ಯಶ್ ಕೆಜಿಎಫ್-2 ನಂತರ ಯಾವ ಸಿನಿಮಾದ ಕತೆಗೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ ಗೊತ್ತಾ..?

Soma shekhar

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ರಾಕಿ ಭಾಯ್  ಯಶ್ ಸದ್ಯ ಕೆಜಿಫ್-2 ನಲ್ಲಿ  ತೊಡಗಿಸಿಕೊಂಡಿದ್ದಾರೆ ಈ ನಡುವೆ ಕೊರೋನಾ ದಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿರುವುದರಿಂದ ತಮ್ಮ ಮಕ್ಕಳೊಂದಿಗೆ  ಯಶ್ ಕಾಲಕಳೆಯುತ್ತಿದ್ದಾರೆ, ಸದಸ‍್ಯ ಯಶ್ ಕೆಜಿಎಫ್-2 ನಲ್ಲಿ ಬ್ಯುಸಿ ಇರುವುದರಿಂದ  ಯಶ್ ಮುಂದಿನ ದಿನಗಳಲ್ಲಿ  ಮತ್ಯಾವ ಸಿನಿಮಾವನ್ನು ಮಾಡುತ್ತಾರೆ  ಎಂಬ ಗೊಂದಲ ಎಲ್ಲಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅಷ್ಟಕ್ಕೂ ಯಶ್ ಕೆಜಿಎಫ್-2 ನಂತರ ಯಾವ ಸಿನಿಮಾ ಮಾಡಲಿದ್ದಾರೆ ಗೊತ್ತಾ..?

 

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಸ್ಯಾಂಡಲ್​ವುಡ್​ ಸ್ಥಬ್ದವಾಗಿದೆ. ಎಲ್ಲಾ ಸೆಲೆಬ್ರೆಟಿಗಳು ಮನೆಯಲ್ಲಿಯೇ ಕಾಲ ಕಳಿತಿದ್ದಾರೆ. ಒಂದಷ್ಟು ಸೆಲೆಬ್ರಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಆಯಕ್ಟಿವ್​ ಇದ್ದು, ತಮ್ಮ ಬಗ್ಗೆ ಆಗಾಗ್ಗೆ ಅಪ್​ಡೇಟ್ ಕೊಡ್ತಾ ಇರ್ತಾರೆ. ಆದರೆ, ರಾಕಿಂಗ್ ಸ್ಟಾರ್ ಬಹುದಿನಗಳೀಂಧ ಸೊಶೀಯಲ್​ ಮೀಡಿಯಾದಲ್ಲೂ ಆಕ್ವೀವ್  ಇಲ್ಲ.  

 

ರಾಖೀ ಭಾಯ್​, ಲಾಕ್​ಡೌನ್​ ಸಮಯದಲ್ಲಿ ಮುದ್ದಿನ ಮಕ್ಕಳ ಜೊತೆ ಕಾಲ ಕಳಿತಿದ್ದಾರೆ ಅನ್ನೋದು ಮಾತ್ರ ಗೊತ್ತಿದೆ. ಆದರೆ, ಅದರ ಜೊತೆಗೆ ಸದ್ದಿಲ್ಲದೆ ಮುಂದಿನ ಸಿನಿಮಾಗೇ ತಯಾರಿ ಮಾಡ್ತಿದ್ದಾರೆ ಅನ್ನೋದೇ ವಿಶೇಷ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೇ ಪ್ಲಾನ್ ಮಾಡ್ತಿದ್ದಾರಂತೆ ಯಶ್.

ಕೆಜಿಎಫ್​ 2 ಸಿನಿಮಾ ನಂತರ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಇದ್ದೇ ಇತ್ತು. ಇದೀಗ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೇ ಸಜ್ಜಾಗ್ತಿರೋ ಯಶ್, ಈ ಮೂಲಕ ಕನ್ನಡದ ನಿರ್ದೇಶಕರರೊಬ್ಬರನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಯಿಸಲಿದ್ದಾರೆ.

ಯಶ್ ತಮ್ಮ ಸಿನಿಮಾಗೆ ಕನ್ನಡದ ನವ ಹಾಗೂ ಪ್ರತಿಭಾನ್ವಿತ ನಿರ್ದೇಶಕನ ಕಥೆಯನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಅಪ್ಪಟ ದೇಸಿ ಪ್ರತಿಭೆಯನ್ನ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಮಿಂಚಿಸಲಿದ್ದಾರೆ. ಆ ನಿರ್ದೇಶಕ ಮತ್ಯಾರು ಅಲ್ಲ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್. ಈ ಮೂಲಕ ನರ್ತನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದ್ದಾರೆ.

 

ಕೆಜಿಎಫ್ 2 ನಂತರ ನಿರ್ದೇಶಕ ನರ್ತನ್​ ಮತ್ತು ರಾಖೀ ಭಾಯ್​ ಕಾಂಬಿನೇಷನ್​ನ ಚಿತ್ರ ಕನ್ಫರ್ಮ್​ ಆಗಿದೆ. ಲಾಕ್​ಡೌನ್​ಗೂ ಮುನ್ನ ಒನ್ ಲೈನ್ ಕಥೆ ಕೇಳಿದ್ದ ಯಶ್, ಸಂಪೂರ್ಣ ಕಥೆಯನ್ನ ರೆಡಿಮಾಡಿಕೊಳ್ಳಲು ತಿಳಿಸಿದರಂತೆ, ಈಗ ಸ್ಕ್ರಿಪ್ಟ್ ಮಾಡಿಕೊಂಡಿರೋ ನರ್ತನ್ ಯಶ್ ಜೊತೆಯಲ್ಲಿ ಕಥೆಯ ಬಗ್ಗೆ ಚರ್ಚೆ ಮಾಡ್ತಿದ್ದಾರಂತೆ. ಆದಷ್ಟು ಬೇಗ ಸ್ಕ್ರಿಪ್ಟ್ ಓಕೆ ಮಾಡಿ ಪ್ರೀ ಪ್ರೊಡಕ್ಷನ್ ಪ್ಲಾನ್ ಮಾಡಲಿದ್ದಾರಂತೆ.

 

ಇನ್ನು ಕೆಜಿಎಫ್​ 2 ಇನ್ನು 20ರಿಂದ 25 ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೊಬರ್ 23ಕ್ಕೆ ಸಿನಿಮಾ ತೆರೆಕಾಣೋದು ಕನ್ಫರ್ಮ್​. ಹಾಗೇನಾದ್ರೂ ಆದರೆ ಡಿಸೆಂಬರ್​ನಲ್ಲಿ ಅಥವಾ ಹೊಸವರ್ಷಕ್ಕೆ ಯಶ್ ಮುಂದಿನ ಸಿನಿಮಾ ಸೆಟ್ಟೇರಲಿದೆ.

 

Find Out More:

Related Articles: