆ ಮೇಲೆ ಬಸ್‌ ಬರುತ್ತಿದ್ದಂತೆ ರೇಣುಕಾಚಾರ್ಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಅಭಿಮಾನಿಗಳಿಗೆ ಎಲ್ಲಿ, ಎಲ್ಲಾ ಟಿಕೆಟ್‌ ಹಣ ಕೊಡಿ, ನಾನೇ ಕಂಡಕ್ಟರ್‌. ಮುಂದೆ ಚೆಕ್ಕಿಂಗ್‌ ಇದೆ ಎಂದು ಕೇಳಿದರು. ಇದನ್ನು ಕೇಳಿದ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.
 
ಬಸ್‌ ನಿಲ್ಲಿಸಿ ಸಾರ್‌ ನಾವು ಇಳಿಯಬೇಕು ಎಂದು ಕೇಳಿದವರಿಗೆ ರೇಣುಕಾಚಾರ್ಯ, ಇದು ಎಕ್ಸ್‌ಪ್ರೆಸ್‌ ಬಸ್‌ ಎಂದರು. ಬಸ್‌ ಸಂಚರಿಸುವ ಮಾರ್ಗದಲ್ಲಿನ ವಿವಿಧ ಗ್ರಾಮಗಳ ಹೆಸರುಗಳನ್ನು ರೇಣುಕಾಚಾರ್ಯ ಹೇಳುತ್ತಾ ಗಮನ ಸೆಳೆದರು. ಇದಕ್ಕೆ ಪ್ರತಿ ಪಕ್ಷದವರು ನಾನಾ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

Find Out More:

Related Articles: