ಕೆಜಿಎಪ್-2 ಚಿತ್ರ ಬಿಡುಗಡೆಗೆ ಪಿಕ್ಸ್ ಆಗಿರುವ ಮುಹೂರ್ತ ಎಂದು ಗೊತ್ತಾ..?

Soma shekhar

ಕೊರೊನಾ ಹಾವಳಿಯಿಂದ ಶೂಟಿಂಗ್​​ ಬಂದ್​ ಆಗಿ ಸೈಲೆಂಟ್​ ಆಗಿ ಕೆಜಿಎಫ್​, ಟೀಂ ಅಭಿಮಾನಿಗಳಿಗೊಂದು ಬ್ರೇಕಿಂಗ್​ ನ್ಯೂಸ್​ ಕೊಟ್ಟಿದೆ. ಜುಲೈ 29ಕ್ಕೆ ಅಧೀರನ ದರ್ಶನವಾಗಲಿದೆ. ಸಂಜಯ್​ ದತ್​ ಹುಟ್ಟುಹಬ್ಬದ ಸಂಭ್ರಮದಲ್ಲೇ ಕೆಜಿಎಫ್​​ ಖಳ ಅಧೀರನ ಫಸ್ಟ್​ ಲುಕ್​ ಪೋಸ್ಟರ್​ ರಿವೀಲ್​ ಆಗಲಿದೆ. ಖುದ್ದು ಚಿತ್ರತಂಡ ಈ ವಿಚಾರವನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ.

 

ಅನ್​ವೀಲಿಂಗ್​ ದಿ ಬ್ರೂಟಾಲಿಟಿ ಅಂತ ಬರೆದು ಸ್ಪೆಷಲ್​ ಪೋಸ್ಟರ್​ ರಿಲೀಸ್ ಮಾಡಿ ಕೆಜಿಎಫ್​ ಟೀಂ. ಕತ್ತಲಲ್ಲಿ ಧಗಧಗಿಸುವ ಜ್ವಾಲೆಯ ಬೆಳಕಿನಲ್ಲಿ ಯುದ್ಧಕ್ಕೆ ಸಿದ್ಧ ಎಂದು ಸಾರುವ ಖಡ್ಗ ಮಿರಿ ಮಿರಿ ಮಿಂಚುತ್ತಿದೆ. ಜುಲೈ 29ರಂದು ಸಂಜಯ್ ದತ್​ ಹುಟ್ಟುಹಬ್ಬ. ಅದೇ ದಿನ ಕ್ರೂರ ಮಾರ್ಗದ ಅನಾವರಣ ಅಂತ ಚಿತ್ರತಂಡ ಹೇಳಿದೆ. ಅರ್ಥಾತ್​ ಅಧೀರನ ಫಸ್ಟ್​ ಲುಕ್​ ರಿವೀಲ್​ ಆಗಲಿದೆ. ಜುಲೈ 29ರಂದು ಸಂಜಯ್ ದತ್​ ಹುಟ್ಟುಹಬ್ಬ. ಅದೇ ದಿನ ಕ್ರೂರ ಮಾರ್ಗದ ಅನಾವರಣ ಅಂತ ಚಿತ್ರತಂಡ ಹೇಳಿದೆ. ಅರ್ಥಾತ್​ ಅಧೀರನ ಫಸ್ಟ್​ ಲುಕ್​ ರಿವೀಲ್​ ಆಗಲಿದೆ.

 

ಕೆಜಿಎಫ್​ ಚಿತ್ರದ ಪ್ರತಿ ಪಾತ್ರವನ್ನ ಸಿಕ್ಕಾಪಟ್ಟೆ ಡಿಫ್​ರೆಂಟ್​ ಆಗಿ ಡಿಸೈನ್​ ಮಾಡಿದ್ದಾರೆ ಪ್ರಶಾಂತ್​ ನೀಲ್​. ಪ್ರತಿ ಪಾತ್ರಕ್ಕೂ ಚಿತ್ರವಿಚಿತ್ರ ವೇಷಭೂಷಣ, ಲುಕ್​ ನೀಡಲಾಗಿದೆ. ಹಾಗಾದ್ರೆ, ಮಾನ್​ಸ್ಟರ್​ ರಾಕಿ ಭಾಯ್​ ಎದುರು ಅಬ್ಬರಿಸುವ ಅಧೀರನ ಲುಕ್​​ ಹೇಗಿರಬಹುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆ ಕುತೂಹಲಕ್ಕೆ ಇನ್ನೆರಡು ದಿನಗಳಲ್ಲಿ ಬ್ರೇಕ್ ಬೀಳಲಿದೆ.

 

ಎಲ್ಲರಿಗೂ ಗೊತ್ತಿರುವಂತೆ ಕೊರೊನ ಸಮಸ್ಯೆ ಶುರುವಾದಾಗಿನಿಂದ ಎಲ್ಲಾ ಸಿನಿಮಾಗಳ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಕೆಜಿಎಫ್​ ಚಾಪ್ಟರ್​-2 ಶೂಟಿಂಗ್​ ಕೂಡ ನಿಂತು ಹೊಗಿತ್ತು. ಅರ್ಧಕ್ಕೆ ನಿಂತಿರುವ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ರು, ಕೆಜಿಎಫ್​ ಟೀಂ, ಸೆಟ್​​ಗೆ ಹೋಗುವ ಸಾಹಸ ಮಾಡಿಲ್ಲ. ಮತ್ತೊಂದ್ಕಡೆ ಸಿನಿಮಾ ರಿಲೀಸ್ ಡೇಟ್​ ಹತ್ತಿರ ಬರ್ತಿದೆ.

 

ಹಾಗಾಗಿ ಹೇಗಾದರೂ ಮಾಡಿ ಶೂಟಿಂಗ್​ ಶುರು ಮಾಡಲು ನಿರ್ಧರಿಸಿದ್ದಾರಂತೆ ಪ್ರಶಾಂತ್​ ನೀಲ್.

ಆಗಸ್ಟ್​ 25ರಿಂದ ಶೂಟಿಂಗ್ ಪುನರಾರಂಭಿಸಲು ಕೆಜಿಎಫ್​ ಟೀಂ, ಪ್ಲಾನ್​ ಮಾಡ್ತಿದೆ. ಮಿನರ್ವ ಮಿಲ್​ನಲ್ಲಿ ಸೆಟ್​ ಹಾಕುವ ಕೆಲಸಕ್ಕ ಚಾಲನೆ ಸಿಕ್ಕಿದೆ ಅನ್ನಲಾಗ್ತಿದೆ. ಅಕ್ಟೋಬರ್​ 23ಕ್ಕೆ ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್​ಗೆ ತೀರ್ಮಾನಿಸಲಾಗಿದೆ. ಹಾಗಾಗಿ ಆದಷ್ಟು ಬೇಗ ಇನ್ನುಳಿದ ಶೂಟಿಂಗ್​ ನಡೆಸಲು ಚಿತ್ರತಂಡ ಮುಂದಾಗಿದೆ. ಇನ್ನು ಲಾಕ್​ಡೌನ್​ ಶುರುವಾದ ದಿನದಿಂದಲೂ ಸಿನಿಮಾ ಪ್ರೀಪ್ರೊಡಕ್ಷನ್​ ವರ್ಕ್​ ನಡೀತಿದ್ದು, ಸಿನಿಮಾವನ್ನ ತಿದ್ದಿ ತೀಡುವ ಕೆಲಸ ಜೋರಾಗಿದೆ.

 

Find Out More:

Related Articles: