ಈ ಒಂದು ಕಾರಣಕ್ಕೆ ಆಕ್ಸ್ ಫರ್ಡ್ ಕೊರೋನಾ ಔಷಧಿ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ..!!

Soma shekhar

ಕೊರೋನಾ ವೈರಸ್ ಗೆ ಔಷಧಿಯನ್ನು ಇಂಗ್ಲೆಡ್ ನ ಆಕ್ಸ್ ಫರ್ಡ್ ಯುಸಿವರ್ಸಿಟಿ ಸಂಶೋಧಿಸಿದ್ದೇವೆ ಎಂದು ಹೇಳಿದಾಗಿನಿಂದ ಜಗತ್ತಿನಲ್ಲಿ ನೆಮ್ಮದಿಯ ಭಾವ ಮೂಡಿದೆ.  ಈ ಔಷಧಿಯಿಂದಾಗಿ  ಈಡೀ ಪ್ರಪಂಚದಿಂದ ಕೊರೋನಾವನ್ನು ಹಿಮ್ಮೆಟ್ಟಿಸಬಹುದು ಎಂಬುದು ಎಲ್ಲರ ಆಶಾ ಭಾವನೆಯಾಗಿದೆ ಅದೇ ರೀತಿ ಈ ಸಂದರ್ಭದಲ್ಲಿ ಕೊರೋನಾಗೆ ಸಂಶೋಧಿಸಲಾದ ಔಷಧಿಗಾಗಿ ಎಲ್ಲಾ ದೇಶಗಳು ಎದುರು ನೋಡುತ್ತಿವೆ ಅದೇ ರೀತಿ ಭಾರತವೂ ಕೂಡ ಈ ಔಷಧಿಗಾಗಿ ಎದುರು ನೋಡುತ್ತಿದೆ, ಇದರ ಜೊತೆಗೆ ಸಂಶೋಧನೆಯನ್ನು ನಡೆಸಿದ ಇಂಗ್ಲೆಂಡಿನ ಸಂಶೋಧಕರೊಂದಿಗೆ ಭಾರತವೂ ಕೂಡ ತನ್ನ ಪಾಲುದಾರಿಕೆಯನ್ನು ಹೊಂದಿರುವುದರಿಂದ ಭಾರತಕ್ಕೆ ಶೀಘ್ರದಲ್ಲೇ ಈ ಔಷಧಿ ದೊರೆಯಲಿದೆ  ಎಂದು ಹೇಳಲಾಗುತ್ತಿದೆ.

 

 

ಹೌದು ಕರೋನಾ ವೈರಸ್ ವಿರುದ್ಧದ ಲಸಿಕೆಯನ್ನು ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿದೆ ಮತ್ತು ಪರವಾನಗಿ ಪಡೆದ ಕೂಡಲೇ ಭಾರತದಲ್ಲಿ ಇದನ್ನು ಪರೀಕ್ಷಿಸಲಾಗುವುದು ಎನ್ನಲಾಗಿದೆ. ಲಸಿಕೆ ಅಭಿವೃದ್ಧಿಪಡಿಸಲು ಯುಕೆ ಸಂಶೋಧಕರೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತೀಯ ಕಂಪನಿಯೊಂದು ಈ ಮಾಧ್ಯಮಗಳಿಗೆ ಬಹಿರಂಗ ಪಡಿಸಿದೆ.

 

ಆಕ್ಸ್‌ಫರ್ಡ್‌ನ AZD1222 ಲಸಿಕೆ ಮೊದಲ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ಈ ನಿಟ್ಟಿನಲ್ಲಿ ಸೋಮವಾರ ತನ್ನ ಪ್ರಯೋಗದ ವರದಿಯನ್ನು ಜರ್ನಲ್‌ನಲ್ಲಿ ಪ್ರಕಟ ಮಾಡಿದ್ದು, ಮುಂಬರುವ ದಿವಸದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯನ್ನು ಕೂಡ ನಡೆಲಿದೆ, ಅದ್ಯಾಗೂ ಕೂಡ ಈಗಾಗಲೇ ಬ್ರಿಟನ್‌ನಲ್ಲಿ ಈ ಲಸಿಕೆಗೆ ಡಿಮ್ಯಾಂಡ್‌ ಹೆಚ್ಚಿದ್ದು, ಇಲ್ಲಿನ ಸರ್ಕಾರ ಸುಮಾರು ಒಂದು ಕೋಟಿ ಲಸಿಕೆಯನ್ನು ಪ್ರಿ ಅರ್ಡರ್‌ ಮಾಡಿದೆ. ಲಸಿಕೆ ಯಾವುದೇ ಅಡ್ಡಪರಿಣಾಮಗಳಿಗೆ ಕಾರಣವಾಗಲಿಲ್ಲ ಜೊತೆಗೆ ಈ ಲಸಿಕೆ ತೆಗೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದನ್ನು ಕೂಡ ಕಂಡು ಬಂದಿದೆ ಎಂದು ದಿ ಲ್ಯಾನ್ಸೆಟ್‌ನ ವರದಿ ತಿಳಿಸಿದೆ. ಲಸಿಕೆಯನ್ನು ಜೆನ್ನರ್ ಸಂಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಕರೋನದ ವಿರುದ್ಧ ಎರಡು ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದ್ದು, ಈ ಲಸಿಕೆ ದೇಹವು ಪ್ರತಿಕಾಯಗಳನ್ನು ತಯಾರಿಸಲು ಮತ್ತು ಟಿ-ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆಯಂತೆ.


ಲಸಿಕೆ ತೆಗೆದುಕೊಂಡವರಲ್ಲಿ ಕೆಲವು ಸೌಮ್ಯ ಅಡ್ಡಪರಿಣಾಮಗಳು ಕಂಡು ಬಂದಿದ್ದು, ಇದನ್ನು ಪ್ಯಾರೆಸಿಟಮಾಲ್ ಸಹಾಯದಿಂದ ಅವುಗಳನ್ನು ಕಡಿಮೆ ಮಾಡಬಹುದು ಅಂತ ಸಂಶೋಧನ ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ. ಪುಣೆ ಮೂಲದ ಸೀರಮ್ ಸಂಸ್ಥೆ ಕೋಟಿ ರೂಪಾಯಿಗಳನ್ನು ಈ ಸಂಶೋಧನೆಯಲ್ಲಿ ಹೂಡಿಕೆ ಮಾಡಿದ್ದು, ಈ ನಿಟ್ಟಿನಲ್ಲಿ ಈ ಲಸಿಕೆಯ ಯಶಸ್ಸು ಭಾರತಕ್ಕೆ ಸಿಗಲಿದೆ ಎನ್ನಲಾಗಿದೆ. "ಪರೀಕ್ಷೆಯಲ್ಲಿನ ಲಸಿಕೆಯ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ" ಎಂದು ಆಕ್ಸ್‌ಫರ್ಡ್ ಸಂಶೋಧಕರ ಸಹಭಾಗಿತ್ವದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಹೇಳಿದ್ದಾರೆ.ನಾವು ಶೀಘ್ರದಲ್ಲೇ ಭಾರತದಲ್ಲಿ ಮಾನವ ಪರೀಕ್ಷೆಗೆ ಲಸಿಕೆ ಪಡೆಯಲು ಪ್ರಯತ್ನಿಸುತ್ತೇವೆ. ಅದೇ ಸಮಯದಲ್ಲಿ, ನಾವು ಶೀಘ್ರದಲ್ಲೇ ಲಸಿಕೆಯ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ" ಎಂದು ಆದರ್ ಪುನವಾಲಾ ಎಂದು ಹೇಳಿದ್ದಾರೆ.

 

Find Out More:

Related Articles: