ಕೋವಿಡ್ ತಡೆಗೆ ಭಾರತದಲ್ಲಿ ಸಂಶೋಧನೆಯಾದ ಔಷಧಿ ಮಾರುಕಟ್ಟೆಗೆ ಬರುವುದು ಯಾವಾಗ ಗೊತ್ತಾ..?

Soma shekhar

ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಾಲಿಟ್ಟು ವಿಶ್ವದೆಲ್ಲಡೆ ತಲ್ಲಣವನ್ನು ಉಂಟುಮಾಡಿ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದೆ, ಇದರಿಮದಾಗಿ ಅಭಿವೃದ‍್ಧಿಹೊಂದಿದ ದೇಶಗಳ ಆರ್ಥಿಕ ವ್ಯವಸ್ಥೆಗಳು ಸೊರಗಿಹೋಗಿದೆ. ಹಾಗಾಗಿ ಕೊರೋನಾ ವೈರಸ್ ಅನ್ನು ನಿಯಂತ್ರನಕ್ಕೆ ತರುವ ಉದ್ದೇಶದಿಂದ ಪ್ರಪಂಚದ ವಿವಿಧ ದೇಶಗಳು ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಿದ್ದಾರೆ. ಹಾಗೂ ಇನ್ನು ಕೆಲವು ದೇಶಗಳು ಕ್ಲಿನಿಕಲ್ ಟೆಸ್ಟ್ ಪರೀಕ್ಷೆಗಳು ಪಾಸಾಗಿ ಮಾನವನ ಮೇಲೆ ಪ್ರಯೋಗ ಮಾಡಲು ಮುಂದಾಗಿದೆ ಅಂತಹ ದೇಶಗಳಲ್ಲಿ ಭಾರತವೂ ಒಂದು. ಈಗಾಗಲೇ ಭಾರತದಲ್ಲಿ  ಕೊರೋನಾ ವೈರಸ್ ತಡೆಗೆ ಔಷಧಿಯನ್ನು ಸಂಶೋಧಿಸಿದ್ದು ಮಾನವನ ಮೇಲಿನ ಪ್ರಯೋಗಕ್ಕೆ ಮುಂದಾಗಿದೆ.     

 

ಹೌದು ಭಾರತದ ಕೊರೊನಾ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿರುವ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆಯನ್ನು 375 ಜನರ ಮೇಲೆ ಪ್ರಯೋಗಿಸುವ ಹ್ಯೂಮನ್ ಟ್ರಯಲ್ (ಮಾನವ ಪ್ರಯೋಗ) ಶೀಘ್ರ ಆರಂಭವಾಗಲಿದೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಮುನ್ನವೇ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆ ಕೊವ್ಯಾಕ್ಸಿನ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು.

 

ಈ ನಿಟ್ಟಿನಲ್ಲಿ ದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅಹರ್ನಿಷಿ ಕಾರ್ಯೋನ್ಮುಖವಾಗಿತ್ತು. ಅಲ್ಲದೆ, ಬೆಳಗಾವಿ ಸೇರಿದಂತೆ ದೇಶದ 15 ಕೇಂದ್ರಗಳಿಗೆ ಈ ಸಂಬಂಧ ಪ್ರಯೋಗ ನಡೆಸಿ ಅಂತಿಮ ವರದಿ ನೀಡುವಂತೆ ಐಸಿಎಂಆರ್ ಸೂಚಿಸಿತ್ತು.

ಆಗಸ್ಟ್ 15ರೊಳಗೆ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸುವುದು ಅಸಾಧ್ಯ. ಕನಿಷ್ಟ 5 ತಿಂಗಳು ಅಥವಾ ವರ್ಷಾಂತ್ಯದವರೆಗೂ ಸಮಯಾವಕಾಶ ಬೇಕಾಗುತ್ತದೆ ಎಂದು ಬಹುತೇಕ ವೈರಾಣು ತಜ್ಞರು ಮತ್ತು ಸಂಶೋಧಕರು ಅಭಿಪ್ರಾಯಪಟ್ಟು ಐಸಿಎಂಆರ್‍ಗೆ ತಿಳಿಸಿದ್ದರು.

 

ಈ ಹಿನ್ನೆಲೆಯಲ್ಲಿ ಈಗ 365 ರೋಗಿಗಳ ಮೇಲೆ ಹಂತ ಹಂತವಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲು ಐಸಿಎಂಆರ್ ನಿರ್ಧರಿಸಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದ್ದು, ಶೀಘ್ರವೇ 375 ಜನರ ಮೇಲೆ ಅತ್ಯಂತ ಎಚ್ಚರಿಕೆಯಿಂದ ಈ ಲಸಿಕೆ ಪ್ರಯೋಗ ಆರಂಭವಾಗಲಿದೆ.

 

ಈ ಪ್ರಯೋಗದ ವೇಳೆ ಲಸಿಕೆಯ ಸಾಧಕ-ಬಾಧಕ ಮತ್ತು ಅಡ್ಡ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಅತ್ಯಂತ ಸುರಕ್ಷಿತ ಮತ್ತು ನಿಖರವಾದ ಕೊವ್ಯಾಕ್ಸಿನ್ ಲಸಿಕೆಯನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಐಸಿಎಂಆರ್ ಉನ್ನತ ಮೂಲಗಳ ಪ್ರಕಾರ, ಈ ಪ್ರಯೋಗ ಪೂರ್ಣಗೊಂಡು ಪರಿಪೂರ್ಣ ಲಸಿಕೆ ಸಿದ್ಧವಾಗಲು ಕನಿಷ್ಟ 5 ರಿಂದ 6 ತಿಂಗಳು ಬೇಕಾಗುತ್ತದೆ. ಐಸಿಎಂಆರ್‍ನ ಎಲ್ಲ ಶಾಖಾ ಕಚೇರಿಗಳು ಮತ್ತು ಇತರ ಕೇಂದ್ರಗಳಲ್ಲಿ ಅಂತಿಮ ಹಂತದ ಮಾನವ ಪ್ರಯೋಗ ನಡೆಯಲಿದ್ದು, ಇವೆಲ್ಲವುಗಳ ಫಲಿತಾಂಶವನ್ನು ಕ್ರೋಢೀಕರಿಸಿ ಅಂತಿಮವಾಗಿ ಕೊವ್ಯಾಕ್ಸಿನ್ ಸ್ಪಷ್ಟ ರೂಪದ ಲಸಿಕೆ ಲಭ್ಯವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

 

ಈ ನಡುವೆ ಮತ್ತೊಂದು ಪರಿಣಾಮಕಾರಿ ಔಷಧಿ ಎಂದೇ ಪರಿಗಣಿತವಾಗಿರುವ ರೆಮಿಡಿಸಿವಿಯರ್ ಔಷಧಿಯನ್ನು 4800ರೂ.ಗಳಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

 

Find Out More:

Related Articles: