ಮನುಷ್ಯನಲ್ಲಿ ಈ ಒಂದು ಶಕ್ತಿ ಹೆಚ್ಚಾಗಿದ್ದರೆ ಕೊರೋನಾವನ್ನು ಸೋಲಿಸಬಹುದು ಎಂದು ವರದಿಯೊಂದು ಹೇಳಿದೆ..!!

Soma shekhar

ಇಂದು ಕೊರೋರ ವೈರಸ್ ಇಡೀ ಪ್ರಪಂಚಕ್ಕೇ ಲಗ್ಗೆ ಇಟ್ಟು ಅನೇಕ ದೇಶಗಳಿಗೆ ವ್ಯಾಪಿಸಿ ಕೊಟ್ಯಾಂತರ ಮಂದಿಯನ್ನು ಸಾವಿನ ದವಡೆಯಲ್ಲಿ ಸಿಕ್ಕಿಸಿದೆ, ಇನ್ನು ಲಕ್ಷಾಂತರ ಮಂದಿಯನ್ನು ಕೊರೋನಾ ಬಲಿತೆಗೆದುಕೊಂಡಿದೆ, ಇಂತಹ ಈ ಕೊರೋನಾ ವೈರಸ್ ಅನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ದೇಶಗಳು ಕೊರೋನಾ ವೈರಸ್ ಗೆ ಲಸಿಕೆಯನ್ನು ಸಂಶೋಧಿಸುತ್ತಿದ್ದಾರೆ. ಪ್ರತಿನಿತ್ಯವೂ ಕೂಡ ಸಾಕಷ್ಟು ಪಾಸಿಟೀವ್ ಪ್ರಕರಣಗಳು ಪರೀಕ್ಷೆಯಿಂದ ದೃಡ ಪಡುತ್ತಿದೆ ಈ ವಿಷಯ ಒಂದು ಕಡೆಯಾದರೆ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಕೊರೋನಾ ಪರೀಕ್ಷೆಯನ್ನು ಮಾಡಿಸಿದ ಅದೆಷ್ಟೋ ಜನರಲ್ಲಿ ಒಂದು ಅದ್ಬುತವಾದ ವಿಷಯವೊಂದು ಬೆಳಕಿಗೆ ಬಂದಿದೆ ಈ ವಿಷಯ ಕೊರೋದಿಂದ ಹುಟ್ಟಿಕೊಂಡ ಆತಂಕವನ್ನು ಕಡಿಮೆ ಮಾಡಿದೆ.. 

 

ಮಹಾಮಾರಿ ಕರೊನಾ ವೈರಸ್​ ಮಣಿಸಲು ದೇಹದ ಇಮ್ಯುನಿಟಿ ಶಕ್ತಿಯೇ ಪ್ರಮುಖ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಕೆಲವರಿಗೆ ಕರೊನಾ ವೈರಸ್​ ಬಂದು ಹೋಗುವುದು ಗೊತ್ತಾಗುವುದಿಲ್ಲ ಎಂದು ಈ ಹಿಂದೆ ತಜ್ಞರು ಹೇಳಿದ ಮಾತಿಗೆ ನೂತನ ವರದಿಯೊಂದು ಪುಷ್ಟಿ ನೀಡಿದೆ.

 

ಈಗಾಗಲೇ ಕೆಲವರು ಆಯಂಟಿಬಾಡಿ ಬೆಳೆಸಿಕೊಂಡು ಕರೊನಾ ವಿರುದ್ಧ ಸೆಣಸಿದ್ದಾರೆ ಎಂಬುದು ಥೈರೋಕೇರ್ ಲ್ಯಾಬೋರೇಟರಿ​ ಹೆಸರಿನ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಸ್ಥೆಯು ಆಯಂಟಿಬಾಡಿ ಟೆಸ್ಟ್​ ನಡೆಸಿದ್ದು, ಇದರಲ್ಲಿ ರಾಜ್ಯಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ದೇಶಾದ್ಯಂತ ಸುಮಾರು 600 ಏರಿಯಾಗಳಲ್ಲಿ 60 ಸಾವಿರ ಪರೀಕ್ಷೆಗಳನ್ನು ಥೈರೋಕೇರ್​ ಸಂಸ್ಥೆ ನಡೆಸಿದೆ.

 

ಅಧ್ಯಯನ ಪ್ರಕಾರ ದೇಶದಲ್ಲಿ ಈಗಾಗಲೇ 15% ಮಂದಿಗೆ ಕರೊನಾ ಬಂದು ಹೋಗಿದೆ. ಅಂದರೆ ದೇಶದ 18 ಕೋಟಿ ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿದೆ ಎನ್ನುತ್ತಿದೆ ಥೈರೋಕೇರ್ ಲ್ಯಾಬೋರೇಟರಿಯ ಅಂಕಿ-ಅಂಶಗಳು.

 

ಈಗಾಗಲೇ ಕರೊನಾ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಕರೊನಾ ಬಂದು ಹೋಗಿದೆ. ಇಲ್ಲಿ ನಡೆಸಿದ ಆಯಂಟಿಬಾಡಿ ಟೆಸ್ಟ್​ನಲ್ಲಿ ಶೇ.44 ಮಂದಿಯಲ್ಲಿ ಕರೊನಾ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಬಳ್ಳಾರಿಯಲ್ಲೂ ಶೇ. 24 ಮಂದಿಗೆ ಕರೊನಾ ಈಗಾಗಲೇ ಬಂದು ಹೋಗಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಆಯಂಟಿಬಾಡಿ ಬೆಳೆದಿದೆ ಎನ್ನುತ್ತಿದೆ ಈ ಅಧ್ಯಯನ.

 

Find Out More:

Related Articles: