ತಮಿಳಿನಿ ಈ ಸಿನಿಮಾದ ರೀಮೇಕ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಚಿತಾರಾಮ್..!!

frame ತಮಿಳಿನಿ ಈ ಸಿನಿಮಾದ ರೀಮೇಕ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಚಿತಾರಾಮ್..!!

Soma shekhar
ಪ್ರತಿಭಾರಿಯೂಕೂಡ ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಡಿಸಿ ವಿವಿಧ ಬಗೆಯ ಪಾತ್ರಗಳನ್ನು ಮಾಡಿ ವೀಕ್ಷಕರಿಂದ ಮೆಚ್ಚುಗೆಯನ್ನು ಪಡೆದಿರುವ ರಚಿತಾರಾಮ್ ಲಾಕ್  ಹೊಸ ಹೊಸ ಕಥೆ ಕೇಳಿ, ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಇದೀಗ ಬ್ಲಾಕ್ ಕಾಮಿಡಿ ಕ್ರೈಂ ಸಿನಿಮಾದಲ್ಲಿ ನಟಿಸೋಕ್ಕೆ ಮುಂದಾಗಿದ್ದಾರೆ.


ಇತ್ತೀಚೆಗಷ್ಟೆ ರಚಿತಾ ರಾಮ್ ಮತ್ತು ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಸದ್ಯ ತಮಿಳಿನ 'ಕೊಲಮಾವು ಕೋಕಿಲ' ರೀಮೇಕ್ನಲ್ಲಿ ನಟಿಸಲು ಡಿಂಪಲ್ ಕ್ವೀನ್ ಸೈ ಅಂದಿದ್ದಾರೆ. ಕಳೆದ ವರ್ಷ 'ಕನ್ನಡ್ ಗೊತ್ತಿಲ್ಲ' ಸಿನಿಮಾ ಕಟ್ಟಿಕೊಟ್ಟಿದ್ದ ಮಯೂರ ರಾಘವೇಂದ್ರ, ಈಗ ತಮಿಳು ಸಿನಿಮಾವನ್ನ ಕನ್ನಡಕ್ಕೆ ತರ್ತಿದ್ದಾರೆ. ತಮಿಳಿನಲ್ಲಿ ನಯನತಾರಾ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ರಚಿತಾ ನಿಭಾಯಿಸಲಿದ್ದಾರೆ. ಈ ಬಗ್ಗೆ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಸಿನಿಮಾ ಶುರುವಾಗಲಿದೆ.


'ಕೊಲಮಾವು ಕೋಕಿಲ' ಕನ್ನಡ ರೀಮೇಕ್ಗೆ ಪಂಕಜ ಕಸ್ತೂರಿ ಅನ್ನೋ ಟೈಟಲ್ ಇಡುವ ಬಗ್ಗೆ ಚರ್ಚೆ ನಡೀತಿದೆ. ಚಿತ್ರದಲ್ಲಿ ಮಧ್ಯತರಗತಿಯ ಮುಗ್ಧ ಹುಡುಗಿ ಪಾತ್ರದಲ್ಲಿ ರಚಿತಾ ರಾಮ್ ಬಣ್ಣ ಹಚ್ಚಲಿದ್ದಾರೆ. ಮುಗ್ಧ ಹುಡುಗಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಡ್ರಗ್ ಪೆಡ್ಲರ್ ಆಗುವ ಕಥೆಯಿದು. ತಮಿಳಿನಲ್ಲಿ ನಯನತಾರಾ, ಕೋಕಿಲ ಪಾತ್ರವನ್ನ ಸೊಗಸಾಗಿ ನಿಭಾಯಿಸಿ ಗೆದ್ದಿದ್ದರು. ಕೋ ಕೋ ಕೋಕಿಲ ಹೆಸರಿನಲ್ಲಿ ಸಿನಿಮಾ ತೆಲುಗಿಗೂ ಡಬ್ ಆಗಿ ಪ್ರೇಕ್ಷಕರ ಮನಗೆಲ್ಲವಲ್ಲಿ ಸಕ್ಸಸ್ ಕಂಡಿತ್ತು.


ಇಡೀ ಸಿನಿಮಾ ಕಥೆ ನಾಯಕಿಯ ಸುತ್ತಾ ಸುತ್ತುತ್ತೆ. ಮುಗ್ಧ ಹುಡುಗಿಯನ್ನ ಪ್ರೀತಿಸುವ ಪ್ರಿಯಕರನಾಗಿ ಹಾಸ್ಯ ನಟ ಯೋಗಿ ಬಾಬು ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸಿದ್ದರು. ನಾಯಕಿ ಬಿಟ್ರೆ, ಈ ಪಾತ್ರವೇ ಚಿತ್ರದ ಹೈಲೆಟ್. ಸದ್ಯ ನಾಯಕಿ ಪಾತ್ರಕ್ಕೆ ರಚ್ಚು ಆಯ್ಕೆಯಾಗಿದ್ದು, ಯೋಗಿ ಬಾಬು ಮಾಡಿದ್ದ ಪಾತ್ರವನ್ನ ಯಾರಿಂದ ಮಾಡಿಸೋದು ಅನ್ನೋ ಗೊಂದಲದಲ್ಲಿದ್ದಾರೆ ನಿರ್ದೇಶಕರು. ಯಾರು ಸಿಗದೇ ಇದ್ರೆ, ಯೋಗಿ ಬಾಬು ಅವ್ರೇ ಕನ್ನಡ ಸಿನಿಮಾದಲ್ಲಿ ರಚಿತಾ ರಾಮ್ ಹಿಂದೆ ಬಿದ್ರೆ, ಅಚ್ಚರಿಪಡ್ಬೇಕಿಲ್ಲ.


'ಕೊಲಮಾವು ಕೋಕಿಲ' ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಾಗ್ಲೇ ಕನ್ನಡಕ್ಕೆ ರೀಮೇಕ್ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಇದೀಗ ಲಾಕ್ಡೌನ್ ಟೈಮಲ್ಲಿ ಸಿನಿಮಾ ರೀಮೇಕ್ ಬಗ್ಗೆ ಖಚಿತ ಮಾಹಿತಿ ಸಿಕ್ತಿದೆ. ಶೀಘ್ರದಲ್ಲೇ 'ಕೊಲಮಾವು ಕೋಕಿಲ' ಕನ್ನಡ ರೀಮೇಕ್ ಸೆಟ್ಟೇರಲಿದೆ.

Find Out More:

Related Articles:

Unable to Load More