ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಹೌದು, ಇಲ್ಲಿಯತನಕ ಯಾವುದಾದರೂ ಒಂದು ಸಿನಿಮಾ ಶೂಟಿಂಗ್ನಲ್ಲಿ ಫುಲ್ ಬ್ಯುಝಿ ಇರುತ್ತಿದ್ದ ನಟ ಶಿವರಾಜಕುಮಾರ್, ಇನ್ಮೇಲೆ ಬರುವ ನವೆಂಬರ್‌ವರೆಗೂ ತಮ್ಮ ನಟನೆಗೆ ಒಂದು ಬ್ರೇಕ್ ನೀಡಲಿದ್ದಾರೆ. ಇದರ ಜೊತೆಗೆ ಕೆಲವೊಂದಿಷ್ಟು ತಿಂಗಳು ಕಾಲ ಆ್ಯಕ್ಷನ್‌ನಿಂದಲೂ ಶಿವರಾಜ್ ಕುಮಾರ ಅವರು ದೂರ ಉಳಿಯಲಿದ್ದಾರೆ. ಹಾಗಾದರೆ, ಶಿವರಾಜಕುಮಾರ್ ಅವರು ಯಾಕೆ ನಟನೆ ಮತ್ತು ಆ್ಯಕ್ಷನ್‌ಗೆ ಸದ್ಯಕ್ಕೆ ಬ್ರೇಕ್ ನೀಡಿದ್ದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ.
ಹೌದು, ನಟ ಶಿವರಾಜ್ ಕುಮಾರ ಅವರು ಹಿಂದೆ ಲಂಡನ್‌ಗೆ ಹೋದಾಗ, ಅಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದರು. ಆಗ ಕೈಗೆ ಪೆಟ್ಟು ಬಿದ್ದಿತ್ತು. ನಂತರ ಟ್ಯಾಬ್‌ಲೆಟ್ ತೆಗೆದುಕೊಂಡು ಸುಮ್ಮನಾಗಿದ್ದರು. ಆದರೆ, ಇದೀಗ ನೋವು ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಮತ್ತೆ ಲಂಡನ್ ಗೆ ತೆರಳುತ್ತಿದ್ದಾರೆ. ಹೀಗಾಗಿ, ನಟ ಶಿವರಾಜ್ ಕುಮಾರ ಅವರು ಚಿಕಿತ್ಸೆ ಬಳಿಕ ಕೆಲ ತಿಂಗಳು ನಟನೆಗೆ ಬ್ರೇಕ್ ಕೊಡುತ್ತೇನೆ ಎಂದಿದ್ದಾರೆ.
ಶಿವರಾಜ್ ಕುಮಾರ ಅವರು ಜುಲೈ ಮೊದಲ ವಾರದಲ್ಲಿ ಲಂಡನ್‌ಗೆ ಹೋಗಲಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬವೂ ಇದೇ ಸಮಯದಲ್ಲಿ ಇರುವುದರಿಂದ, ಈ ಬಾರಿ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನೂ ಆಚರಿಸಲು ಸಾಧ್ಯವಾಗುವುದಿಲ್ಲ ಅನ್ನೋ ನೋವು ಅಭಿಮಾನಿಗಳನ್ನು ಕಾಡುತ್ತಿದೆ ಅನ್ನೋದು ಸತ್ಯ.