ಶ್ವೇತಾ ಶ್ರೀವಾಸ್ತವ್ ಮಗು ಇದೀಗ ಸೆಲೆಬ್ರಿಟಿ

somashekhar
ಸ್ಯಾಂಡಲ್ ವುಡ್ ಲೋಕದಲ್ಲಿ ಇದೀಗ ಮತ್ತೊಂದು ಹೊಸತನ ಮೂಡಿದೆ. ಹೌದು ಅದು ನಟಿ ಶ್ವೇತಾ ಶ್ರೀವಾಸ್ತವ್ ಅವರಿಗೆ ಸಂಬಂಧಿಸಿದ ವಿಚಾರ. ಶ್ವೇತಾ ಶ್ರೀವಾಸ್ತವ್ ಅವರು ಸಿಂಪಲ್ಲಾಗ್ ಒಂದ್ ಸ್ಟೋರಿ ಹಾಗೂ ಕಿರಗೂರಿನ ಗಯ್ಯಾಳಿಗಳು ಮತ್ತು ಫೇರ್ ಅಂಡ್ ಲವ್ಲಿ ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು, ನಂತರ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ಬಿಡುವು ಪಡೆದಿದ್ದರು. ಇದಕ್ಕೆ ಕಾರಣ ಏನೆಂದರೆ ತಾಯ್ತನ. 


ಹೌದು ಶ್ವೇತಾ ಇದೀಗ ಎರಡು ವರ್ಷಗಳಿಂದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಅವರ ಮಗು ಅಶ್ಮಿತಾ ಅವರಿಗಷ್ಟೇ ವೀಶೇಷ ಎನಿಸಿಲ್ಲ. ಅಲ್ಲದೇ ಶ್ವೇತಾ ಶ್ರೀವಾಸ್ತವ್ ಅವರು ತನ್ನ ಮಗುವಿಗಾಗಿಯೇ ವಿಶೇಷ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ. ಅಲ್ಲಿ  ಲಕ್ಷಾಂತರ ಅಭಿಮಾನಿಗಳು ಈಕೆಯನ್ನು ಫಾಲೋ ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಪುಟಾಣಿ ಸೆಲೆಬ್ರಿಟಿ ಆಗಿದೆ.


ಹೀಗಾಗಿ ಪುಟಾಣಿ ವಯಸ್ಸಿನಲ್ಲಿಯೇ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಪಡೆಯೋದು ಅಂದರೆ ಅದೇನು ತಮಾಷೆ ಮಾತಾ? ಅಲ್ಲ ಬಿಡಿ. ಹೀಗಾಗಿ ನಟಿ ಶ್ವೇತಾ ಶ್ರೀವಾಸ್ತವ್ ಅಷ್ಟೇ ಅಲ್ಲ, ಅವರೊಂದಿಗೆ ತಮ್ಮ ಮಗುವೂ ಕೂಡ ಇದೀಗ ಸೆಲೆಬ್ರಿಟಿ ಆಗಿದೆ ಅನ್ನೋದು ಶ್ವೇತಾಗೆ ಮತ್ತೊಂದು ಖುಷಿಯ ಸಂಗತಿ ಎನ್ನಬಹುದು. 


ಶ್ವೇತಾ ಶ್ರೀವಾಸ್ತವ್ ಅವರೇನೋ ಮೂರು ವರ್ಷಗಳ ಕಾಲ ಚಿತ್ರಂಗದಿಂದ ದೂರ ಉಳಿದು ತಾಯ್ತನವನ್ನೂ ಅನುಭವಿಸಿದರು. ಆದರೆ ಇದೀಗ ಮತ್ತೆ ತೆರೆ ಮೇಲೆ ಅವರನ್ನು ನೋಡೋಕೆ ಅಭಿಮಾನಿಗಳು ಕಾತರದಿಂದಲೇ ಕಾಯುತ್ತಿದ್ದಾರೆ. ಹೀಗಾಗಿ ಈ ಕುರಿತು ಶ್ವೇತಾ ಶ್ರೀವಾಸ್ತವ್ ಅವರು ಹೇಳೋದೇನು ಗೊತ್ತಾ? ಮದುವೆ, ಗರ್ಬಿಣಿ ಹಾಗೂ ಮಗು ಆದ ತಕ್ಷಣ ನಾನು ನಟಿಸೋದಿಲ್ಲ ಎಂದುಕೊಂಡರೆ ಅದು ತಪ್ಪು. ಯಾರಾದರೂ ತಂದೆಯಾದ ತಕ್ಷಣವೇ ನಟಿಸೋದನ್ನು ಬಿಡುತ್ತಾರಾ? ಇಲ್ಲವಲಲ್ಲ ಹಾಗೆಯೇ ನಾನು ನಟಿಸುತ್ತೇನೆ ಎಂದರು.


ತಾಯಿಯಾದ ತಕ್ಷಣವೇ ನಟನೆಯನ್ನು ಬಿಡಬಾರದು ಎನ್ನುವುದು ನನ್ನ ಧೋರಣೆ. ನಾನು ಯಾವತ್ತೂ ಬಿಡುವು ಪಡೆಯೋಕೆ ಇಷ್ಟ ಪಡುವವಳು ಅಲ್ಲ. ಈಗ ನನ್ನೇದುರಿಗೆ ಅವಕಾಶಗಳೇ ಇಲ್ಲ ಎಂದಲ್ಲ. ಆದರೆ ನಾನು ಈಗಾಗಲೇ 15 ಸ್ಕ್ರಿಪ್ಟ್ ಗಳನ್ನು ತಿರಸ್ಕರಿಸಿದ್ದೇನೆ, ಆದರೆ ಒಳ್ಳೆಯ ಸ್ಕ್ರಿಪ್ಟ್ ಪಾತ್ರವನ್ನು ಮಾತ್ರವೇ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಶ್ವೇತಾ ಶ್ರೀವಾಸ್ತವ್. 



Find Out More:

Related Articles: