ಸದ್ದು ಮಾಡಲು ಶುರುಮಾಡಿದ ನಾರಾಯಣ

somashekhar
ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಕಾಣಿಸಿ ತೆರೆಯಮೇಲೆ ಕಾಣಿಸಿಕೊಳ್ಳದೆ ತುಂಬಾ ದಿನಗಳಾದವು. ದೊಡ್ಡ ಗ್ಯಾಪ್ ನ ಬಳಿಕ ರಕ್ಷಿತ್ 'ಅವನೇ ಶ್ರೀಮನ್ನಾರಾಯಣ' ನಾಗಿ ತೆರೆ ಮೇಲೆ ಬರುತ್ತಿದ್ದು, ಪ್ರಸ್ತುತ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್, ಕಾಲಿವುಡ್, ಮಾಲಿವುಡ್, ಹಾಲಿವುಡ್ ನಲ್ಲಿ ಚಿತ್ರ ತೆರೆಕಾಣುತ್ತಿದೆ. 199 ದಿನಗಳ ಶೂಟಿಂಗ್ ನಡೆಸಲಾಗಿದೆ. ಸುಂದರ ಶೂಟಿಂಗ್ ಕಾಖಿಯದಂತೆ ಇದು ಪೂರ್ಣಗೊಂಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿದ ಹೆಗ್ಗಳಿಕೆ ಈ ಸಿನಿಮಾದ್ದು. ನವೆಂಬರ್ ಅಂತ್ಯಕ್ಕೆ ಜನರ ಮುಂದೆ ಬರಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ.

ರಕ್ಷಿತ್ ಶೆಟ್ಟಿ ಇದರಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ನಾರಾಯಣ ಎಂದು. ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾದರೂ ತನ್ನ ಬುದ್ಧಿವಂತಿಕೆಯಿಂದ ಅದನ್ನು ಪರಿಹರಿಸುವುದರಲ್ಲಿ ಚಾಣಾಕ್ಷ ರಾಮಾಯಣದ ಸಮಸ್ಯೆಗಳಿಗೆ ಆತ ಹೇಗೆ ಪರಿಹಾರ ಹುಡುಕುತ್ತಾನೆ ಎನ್ನುವುದೇ ಈ ಚಿತ್ರದ ಕಥೆಯಾಗಿದೆಯಂತೆ. ನಾರಾಯಣ ಕ್ಯಾರೆಕ್ಟರ್ ಚಿತ್ರದ ಕೇಂದ್ರ ಬಿಂದು ನೋಡಲು ಭ್ರಷ್ಟ ಅಧಿಕಾರಿ ಅಂತ ಕಾಣುತ್ತಾನೆ ಜೊತೆಗೆ ಕಾಮಿಡಿಯನ್ ಆಗಿರುತ್ತಾನೆ. ಅತಿ ಬುದ್ಧಿವಂತ ಕೂಡ ಎನ್ನುತ್ತಾರೆ  ನಿರ್ದೇಶಕ ಸಚಿನ್ ರವಿ. 

ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ, ವಿಶ್ಯೂಲ್ ಎಫೆಕ್ಟ್ ಕೆಲಸ ಹೆಚ್ಚಿದ್ದರಿಂದ ಬಿಡುಗಡೆ ತಡವಾಗುತ್ತಿದೆ ಎನ್ನುವುದು ಅವರ ಸ್ಪಷ್ಟನೆ. ಇದು ಮೂವತ್ತು ವರ್ಷ ಹಿಂದೆ ನಡೆದ ಕಥೆ ಆದರೆ ಎಲ್ಲಿಯೂ ನಾವು ವರ್ಷವನ್ನು ನಮೂದಿಸಿದ ಯಾವುದೇ ಊರಿನಲ್ಲಿ ನಡೆದ ಕಥೆಯಂತೆ ಇದನ್ನು ತೆಗೆದುಕೊಂಡಿದ್ದೇವೆ. ಆ ಟೈಮ್ ಲೈನ್ ಗಳಿಗೆ ತಕ್ಕಂತೆ ಚಿತ್ರೀಕರಿಸಲಾಗಿದೆ, ರೆಟ್ರೋ ಎಂದಾಗ ಆ ಕಾಲದ ಉಡುಗೆ-ತೊಡುಗೆ ಕಣ್ಮುಂದೆ ಬರುತ್ತದೆ ನಾವು ಆತರ ಶೂಟ್ಮಾಡಿಲ್ಲ. ಕಾಲದಲ್ಲಿಯೂ ಯಾರಾದರೊಬ್ಬರು  ಅನುಸರಿಸಿ ಇರಬಹುದಲ್ಲವೇ ಚಿತ್ರಕ್ಕೆ ತಕ್ಕಂತೆ ಕೆಲವು ಮಾರ್ಪಾಡು ಮಾಡಿಕೊಂಡಿದ್ದೇವೆ ಎಂದು ಕಥೆಯ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸುತ್ತಾರೆ ಚರಣರಾಜ್. ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಮಿಂಚಿದ್ದಾರೆ.


Find Out More:

Related Articles: