ಮನೆಯಿಂದ ಕೆಲಸ ಮಾಡುವ ಗೂಗಲ್ ಸಿಬ್ಬಂದಿಗಳಿಗೆ ಗೂಗಲ್ ಸಂಸ್ಥೆ ನೀಡಿದ ಹಣ ಗೊತ್ತಾ..?
ಕೊರೋನ ವೈರಸ್ ಇಂದಾಗಿ ಅನೇಕ ಕಂಪನಿಗಳು ಸಾಕಷ್ಟು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸವನ್ನು ಮಾಡುವಂತೆ ಸೂಚನೆಯನ್ನು ನೀಡಿದೆ. ಇದರ ಜೊತೆಗೆ ಸಾಕಷ್ಟು ಕಂಪನಿಗಳು ಅದೆಷ್ಟೋ ಕೆಲಸಗಾರರನ್ನು ಕೆಲಸದಿಂದಲೇ ತೆಗೆದು ಹಾಕಿದೆ. ಆದರೆ ಗೂಗಲ್ ಸಂಸ್ಥೆ ತನ್ನ ಸಾಕಷ್ಟು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ನೆರವಾಗುವ ದೃಷ್ಟಿಯಿಂದ ಹಣವನ್ನು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿದೆ.
ಹೌದು ಗೂಗಲ್ ನಿಂದ ಜುಲೈ 6ನೇ ತಾರೀಕು ದಿನಾಂಕ ನಿಗದಿ ಮಾಡಿದ್ದು, ಹಂತ ಹಂತವಾಗಿ ಉದ್ಯೋಗಿಗಳು ಕಚೇರಿಗೆ ಹಿಂತಿರುವುದಕ್ಕೆ ಈ ದಿನವನ್ನು ಗೊತ್ತು ಮಾಡಿಟ್ಟುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಪ್ರತಿ ಉದ್ಯೋಗಿಗೆ ತಲಾ $ 1000 (ಭಾರತದ ರುಪಾಯಿಗಳಲ್ಲಿ 75,000) ನೀಡಲಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವುದರಿಂದ ಉದ್ಯೋಗಿಗಳ ಅಗತ್ಯ ವೆಚ್ಚಗಳು ಮತ್ತು ಕಚೇರಿ ಪೀಠೋಪಕರಣಗಳಿಗಾಗಿ ಈ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಜುಲೈ 6ನೇ ತಾರೀಕಿನಿಂದ ಹೆಚ್ಚು ನಗರಗಳಲ್ಲಿ, ಹೆಚ್ಚು ಕಟ್ಟಡಗಳನ್ನು ಮತ್ತೆ ತೆರೆಯಲಾಗುವುದು ಎಂದು ಆಲ್ಫಾಬೆಟ್ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿ ಅವಕಾಶ ಮಾಡಿಕೊಟ್ಟರೆ ಸೆಪ್ಟೆಂಬರ್ ಹೊತ್ತಿಗೆ ಒಟ್ಟು ಸಾಮರ್ಥ್ಯದ ಶೇಕಡಾ 30ರಷ್ಟು ಮಂದಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ನಮ್ಮ ಅಂದಾಜಿನ ಪ್ರಕಾರ, ಗೂಗಲ್ ಉದ್ಯೋಗಿಗಳು ಈ ವರ್ಷದ ಇನ್ನೂ ಬಹಳ ಸಮಯ ಮನೆಗಳಿಂದ ಕೆಲಸ ಮಾಡಬೇಕಾಗಬಹುದು. ಆದ್ದರಿಂದ 1,000 ಅಮೆರಿಕನ್ ಡಾಲರ್ ಅಥವಾ ಆಯಾ ದೇಶದಲ್ಲಿ ಆ ಮೊತ್ತಕ್ಕೆ ಸರಿ ಸಮನಾಗಿ ಭತ್ಯೆ ನೀಡಲಾಗುವುದು. ಅದನ್ನು ಅಗತ್ಯ ವೆಚ್ಚಗಳು ಮತ್ತು ಪೀಠೋಪಕರಣಕ್ಕೆ ಬಳಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷದಲ್ಲಿ ಕಚೇರಿಯಲ್ಲಿ ಬಂದು ಕೆಲಸ ಮಾಡಬೇಕು ಎನ್ನುವಂಥ ಗೂಗಲ್ ಉದ್ಯೋಗಿಗಳ ಸಂಖ್ಯೆಯ ಅಗತ್ಯ ಕಡಿಮೆ ಇದೆ. ಆ ರೀತಿ ಯಾವ ಉದ್ಯೋಗಿ ಕಚೇರಿಗೆ ಬರಬೇಕು ಅನ್ನೋದನ್ನು ಆಯಾ ಮ್ಯಾನೇಜರ್ ಜೂನ್ 10ನೇ ತಾರೀಕಿನೊಳಗೆ ತಿಳಿಸುತ್ತಾರೆ. ಇತರರಿಗೆ ಕಚೇರಿಗೆ ಬರುವ ವಿಚಾರಕ್ಕೆ ಅವರ ಆಯ್ಕೆಗೆ ಬಿಟ್ಟದ್ದು. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಿದ್ದರೆ ಅದನ್ನೇ ಮುಂದುವರಿಸಿ ಎಂದು ಸಲಹೆ ಮಾಡುತ್ತೇವೆ ಎಂದು ಪಿಚೈ ಹೇಳಿದ್ದಾರೆ.
ಇದಕ್ಕೂ ಮುನ್ನ ಗೂಗಲ್ ನಿಂದ ಜೂನ್ 1ನೇ ತಾರೀಕಿನವರೆಗೆ ಮಾತ್ರ ವರ್ಕ್ ಫ್ರಮ್ ಹೋಮ್ ನಿಯಮ ರೂಪಿಸಲಾಗಿತ್ತು. ಇದೀಗ ವಿಸ್ತರಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಘೋಷಣೆ ಮಾಡಲಾಗಿದೆ.