ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮಗಳಿಗೆ ಅದ್ಯಾವ ಹೆಸರುಉ ಇಡುತ್ತಾರೋ ಎನ್ನುವ ಕುತೂಊಹಲ ಎಲ್ಲರಲ್ಲೂ ಇತ್ತು. ಅಲ್ಲದೇ ಅನೇಕ ಅಭಿಮಾನಿಗಳು ಈ ದಂಪತಿಗೆ ಕೆಲವು ಹೆಸರುಗಳನ್ನು ಸೂಚಿಸಿದ್ದರು. ಕೊನಗೆಊ ಇದೀಗ ಯಶ್-ರಾಧಿಕಾ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಹಾಗಾದರೆ ಅದರ ಹೆಸರು ಏನು ಅನ್ನೋದು ಇಲ್ಲಿದೆ ನೋಡಿ.
ಹೌದು, ಯಶ್ ಹಾಗೂ ರಾಧಿಕಾ ದಂಪತಿ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಮುದ್ದಾದ ಈ ಮಗುವಿಗೆ ಅವರು “ಐರಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನು ಇಂಗ್ಲೀಷ್ ನಲ್ಲಿ ಓದಿದ ಕೆಲವರು ಆರ್ಯಾ ಎಂದುಕೊಂಡಿದ್ದರು. ಆದರೆ ನಂತರ ಅದು ಐರಾ ಎಂದು ಗೊತ್ತಾಯಿತು. ಐರಾ ಎನ್ನುವ ನಾಮಪದದ ಅರ್ಥವೇನು ಗೊತ್ತಾ? ಐರಾ ಎಂದರೆ ಬೇರೆ ಏನೂ ಅಲ್ಲ. ಅದು ಗೌರವಾನ್ವಿತ ಎಂದು ಅರ್ಥ ಹೊಂದಿದೆ.
ಹೀಗೆ ಈ ದಂಪತಿ ತಮ್ಮ ಮಗುವಿಗೆ ವಿಭಿನ್ನ ಹೆಸರು ಇಡುವ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಯಶ್ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ನಿನ್ನೆ ಬೆಂಗಳುರಿನ ತಾಜ್ ವೆಸ್ಟೆಂಡ್‌ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಯಶ್ ದಂಪತಿ, ಹಾಗೂ ಪೋಷಕರು ಮತ್ತು ಕುಟುಂಬದ ಆಪ್ತರು, ಭಾಗವಹಿಸಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.