ನೀವು ಬಳಸುತ್ತಿರುವ ವಾಟ್ಸಾಪ್ ನಿಜವಾಗಿಯೂ ಸುರಕ್ಷಿತವಾಗಿದೆಯೇ..? ಹಾಗಾದರೆ ಈ ಸ್ಟೋರಿ ನೋಡಿ

Soma shekhar

ಇಂದಿನ ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್ ಬಳಸದೇ ಇರುವವರು ತುಂಬಾ ಕಡಿಮೆ. ಇಂದು ಸ್ಮಾರ್ಟ್ ಪೋನ್ ಉಯೋಗಿಸುವವರು ಪ್ರತಿಯೊಬ್ಬರೂ ಕೂಡ ವಾಟ್ಸ್ ಅನ್ನು ಬಳಸಿಯೇ ಬಳಸುತ್ತಾರೆ. ಆದರೆ ವಾಟ್ಸ್ ಪ್ ಬಳಕೆದಾರರು ಕೇವಲ ವಾಟ್ಸ್ ಸುರಕ್ಷತೆಯ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಹೌದು ವಾಟ್ಸ್ ಪ್ ನಲ್ಲಿ ಸುರಕ್ಷತೆಯ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಿದೆ.  ಅಷ್ಟಕ್ಕೂ ಆ ವಾಟ್ಸಾಪ್ ಎಲ್ಲಿ ಸುರಕ್ಷಿತವಾಗಿಲ್ಲ..?

 

ವಾಟ್ಸಾಪ್ ಬಳಕೆದಾರರೇ. ನೀವು ಉಪಯೋಗಿಸುತ್ತಿರುವ ನಿಮ್ಮ ವಾಟ್ಸಾಪ್ ಸಂಖ್ಯೆ ಎಷ್ಟು ಸೇಫ್ ಅಂತ ನಿಮಗೆ ಗೊತ್ತಾ..? ಇತ್ತೀಚಿನ ವರದಿ ಪ್ರಕಾರ ಎಷ್ಟೋ ವಾಟ್ಸಾಪ್ ಸಂಖ್ಯೆಗಳು ಅಪಾಯದಲ್ಲಿವೆಯಂತೆ. ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಸಲೀಸಾಗಿ ಗೂಗಲ್ ‌ನಲ್ಲಿ ಹುಡುಕ ಬಹುದಾಗಿದೆ‌ಯಂತೆ ಅಷ್ಟೆ ಅಲ್ಲ ಹ್ಯಾಕರ್‌ಗಳು ನಂಬರ್ ಜೊತೆಗೆ ಅನೇಕ ಮಾಹಿತಿಯನ್ನು ತಿಳಿಯಬಹುದಾಗಿದೆ ಎಂದು ಹೇಳಲಾಗುತ್ತಿದೆ.

 

ಹೌದು, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ ದೋಷ ಪತ್ತೆಯಾಗಿದೆ. ಇನ್ನು ಈ ದೋಷವು ವಾಟ್ಸಾಪ್ ನ ಕ್ಲಿಕ್ ಟು ಚಾಟ್ ವೈಶಿಷ್ಟ್ಯದಲ್ಲಿ ಕಂಡುಬಂದಿದೆ ಎಂದು ಅತುಲ್ ಜಯರಾಮ್ ಎಂಬವರು ಹೇಳಿದ್ದಾರೆ. ಇವರೇ ವಾಟ್ಸಾಪ್ ನ ಈ ದೋಷವನ್ನು ಕಂಡುಹಿಡಿದವರು. ಇದರ ಜೊತೆಗೆ ಅವರು ಹೇಳುವ ಪ್ರಕಾರ ವಾಟ್ಸಾಪ್ ಸಂಖ್ಯೆಯ ಹುಡುಕಾಟದಿಂದ ಬಳಕೆದಾರನ ಒಂದಿಷ್ಟು ಗೌಪ್ಯತೆಗಳನ್ನು ತಿಳಿಯಬಹುದಂತೆ.

 

 

 ಸ್ವತಂತ್ರ ಸೈಬರ್ ಸುರಕ್ಷತೆ ಸಂಶೋಧಕ ಅತುಲ್ ಜಯರಾಮ್ ಅವರ ಪ್ರಕಾರ, ಸರಳವಾದ ಗೂಗಲ್ ಹುಡುಕಾಟದ ಮೂಲಕ ಅನೇಕ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆ ಸಿಗುತ್ತಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ವಾಟ್ಸಾಪ್ ವೆಬ್ ಪೋರ್ಟಲ್ನಲ್ಲಿ ಗೌಪ್ಯತೆ ಸಮಸ್ಯೆಯನ್ನು ಕಂಡುಹಿಡಿದಿದ್ದಾರೆ, ಅದು ಸುಮಾರು 29000 - 300000 ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಸರಳ ಪಠ್ಯದಲ್ಲಿ ಇದ್ದು, ಇದನ್ನು ಯಾವುದೇ ಇಂಟರ್ನೆಟ್ ಬಳಕೆದಾರರಿಗೆ ಸುಲಭವಾಗಿ ಸಿಗಲಿದೆ ಅಂತ ತಿಳಿಸಿದ್ದಾರೆ.

 

ಇದು ಸುಲಭವಾಗುವುದು ಅಥವಾ ಸರಳವಾಗಿ ಕಾಣುವ ದತ್ತಾಂಶವಾಗಿದ್ದು ತೆರೆದ ವೆಬ್‌ನಲ್ಲಿ ಪ್ರವೇಶಿಸಬಹುದೆ ಹೊರತು ಡಾರ್ಕ್ ವೆಬ್‌ನಲ್ಲಿ ಅಲ್ಲ' ಎಂದು ಜಯರಾಮ್ ಹೇಳಿದ್ದು, ಇದನ್ನು ಮೊದಲು ಥ್ರೆಟ್‌ಪೋಸ್ಟ್ ವರದಿ ಮಾಡಿದೆ.

 

ಈ ದೋಷದಿಂದಾಗಿ, ಯುಎಸ್, ಯುಕೆ ಮತ್ತು ಭಾರತ ಸೇರಿದಂತೆ ಬಹುತೇಕ ಎಲ್ಲ ದೇಶಗಳ ಬಳಕೆದಾರರು ಪರಿಣಾಮ ಹೊಂದಿದೆ ಅಂತ ಜಯರಾಮ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ವಾಟ್ಸ್‌ಆಯಪ್‌ನ 'ಕ್ಲಿಕ್‌ ಟು ಚಾಟ್‌' ವೈಶಿಷ್ಟ್ಯದಿಂದಾಗಿ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಸಂಶೋಧಕರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

ಈ ಕಾರಣದಿಂದಾಗಿ ಯಾವುದೇ ಸಾಮಾನ್ಯ ಇಂಟರ್ನೆಟ್ ಬಳಕೆದಾರರು ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಸಹ ಹುಡುಕಬಹುದು.  ಇದು ದೊಡ್ಡ ವಿಷಯವಲ್ಲ ಎಂದು ವಾಟ್ಸಾಪ್ ಒಡೆತನದ ಕಂಪನಿ ಫೇಸ್‌ಬುಕ್ ಸ್ಪಷ್ಟಪಡಿಸಿದೆ. ಗೂಗಲ್ ಹುಡುಕಾಟವು ಬಳಕೆದಾರರು ತಮ್ಮನ್ನು ಸಾರ್ವಜನಿಕವಾಗಿಸಲು ಆಯ್ಕೆ ಮಾಡಿದ ಫಲಿತಾಂಶಗಳನ್ನು ಹೊಂದಿದೆ.

 

ಗೂಗಲ್‌ನಲ್ಲಿ ಸೂಚ್ಯಂಕವಾಗಿರುವ ಸುಮಾರು 3 ಲಕ್ಷ ಸಂಖ್ಯೆಗಳನ್ನು ಅತುಲ್ ಜಯರಾಮ್ ಕಂಡು ಹಿಡಿದಿದ್ದಾರಂತೆ. ಇನ್ನು ಹ್ಯಾಕರ್ ಗಳು ನಂಬರ್ ತೆಗೆದುಕೊಂಡು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ.

 

Find Out More:

Related Articles: