ಕೊರೋನಾ ಅಣುವಿನ ದಾಳಿಯ ನಡುವೆ ಅಮೇರಿಕಾದ ಅಣ್ವಸ್ತ್ರ ಪರೀಕ್ಷೆಯ ಚರ್ಚೆ ಏಕೆ..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Soma shekhar

ಇಡೀ ವಿಶ್ವದಾದ್ಯಂತ ಕೊರೊನಾ ಎಂಬ ಅಣು ಲಕ್ಷಾಂತರ ಜನರನ್ನು ಬಲಿ ತೆಗೆದು ಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಅಮೇರಿಕಾವನ್ನು ಅಘೋದವಾಗಿ ಕಾಡುತ್ತಿದ್ದರೂ ಕೂಡ ಅಮೇರಿಕಾ ಮಾತ್ರ ಅಣುಪರೀಕ್ಷೆಯನ್ನು ಮಾಡಲು ಮುಂದಾಗುತ್ತಿದೆ. ಅಷ್ಟಕ್ಕೂ ಕೊರೋನಾ ಅಣುವಿನ ದಾಳಿಯ ನಡುವೆ ಅಣ್ವಸ್ತ್ರ ಪ್ರಯೋಗ ಮಾಡುವ ಚರ್ಚೆ ನಡೆಸುತ್ತಿರುವುದಾದರೂ ಏಕೆ..?

 

ದಶಕಗಳ ನಂತರ ಅಮೆರಿಕ ಮತ್ತೊಮ್ಮೆ ಅಣುಪರೀಕ್ಷೆಗೆ ಮುಂದಾಗುತ್ತಿದೆಯೇ? ಕೊವಿಡ್ 19 ನಿಯಂತ್ರಿಸಲು ವಿಫಲವಾದ ಡೊನಾಲ್ಡ್ ಟ್ರಂಪ್ ಈಗ ಅಣುಪರೀಕ್ಷೆ ವಿಷಯ ಮುಂದಿಟ್ಟುಕೊಂಡು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

1992ರ ನಂತರ ಇದೆ ಮೊದಲ ಬಾರಿಗೆ ಅಣುಪರೀಕ್ಷೆ ನಡೆಸುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಚರ್ಚಿಸಿರುವ ಬಗ್ಗೆ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ರಷ್ಯಾ ಹಾಗೂ ಚೀನಾಗಳಿಗೆ ಎಚ್ಚರಿಕೆ, ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಅಣು ಪರೀಕ್ಷೆ ನಡೆಸಲು ಚರ್ಚಿಸಲಾಗಿದೆ ಎಂದು ವರದಿ ಬಂದಿದೆ.

 

ಅಮೆರಿಕದ ರಕ್ಷಣಾ ನೀತಿಯಲ್ಲಿ ಗಣನೀಯ ಬದಲಾವಣೆ ತರಲು ಟ್ರಂಪ್ ಆಡಳಿತ ಮುಂದಾಗಿದೆ. ಇದರಿಂದಾಗಿ ಅಣ್ವಸ್ತ್ರ ಹೊಂದಿರುವ ದೇಶಗಳ ನಡುವೆ ನಾಟಕೀಯವಾಗಿ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ. ಅಮೆರಿಕ ಪರೀಕ್ಷೆ ನಡೆಸಿದರೆ ಅದು ಅಭೂತಪೂರ್ವ ಮಟ್ಟದ ಅಣ್ವಸ್ತ್ರ ಸಮರಕ್ಕೆ ಚಾಲನೆ ನೀಡಲಿದೆ ಎಂದು ರಕ್ಷಣಾ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

 

ಮೇ 15ರಂದು ನಡೆದ ಸಭೆಯಲ್ಲಿ ಅಣು ಪರೀಕ್ಷೆಯ ಬಗ್ಗೆ ಚರ್ಚಿಸಲಾಗಿದೆ ಎಂದು ಸಭೆಯ ವಿವರಗಳನ್ನು ಬಲ್ಲ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಸುದ್ದಿಯನ್ನು ಸೋರಿಕೆ ಮಾಡಿದ್ದಾರೆ.

ರಷ್ಯಾ ಹಾಗೂ ಚೀನಾಗಳು ನಿಯಮ ಮೀರಿ ಕಡಿಮೆ ಪ್ರಮಾಣದಲ್ಲಿ ಅಣು ಪರೀಕ್ಷೆ ನಡೆಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಮಾಸ್ಕೋ ಹಾಗೂ ಬೀಜಿಂಗ್ ಪ್ರತಿನಿಧಿಗಳು, ಅಮೆರಿಕದಿಂದ ಬಂದಿರುವ ಆರೋಪಗಳನ್ನುಅಲ್ಲಗೆಳೆದಿದ್ದಾರೆ.

 

ಅಣ್ವಸ್ತ ಕುರಿತಂತೆ ಚೀನಾ, ರಷ್ಯಾ ಹಾಗೂ ಅಮೆರಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಬರುವ ಮುನ್ನ ತ್ವರಿತ ಗತಿಯಲ್ಲಿ ಅಣು ಪರೀಕ್ಷೆ ನಡೆಸುವ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.

ಅಣು ಪರೀಕ್ಷೆಗೆ ಅಮೆರಿಕ ಮುಂದಾದರೆ, ಅನಗತ್ಯ ಶೀತಲ ಸಮರ, ರಾಜಕೀಯ ಗೊಂದಲಗಳನ್ನು ಎದುರಿಸಬೇಕಾಗುತ್ತದೆ ಎಂದು ಅಣ್ವಸ್ತ್ರ ವಿರೋಧಿ ಅಭಿಯಾನದ ಸದಸ್ಯ 2017ರ ನೊಬೆಲ್ ಶಾಂತಿ ಪುರಸ್ಕೃತ ಬೀಟ್ರಿಸ್ ಫಿನ್ ಅವರು ಟ್ರಂಪ್ ಗೆ ಎಚ್ಚರಿಕೆ ನೀಡಿದ್ದಾರೆ.

 

Find Out More:

Related Articles: